Film News

NTR31 ಸಿನೆಮಾದಲ್ಲಿ ಎನ್.ಟಿ.ಆರ್ ರವರನ್ನು ಎದುರು ಹಾಕಿಕೊಳ್ಳಲಿದ್ದಾರಂತೆ ಮಾಜಿ ಮಿಸ್ ವರ್ಲ್ಡ್, ಕ್ರೇಜಿ ರೂಮರ್ ವೈರಲ್….!

RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಇಮೇಜ್ ಪಡೆದುಕೊಂಡ ಜೂನಿಯರ್‍ ಎನ್.ಟಿ.ಆರ್‍ ರವರ ಮುಂದಿನ ಸಿನೆಮಾಗಳ ಮೇಲೆ ಭಾರಿ ನಿರೀಕ್ಷೆ ಇದೆ. ಸದ್ಯ ಅವರು ಕೊರಟಾಲಶಿವ ನಿರ್ದೇಶನದಲ್ಲಿ ಸೆಟ್ಟೇರಿದ ದೇವರ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾ ಪ್ಯಾನ್ ವರ್ಲ್ಡ್ ಸಿನೆಮಾ ಆಗಿರಲಿದೆ ಎಂದು ಸಹ ಹೇಳಲಾಗುತ್ತಿದೆ. ಈ ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಸ್ಯಾಂಡಲ್ ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ NTR31 ಸಿನೆಮಾ ಸೆಟ್ಟೇರಲಿದ್ದು, ಸೆಟ್ಟೇರುವ ಮುಂಚೆಯೇ ಈ ಸಿನೆಮಾದಿಂದ ಕ್ರೇಜಿ ರೂಮರ್‍ ಗಳು ಹರಿದಾಡುತ್ತಿವೆ.

ಸ್ಯಾಂಡಲ್ ವುಡ್ ಸ್ಟಾರ್‍ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಲಾರ್‍ ಸಿನೆಮಾದ ಶೂಟಿಂಗ್ ನಲ್ಲಿದ್ದು ಈ ಸಿನೆಮಾದ ಬಳಿಕ ಜುಣಿಯರ್‍ ಎನ್.ಟಿ.ಆರ್‍ ರವರ ಜೊತೆ ಸಿನೆಮಾ ಮಾಡಲಿದ್ದಾರೆ. ಈ ಸಿನೆಮಾ ಸಹ ಈಗಾಗಲೇ ಘೋಷಣೆ ಮಾಡಲಾಗಿದೆ. ಜೂನಿಯರ್‍ ಎನ್.ಟಿ.ಆರ್‍ ರವರ ದೇವರ ಹಾಗೂ NTR31 ಸಿನೆಮಾ ಸಿನಿರಂಗದಲ್ಲಿ ಇದೀಗ ಹಾಟ್ ಟಾಪಿಕ್ ಆಗಿವೆ. ಈಗಾಗಲೇ ದೇವರ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಈ ಸಿನೆಮಾದಲ್ಲಿ ಬಾಲಿವುಡ್ ನ ಸ್ಟಾರ್‍ ಕಲಾವಿದರೂ ಸಹ ನಟಿಸುತ್ತಿದ್ದಾರೆ. ವಿಲನ್ ಆಗಿ ಬಾಲಿವುಡ್ ಸ್ಟಾರ್‍ ಸೈಫ್ ಅಲಿ ಖಾನ್, ಎನ್.ಟಿ.ಆರ್‍ ರವರಿಗೆ ಜೋಡಿಯಾಗಿ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ನಟಿಸುತ್ತಿದ್ದಾರೆ. ಹೈದರಾಬಾದ್ ನ ಕೆಲವೊಂದು ಪ್ರದೇಶಗಳಲ್ಲಿ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ.

ಇನ್ನೂ NTR31 ಸಿನೆಮಾ ಇನ್ನೂ ಸೆಟ್ಟೇರಿಲ್ಲ. ದೇವರ ಸಿನೆಮಾದ ಬಳಿಕ ಸೆಟ್ಟೇರಲಿದೆ. ಆದರೆ ಈ ಸಿನೆಮಾದ ಬಗ್ಗೆ ಈಗಾಗಲೇ ಅನೇಕ ಕ್ರೇಜಿ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಕಳೆದರಡು ದಿನಗಳ ಹಿಂದೆಯಷ್ಟೆ ಈ ಸಿನೆಮಾದಲ್ಲಿ ನಟಯಾಗಿ ಪ್ರಿಯಾಂಕಾ ಚೋಪ್ರಾ ರವರನ್ನು ಕರೆತರಲು ಸಿದ್ದತೆಗಳು ನಡೆಯುತ್ತಿವೆ ಎಂಬ ಸುದ್ದಿ ಕೇಳಿಬಂದಿತ್ತು. ಮೂರು ದಿನಗಳ ಕಾಲ ಈ ಸುದ್ದಿ ಹಾಟ್ ಟಾಪಿಕ್ ಆಗಿ ಹರಿದಾಡಿತ್ತು. ಇದೀಗ ಮತ್ತೊಂದು ಕ್ರೇಜಿ ರೂಮರ್‍ ಕೇಳಿಬರುತ್ತಿದೆ. ಅದು ಸಿನೆಮಾದಲ್ಲಿ ವಿಲನ್ ಪಾತ್ರ. ಹೌದು NTR31 ಸಿನೆಮಾದಲ್ಲಿ ವಿಲನ್ ಆಗಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ರವರನ್ನು ಕರೆತರಲು ಪ್ಲಾನ್ ಮಾಡಲಾಗುತ್ತಿದೆಯಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಿರ್ದೇಶಕ ಪ್ರಶಾಂತ್ ನೀಲ್ NTR31 ಸಿನೆಮಾಗೆ ವಿಲನ್ ಪಾತ್ರಕ್ಕಾಗಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ರವರನ್ನು ಕರೆತರಲು ಪ್ಲಾನ್ ಮಾಡಲಾಗತ್ತಿದೆ ಎಂದು ಸುದ್ದಿ ಕೇಳಿಬರುತ್ತಿದೆ. ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಇಲ್ಲವಾದರೂ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಒಂದು ವೇಳೆ ಈ ರೂಮರ್‍ ಗಳು ನಿಜವೇ ಆದರೇ ಸಿನೆಮಾ ನೆಕ್ಸ್ಟ್ ಲೆವೆಲ್ ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

Most Popular

To Top