ಮಾಜಿ ಸಂಸದ ಸುಬ್ರಮಣ್ಯ ಸ್ವಾಮಿಯವರಿಗೆ ಕೌಂಟರ್‍ ಕೊಟ್ಟ ಕಂಗನಾ, ಹೆಂಗಸರು ಅದಕ್ಕಾಗಿ ಮಾತ್ರವಲ್ಲ ಎಂದು ಫೈರ್‍ ಆದ ಕಂಗನಾ…..!

Follow Us :

ಬಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಭಾರಿ ಕ್ರೇಜ್ ಪಡೆದುಕೊಂಡು ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿರುವ ನಟಿ ಕಂಗನಾ ಯಾವುದೇ ವಿಚಾರವಿದ್ದರೂ ಸಹ ನೇರವಾಗಿ ಮಾತನಾಡುವಂತಹ ಸ್ವಭಾವ ಹೊಂದಿದ್ದಾರೆ. ಈ ಕಾರಣದಿಂದ ಆಕೆ ಅನೇಕ ವಿವಾದಗಳಿಗೆ ಗುರಿಯಾಗುತ್ತಿರುತ್ತಾರೆ. ಬಾಲಿವುಡ್ ಸ್ಟಾರ್‍ ನಟರೂ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಸದಾ ಒಂದಲ್ಲ ಒಂದು ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಇದೀಗ ಆಕೆ ಮಾಜಿ ಸಂಸದ ಸುಬ್ರಮಣ್ಯಸ್ವಾಮಿಯವರು ಮಾಡಿದ ಕಾಮೆಂಟ್ ಗೆ ಟಾಂಗ್ ಕೊಟ್ಟಿದ್ದಾರೆ. ಆಕೆಯ ಕಾಮೆಂಟ್ಸ್ ವೈರಲ್ ಆಗುತ್ತಿವೆ.

ಬಾಲಿವುಡ್ ಸ್ಟಾರ್‍ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಜೊತೆಗೆ ರಾಜಕೀಯ ನಾಯಕರನ್ನೂ ಸಹ ಆಕೆ ವಿಮರ್ಶೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಕಾಂಟ್ರವರ್ಸಿ ಕ್ವೀನ್ ಎಂತಲೂ ಕರೆಯುತ್ತಾರೆ. ವಿವಾದಗಳಿಗೆ ಕೇರ್‍ ಆಫ್ ಅಡ್ರೆಸ್ ಎಂದರೇ ಕಂಗನಾ ರಾನೌತ್ ಎಂದು ಹೇಳಬಹುದು. ದೊಡ್ಡ ಸ್ಟಾರ್‍ ಗಳಾಗಲಿ, ಅಥವಾ ದೊಡ್ಡ ರಾಜಕಾರಣಿಗಳಾಗಲಿ ನೇರವಾಗಿ ಅವರ ಮೇಲೆ ಆರೋಪಗಳನ್ನು ಮಾಡಿಬಿಡುತ್ತಾರೆ. ಅವರನ್ನು ಎದುರಿಸಿ ಸಹ ನಿಲ್ಲುತ್ತಾರೆ. ಇಂತಹ ಅನೇಕ ಕಾರಣಗಳಿಂದ ಆಕೆ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದರು. ಬಾಲಿವುಡ್ ಯಂಗ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಬಾಲಿವುಡ್ ಮಾಫಿಯಾ ಕಾರಣ, ಆತನ ಅವಕಾಶಗಳನ್ನು ಕಿತ್ತುಕೊಂಡು ಆತನಿಗೆ ಮಾನಸಿಕ ಹಿಂಸೆ ನೀಡಿದ್ದರು ಎಂದೂ ಸಹ ಆ ಸಮಯದಲ್ಲಿ ಉದ್ಯಮ ನಡೆಸಿದ್ದರು.

