Film News

ಬಾಲಿವುಡ್ ಗಿಂತ ಸೌತ್ ಸಿನಿರಂಗದಲ್ಲೇ ಹೆಚ್ಚು ನೆಪೊಟಿಸಂ ಇದೆ ಎಂದ ಯಂಗ್ ಬ್ಯೂಟಿ ಅವಿಕಾ ಗೋರ್…!

ಬಾಲನಟಿಯಾಗಿ ಆಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಯಂಗ್ ಬ್ಯೂಟಿ ಅವಿಕಾ ಗೋರ್‍ ಕಿರುತೆರೆಯಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರು.  ಚಿನ್ನಾರಿ ಪೆಳ್ಳಿಕೂತೂರು ಎಂಬ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಸಹ ಅಭಿಮಾನಿಗಳನ್ನು ಪಡೆದುಕೊಂಡರು. ಇನ್ನೂ ಈ ಸೀರಿಯಲ್ ನಲ್ಲಿ ಅನೇಕ ಪಾತ್ರಗಳಲ್ಲಿ ಅವಿಕಾ ಕಾಣಿಸಿಕೊಂಡರು. ಉಯ್ಯಾಲಾ ಜಂಪಾಲ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡು ನಟಿಯಾಗಿ ಫೇಮ್ ಪಡೆದುಕೊಂಡರು. ಇದೀಗ ಅವಿಕಾ ಗೋರ್‍ ನೆಪೋಟಿಸಂ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಯಂಗ್ ಬ್ಯೂಟಿ ಅವಿಕಾ ಗೋರ್‍ ಚಿನ್ನಾರಿ ಪೆಳ್ಳಿ ಕೂತೂರು, ಬಾಲಿಕಾ ವಧು ಎಂಬ ಸೀರಿಯಲ್ ಗಳ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಜೊತೆಗೆ ಹಿಂದಿಯಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಬಳಿಕ ಆಕೆ ಉಯ್ಯಾಲ ಜಂಪಾಲ ಎಂಬ ತೆಲುಗು ಸಿನೆಮಾದ ಮೂಲಕ ಹಿರೋಯಿನ್ ಆಗಿ ಪರಿಚಯವಾದರು. ಈ ಸಿನೆಮಾದ ಮೂಲಕ ಅನೇಕ ಯುವಕರ ಕ್ರಷ್ ಆದರು, ಒಳ್ಳೆಯ ಕ್ರೇಜ್ ಸಹ ಪಡೆದುಕೊಂಡರು. ಸದ್ಯ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಸೌತ್ ಸಿನಿರಂಗದಲ್ಲಿನ ನೆಪೊಟೀಸಂ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಹೇಳಿಕೆಗಳು ಇದೀಗ ಹಾಟ್ ಟಾಪಿಕ್ ಆಗಿದೆ.

ನಟಿ ಅವಿಕಾ ಗೋರ್‍ ಇತ್ತಿಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಸಿನಿರಂಗದಲ್ಲಿನ ನೆಪೊಟೀಸಂ ಬಗ್ಗೆ ಕಾಮೆಂಟ್ಸ್ ಮಾಡಿದ್ದಾರೆ. ನಾರ್ತ್ ಸಿನಿರಂಗದಲ್ಲಿ ಹೆಚ್ಚು ನೆಪೊಟೀಸಂ ಇದೆ ಎಂದು ಹೇಳಲಾಗುತ್ತದೆ. ಆದರೆ ಅಲ್ಲಿಗಿಂತಲೂ ಸೌತ್ ನಲ್ಲಿ ಹೆಚ್ಚು ನೆಪೊಟೀಸಂ ಇದೆ. ದಕ್ಷಿಣ ಸಿನಿರಂಗ ಬಂಧು ಪ್ರೀತಿಯಿಂದ ಮುಳುಗಿದೆ ಎಂದು ಆಕೆ ಹೇಳಿದ್ದಾರೆ. ಇದೀಗ ಅವಿಕಾ ನೀಡಿದ ಈ ಹೇಳಿಕೆಗಳು ಸಖತ್ ವೈರಲ್ ಆಗುತ್ತಿದ್ದು, ಹಾಟ್ ಟಾಪಿಕ್ ಆಗಿದೆ. ಈ ಹಿಂದೆ ಸಹ ಅನೇಕರು ನೆಪೊಟೀಸಂ ಬಗ್ಗೆ ಮಾತನಾಡಿದ್ದರು. ಅನೇಕ ಸಿನಿ ಗಣ್ಯರು ಸಹ ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ನೆಪೊಟೀಸಂ ನಿಂದ ಸಿನಿರಂಗವನ್ನು ಆಳಲು ಆಗುವುದಿಲ್ಲ ಪ್ರತಿಭೆಯಿಂದ ಮಾತ್ರ ಅದು ಸಾಧ್ಯ ಎಂದು ಹೇಳಿದ್ದರು.

ಇನ್ನೂ ಅವಿಕಾ ಗೋರ್‍ ಕಳೆದ ವರ್ಷ ಪಾಪ್ ಕಾರ್ನ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಸದ್ಯ ಆಕೆ ತೆಲುಗು, ಕನ್ನಡ, ಹಿಂದಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಉಮಾಪತಿ, ಹಿಂದಿಯಲ್ಲಿ 1929 ಹಾರರ್‍ ಆಫ್ ದಿ ಹಾರ್ಟ್ಸ್ ಎಂಬ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾ ಮತಷ್ಟು ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.

Most Popular

To Top