ಮಗನನ್ನೆ ಮದುವೆಯಾದ 53 ವರ್ಷದ ತಾಯಿ, ರಷ್ಯಾದಲ್ಲಿ ನಡೆದ ವಿಚಿತ್ರ ಘಟನೆ….!

Follow Us :

ಪ್ರೀತಿಗೆ ಕಣ್ಣಿಲ್ಲ, ಜಾತಿ ಬೇದ ಭಾವವಿಲ್ಲ ಎಂಬುದನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಅಂತಹ ಅನೇಕ ಪ್ರಕರಣಗಳನ್ನು ಸಹ ಕಂಡಿರುತ್ತೇವೆ. ಅಂತಹುದೇ ವಿಚಿತ್ರ ಘಟನೆಯೊಂದು ರಷ್ಯಾದಲ್ಲಿ ನಡೆದಿದೆ. ರಷ್ಯಾದಲ್ಲಿ ತಾಯಿಯೊಬ್ಬರು ತಾನು ಪ್ರೀತಿಯಿಂದ ಸಾಕಿದ ಮಗನನ್ನೆ ಮದುವೆಯಾಗಿದ್ದಾರೆ. ಈ ಸುದ್ದಿ ಇದೀಗ ರಷ್ಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ರಷ್ಯಾದಲ್ಲಿ ಮಹಿಳೆಯೊಬ್ಬರು ತಾನು ಪ್ರೀತಿಯಿಂದ ಸಾಕಿದಂತಹ ಮಗನನ್ನೆ ವಿವಾಹವಾದ ಘಟನೆಯೊಂದು ನಡೆದಿದೆ. 53 ವರ್ಷ ವಯಸ್ಸಿನ ಸಂಗೀತಗಾರ್ತಿಯಾಗಿರುವ ಅಸಿಲು ಚಿಜೆವ್ಸ್ಕ ಮಿಂಗಾಲಿಮ್ ಎಂಬಾಕೆ ತಾನು ಸಾಕಿದಂತಹ 31 ವರ್ಷ ವಯಸ್ಸಿನ ಮಲಮಗ ಡೇನಿಯಲ್ ಚಿಜೆವ್ಸ್ಕಿ ಯನ್ನು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ರಷ್ಯಾದಲ್ಲಿರುವ ರಿಪಬ್ಲಿಕ್ ಆಫ್ ಟಾಟರ್ಸ್ತಾನ್ ಎಂಬಲ್ಲಿರುವ ರೆಸ್ಟೊರೆಂಟ್ ಒಂದರಲ್ಲಿ ಮದುವೆಯಾಗಿ, ಒಟ್ಟಾಗಿ ಬಾಳುವುದಾಗಿ ಹಾಗೂ ಸಾಯುವವರೆಗೂ ಜೊತೆಯಾಗಿರುವುದಾಗಿ ಪ್ರಮಾಣ ಮಾಡುವ ಮೂಲಕ ಮದುವೆಯಾಗಿದ್ದಾರೆ. ಇನ್ನೂ ಈ ಮದುವೆಯ ಬಗ್ಗೆ ರಷ್ಯಾದ ಮಕ್ಕಳ ಕಲ್ಯಾಣ ಇಲಾಖೆ ಕೂಡ ಶಾಕ್ ಆಗಿದೆ ಎಂದು ತಿಳಿದುಬಂದಿದೆ.

ರಷ್ಯಾದಲ್ಲಿನ ಕೆಲವೊಂದು ಮಾದ್ಯಮಗಳು ಮಾಡಿದ ವರದಿಯಂತೆ, ಮಿಂಗಲಿಮ್ ಎಂಬಾಕೆ ಡೇನಿಯಲ್ ಗೆ 13 ವರ್ಷ ವಯಸ್ಸು ಇದ್ದಾಗಿನಿಂದ ಸಾಕಿ ಬೆಳೆಸಿದ್ದಾರೆ. ಅನಾಥಾಶ್ರಮದಲ್ಲಿದ್ದ ಡೇನಿಯಲ್ ನನ್ನು ದತ್ತು ಪಡೆದುಕೊಂಡು ಮಗನಂತೆ ಸಾಕಿದ್ದರು. ಜೊತೆಗೆ ಡೇನಿಯಕ್ ಗೆ ಮನೆಯಲ್ಲಿಯೇ ಸಂಗೀತ ಕಲಿಸುತ್ತಿದ್ದರು. ಇದೀಗ ಸುಮಾರು ವರ್ಷಗಳಿಂದ ಮಗನಂತೆ ಸಾಕಿದ ಡೇನಿಯಲ್ ನನ್ನು ಮದುವೆಯಾದ ಮಿಂಗಲಿಮ್ ಗೆ ಅನೇಕ ಸಮಸ್ಯೆಗಳು ಎದುರಾಗಿದೆ ಎನ್ನಲಾಗಿದೆ. ರಷ್ಯಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಕೆಯ ಮನೆಯನ್ನು ವಶಕ್ಕೆ ಪಡೆದು ಸೀಜ್ ಮಾಡಿದ್ದಾರಂತೆ. ಜತೆಗೆ ಆಕೆ ದತ್ತು ಪಡೆದಿದ್ದ ಕೆಲವು ಮಕ್ಕಳನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರಂತೆ. ಈ ಪೈಕಿ ನಾಲ್ಕು ಮಂದಿ ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು ಇತ್ತಂತೆ. ತಾನು ದತ್ತು ಪಡೆದು ಬೆಳೆಸಿದ್ದ ಮಗನನ್ನೆ ಮದುವೆಯಾಗಿರುವ ಕಾರಣದಿಂದ ಆಕೆಯ ಉದ್ದೇಶ ಏನು ಎಂಬುದು ತಿಳಿದಿದೆ. ಆದ್ದರಿಂದ ಆಕೆ ಮಕ್ಕಳನ್ನು ಸರಿಯಾಗಿ ಬೆಳೆಸುವುದಿಲ್ಲ ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಬಗ್ಗೆ ಮಿಂಗಲಿಮ್ ಸಹ ರಿಯಾಕ್ಟ್ ಆಗಿದ್ದಾರಂತೆ. ಡೇನಿಯಲ್ ನನ್ನು ಮನೆಗೆ ಕರೆತಂದಾಗಲೇ ಆತನೊಂದಿಗೆ ರೊಮ್ಯಾಂಟಿಕ್ ಸಂಬಂಧ ಬೆಳೆದಿತ್ತು. ನಮ್ಮ ಸಂಬಂಧ ಗಟ್ಟಿಯಾದದು. ನಾವಿಬ್ಬರು ಬೇರೆಯಾಗಿ ಬದುಕೋಕೆ ಸಾಧ್ಯವೇ ಇಲ್ಲ. ನಮ್ಮಿಬ್ಬರ ಯೋಚನೆಗಳೂ ಸಹ ಹೊಂದಾಣಿಕೆಯಾಗಿದೆ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಮಿಂಗಲಮ್ ಟಾಟರ್ಸ್ತಾನ್ ನಿಂದ ಹೊರಬರಲು ತೀರ್ಮಾನ ಸಹ ಮಾಡಿದ್ದಾರಂತೆ.