ನಟಿ ಕಂಗನಾ ಇತ್ತೀಚಿಗಷ್ಟೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ರಾವಣ ದಹನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಾಜರಾಗಿದ್ದರು. ರಾವಣ ದಹನ ಮಾಡಿದ ಮೊದಲ ಮಹಿಳೆಯಾಗಿ ರೆಕಾರ್ಡ್ ಸಹ ಸೃಷ್ಟಿಸಿದ್ದರು. ಇದಕ್ಕಾಗಿ ಓರ್ವ ನೆಟ್ಟಿಗ ಈ ಹಿಂದೆ ಕಂಗನಾ ಬಿಕಿನಿ ಧರಿಸಿದ ಪೊಟೋ ಶೇರ್‍ ಮಾಡಿ, ಮೋದಿ ಸರ್ಕಾರವನ್ನು ರಂಜಿಸುತ್ತಿರುವ ಲೇಡಿ ಎಂದು ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಬಿಜೆಪಿ ಪಕ್ಷದ ಮಾಜಿ ಸಂಸದ ಸುಬ್ರಮಣ್ಯಸ್ವಾಮಿ ಸಹ ರಿಯಾಕ್ಟ್ ಆಗಿದ್ದು, ಕೆಲವೊಂದು ಕಾಮೆಂಟ್ ಮಾಡಿದ್ದರು. ಕಂಗನಾಗೆ ರಾವಣ ದಹಿಸುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್ ಗಳಿಗೆ ಕಂಗನಾ ಫೈರ್‍ ಆಗಿದ್ದಾರೆ.

ತಾನು ತನ್ನ ಶರೀರವನ್ನು ಬಳಸಿಕೊಂಡು ರಾಜಕೀಯಗಳಲ್ಲಿ ಬರಲು ಸಿದ್ದವಾಗುತ್ತಿದ್ದಾರೆ ಎಂದು ಹೇಳಿಕೋಳ್ಳುತ್ತಿದ್ದಾರೆ ಎಂದು ಆಕೆ ಫೈರ್‍ ಆಗಿದ್ದಾರೆ. ಸ್ವಿಮ್ ಸ್ಯೂಟ್ ಪೊಟೋ ಬಗ್ಗೆ ಅಷ್ಟೊಂದು ಕಡಿಮೆಯಾಗಿ ಮಾತನಾಡಿದ್ದಾರೆ ಎಂದರೇ, ಆತನ ಸ್ವಭಾವ ಎಂತಹುದು ಎಂದು ತಿಳಿಯುತ್ತದೆ. ಮಹಿಳೆಯರ ಬಗ್ಗೆ ಆತನ ಬುದ್ದಿ ಎಂತಹುದು. ತನ್ನ ಸ್ಥಾನದಲ್ಲಿ ಓರ್ವ ಯುವಕ ಇದಿದ್ದರೇ ಆ ರೀತಿ ಮಾತನಾಡುತ್ತಿದ್ದರೇ ಎಂದು ಪ್ರಶ್ನೆ ಮಾಡಿದ್ದಾರೆ. ಮಹಿಳೆಯರು ಕೇವಲ ಸೆಕ್ಸ್ ಗಾಗಿ ಮಾತ್ರವಲ್ಲ. ಅವರಿಗೂ ಸಹ ಮೆದುಳು, ಹೃದಯ, ಕೈ, ಪಾದಗಳು ಸೇರಿದಂತೆ ಬೇರೆ ಭಾಗಗಳೂ ಸಹ ಇರುತ್ತದೆ. ಪುರುಷರಂತೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಇರುವಂತಹ ಎಲ್ಲಾ ಅರ್ಹತೆಗಳು ಮಹಿಳೆಯರಿಗೂ ಸಹ ಇರುತ್ತೆ ಎಂದು ಕೌಂಟರ್‍ ಕೊಟ್ಟಿದ್ದಾರೆ. ಇನ್ನೂ ಕಂಗನಾ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.