ಇನ್ನು ಮುಂದೆ ಕಂಡಿಷನ್ಸ್ ಅಪ್ಲೆ ಎಂದ ಯಂಗ್ ಬ್ಯೂಟಿ ಶ್ರೀಲೀಲಾ, ತಾಯಿಗೆ ಕೊಟ್ಟ ಮಾತಿಗಾಗಿ ಸಂಚಲನಾತ್ಮಕ ನಿರ್ಣಯ…..!

Follow Us :

ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತೆಲುಗಿನ ಧಮಾಕ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಇದೀಗ ಆಕೆಗೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಹರಿದು ಬರುತ್ತಿವೆ. ಕಮರ್ಷಿಯಲ್ ಸಿನೆಮಾಗಳಲ್ಲೂ ಶ್ರೀಲೀಲಾ ಮೊದಲ ಆಯ್ಕೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಈಕೆ ಇದೀಗ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಆಕೆ ತಮ್ಮ ತಾಯಿಗೆ ಕೊಟ್ಟ ಮಾತಿಗಾಗಿ ಸಂಚಲನಾತ್ಮಕ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಮುಂದಿನ ಸಿನೆಮಾಗಳಿಗೆ ಕೆಲವೊಂದು ಕಂಡಿಷನ್ಸ್ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸೌತ್ ಸಿನಿರಂಗದಲ್ಲಿ ಕನ್ನಡದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ ಎನ್ನಬಹುದಾಗಿದೆ. ಈ ಸಾಲಿಗೆ ಯಂಗ್ ನಟಿ ಶ್ರೀಲೀಲಾ ಸಹ ಸೇರುತ್ತಾರೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಇತ್ತೀಚಿಗೆ ತೆರೆಕಂಡ ಧಮಕಾ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಸೀನಿಯರ್‍ ಜೂನಿಯರ್‍ ಎಂಬುದಿಲ್ಲದೇ ಬಂದಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಭಾರಿ ಬೇಡಿಕೆ ಪಡೆದುಕೊಂಡ ಈಕೆ ಹೈ ಎನರ್ಜಿಯೊಂದಿಗೆ ನೃತ್ಯ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಇನ್ನೂ ಧಮಾಕಾ ಸಿನೆಮಾದ ಬಳಿಕ ಶ್ರೀಲೀಲಾ ಮತಷ್ಟು ಬೇಡಿಕೆಯನ್ನು ಪಡೆದುಕೊಂಡರು. ಇದೀಗ ಆಕೆಯಲ್ಲಿ ಬಿಗ್ ಪ್ರಾಜೆಕ್ಟ್ ಗಳೂ ಸಹ ಇವೆ.

ಇದೀಗ ಶ್ರೀಲೀಲಾ ರವರಿಗೆ ಸಂಬಂಧಿಸಿದ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಕೆ ತಮ್ಮ ತಾಯಿಗೆ ಕೊಟ್ಟ ಮಾತಿನ ಕಾರಣದಿಂದ ಆಕೆ ಕೆಲವೊಂದು ಸಂಚಲನಾತ್ಮಕ ನಿರ್ಣಯಗಳನ್ನು ತೆಗೆದುಕೊಂಡಿದ್ದಾರಂತೆ. ತಮ್ಮ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ಸೀನ್ಸ್, ಲಿಪ್ ಲಾಕ್ ಸೀನ್ಸ್ ಗಳಲ್ಲಿ ನಟಿಸುವುದಿಲ್ಲ ಎಂದು ತನ್ನ ತಾಯಿಗೆ ಮಾತು ಕೊಟ್ಟಿದ್ದಾರಂತೆ. ಈ ಹಿಂದೆ ಅಂತಹ ಸನ್ನಿವೇಶಗಳಲ್ಲಿ ನಟಿಸಿದ ಕಾರಣದಿಂದ ಶ್ರೀಲೀಲಾ ಬಗ್ಗೆ ಅನೇಕ ಟ್ರೋಲ್ಸ್ ಸಹ ಬಂದಿತ್ತಂತೆ. ಈ ಕಾರಣದಿಂದ ತನ್ನ ತಾಯಿ ಆಕೆಯ ಭವಿಷ್ಯತ್ ಬಗ್ಗೆ  ಭಯಪಟ್ಟಿದ್ದಾರೆ. ಈ ಕಾರಣದಿಂದ ಕಿಸ್, ಬೆಡ್ ಸೀನ್ಸ್ ಗಳಲ್ಲಿ ನಟಿಸುವುದಿಲ್ಲ ಎಂದು ತಾಯಿಗೆ ಮಾತು ಕೊಟ್ಟಿದ್ದಾರಂತೆ. ಈ ಕಾರಣದಿಂದ ಮುಂದಿನ ಸಿನೆಮಾಗಳಲ್ಲಿ ಶ್ರೀಲೀಲಾ ಕಂಡಿಷನ್ಸ್ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಸುಳ್ಳು ಎಂಬುದು ತಿಳಿಯದು ಸುದ್ದಿ ಮಾತ್ರ ವೈರಲ್ ಆಗುತ್ತಿದೆ.

ಕನ್ನಡ ಮೂಲದ ಶ್ರೀಲೀಲಾ ಇದೀಗ ಸೌತ್ ಸಿನಿರಂಗದಲ್ಲಿ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಆಕೆಯ ಕೈಯಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿವೆ. ಮಹೇಶ್ ಬಾಬು ಜೊತೆಗೆ SSMB28, ಪವನ್ ಕಲ್ಯಾಣ್ ಜೊತೆಗೆ ಉಸ್ತಾದ್ ಭಗತ್ ಸಿಂಗ್, ಬಾಲಕೃಷ್ಣರವರ NBK108 ಸೇರಿದಂತೆ ಕನ್ನಡದಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.