News

ಸರ್ಕಾರಿ ನೌಕರರು ಎರಡನೇ ಮದುವೆಯಾಗಲು ಅನುಮತಿ ಕಡ್ಡಾಯ ಮಾಡಿದ ಆ ರಾಜ್ಯ ಸರ್ಕಾರ…..!

ಇನ್ನು ಮುಂದೆ ಸರ್ಕಾರಿ ನೌಕರರು ಎರಡನೇ ಮದುವೆಯಾಗಲು ಅಥವಾ ಬಹುಪತ್ನಿತ್ವ ಪಾಲನೆ ಮಾಡಲು ಕಡ್ಡಾಯವಾಗಿ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕೆಂದು ರಾಜ್ಯ ಸರ್ಕಾರ ಜ್ಞಾಪನಾ ಪತ್ರ ಹೊರಡಿಸಿದೆ. ಅಷ್ಟಕ್ಕೂ ಎರಡನೇ ಮದುವೆಗೆ ಅನುಮತಿ ಕಡ್ಡಾಯ ಎಂದು ಹೇಳಿದ ರಾಜ್ಯ ಬೇರೆ ಯಾವುದೂ ಅಲ್ಲ ಅಸ್ಸಾಂ ರಾಜ್ಯ. ಹೌದು ಅಸ್ಸಾಂ ರಾಜ್ಯ ಸರ್ಕಾರ ಹೊರ ಜ್ಞಾಪನ ಹೊರಡಿಸಿದ್ದು, ಅದರಂತೆ ಸರ್ಕಾರಿ ನೌಕರ ಎರಡನೇ ಮದುವೆಯಾಗಲು ಅನುಮತಿ ಪಡೆಯುವುದು ಕಡ್ಡಾಯವಂತೆ.

ಅಸ್ಸಾಂ ರಾಜ್ಯದಲ್ಲಿ ಬಹುಪತ್ನಿತ್ವವನ್ನು ನಿಷೇಧ ಮಾಡಲು ಕಾನೂನನ್ನು ತರಲು ಮುಂದಾಗಿದ್ದು, ಆ ಮೂಲಕ ನಾಲ್ಕು ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಶಾಕ್ ನೀಡಿದೆ. ಸುಮಾರು ವರ್ಷಗಳ ಹಿಂದೆ ಸ್ಥಾಪಿಸಲಾದ ನಿಯಮವನ್ನು ಮತ್ತೆ ಜಾರಿ ಮಾಡಿದೆ. ವೈಯುಕ್ತಿಕ ಕಾನೂನಗಳಡಿಯಲ್ಲಿ ಅನುಮತಿಯಿದ್ದರೂ ಸಹ ಸರ್ಕಾರದ ಅನುಮೋದನೆಯಿಲ್ಲದೇ ಮೊದಲನೇ ಪತ್ನಿ ಜೀವಂತವಾಗಿದ್ದರೇ ಎರಡನೇ ಮದುವೆಯಾಗಲು ಸರ್ಕಾರಿ ನೌಕರರಿಗೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದೆ. ಒಂದು ವೇಳೆ ಈ ನಿಯಮ ಮೀರಿದರೇ ಕಡ್ಡಾಯ ನಿವೃತ್ತಿ ಸೇರಿದಂತೆ ದೊಡ್ಡ ಮೊತ್ತದ ದಂಡ ಸಹ ವಿಧಿಸಲಾಗುತ್ತದೆ ಎಂದು ಅಸ್ಸಾಂ ರಾಜ್ಯದ ವೈಯುಕ್ತಿಕ ಇಲಾಖೆಯರು ಅ.20 ರಂದು ಜ್ಞಾಪನ ಪತ್ರ ಹೊರಡಿಸಿದೆ ಎಂದು ತಿಳಿದುಬಂದಿದೆ.

ಅಸ್ಸಾಂ ಸರ್ಕಾರ ಹೊರಡಿಸಿದ ಜ್ಞಾಪನಾ ಪತ್ರದಲ್ಲಿರುವಂತೆ ಅಸ್ಸಾಂ ನಾಗರೀಕ ಸೇವೆಗಳ ನಿಯಮಗಳು, 1965ರ ನಿಯಮ 26ರಂತೆ ಹೆಂಡತಿ ಜೀವಂತವಾಗಿರುವಾಗ ಯಾವುದೇ ಸರ್ಕಾರಿ ನೌಕರರು ಎರಡನೇ ಮದುವೆಯಾಗಲು ಅನುಮತಿ ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮ ಉಲ್ಲಂಘನೆ ಮಾಡಿದರೇ ಅಂತಹ ನೌಕರನ ವಿರುದ್ದ ಕಾನೂನು ರೀತ್ಯ ಕ್ರಮ ಹಾಗೂ ನೌಕರಿಯಿಂದ ಕಡ್ಡಾಯ ನಿವೃತ್ತಿ ಕ್ರಮ ತೆಗೆದುಕೊಳ್ಳಲಾಗುತ್ತದೆಯಂತೆ. ಈ ನೀಯಮ ಪುರುಷ ನೌಕರರ ಜೊತೆಗೆ ಮಹಿಳಾ ನೌಕರರಿಗೂ ಸಹ ಅನ್ವಿಸುತ್ತದೆ ಎಂದು ಹೇಳಲಾಗಿದೆ.

Most Popular

To Top