ಯಂಗ್ ಬ್ಯೂಟಿ ಮಾಳವಿಕಾ ನಾಯರ್ ಬೋಲ್ಡ್ ಕಾಮೆಂಟ್ಸ್, ಡೈರೆಕ್ಟರ್ ನನ್ನು ಇಟ್ಟುಕೊಳ್ಳುತ್ತೇನೆ ಎಂದ ನಟಿ…!

ಮೊದಲನೇ ಸಿನೆಮಾದ ಮೂಲಕವೇ ಫೇಂ ಸಂಪಾದಿಸಿಕೊಂಡ ನಟಿಯರ ಸಾಲಿಗೆ ಸೇರುವ ಮಾಳವಿಕಾ ನಟನೆಯ ಮೂಲಕವೇ ಒಳ್ಳೆಯ ಮಾರ್ಕ್ಸ್ ಪಡೆದುಕೊಂಡರು. ಮೊದಲನೆ ಸಿನೆಮಾದ ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಂಡರು. ಎವಡೇ ಸುಬ್ರಮಣ್ಯಂ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ಈಕೆ ಇದೀಗ ಕೆಲವೊಂದು ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಮಾಳವಿಕಾ ನಾಯರ್‍ ತುಂಬಾ ಆಯ್ಕೆ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಗ್ಲಾಮರ್‍ ಶೋಗೆ ದೂರವಿದ್ದ ಈಕೆ ಕ್ಯೂಟ್ ಲವ್ ಸ್ಟೋರಿಯುಳ್ಳ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ಆಕೆ ಬೋಲ್ಡ್ ಕಾಮೆಂಟ್ಸ್ ಮಾಡಿ ಸುದ್ದಿಯಾಗಿದ್ದಾರೆ. ಕ್ಯೂಟ್ ಆಗಿ, ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುವ ಈಕೆ ಬೋಲ್ಡ್ ಕಾಮೆಂಟ್ ಗಳ ಮೂಲಕ ಸಂಚಲನ ಸೃಷ್ಟಿ ಮಾಡಿದ್ದಾರೆ. ಓರ್ವ ನಿರ್ದೇಶಕನ್ನು ಇಟ್ಟುಕೊಳ್ಳುತ್ತೇನೆ ಎಂದು ಬೋಲ್ಡ್ ಕಾಮೆಂಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜಾತಿರತ್ನಾಲು ಫೇಂನ ನಿರ್ದೇಶಕ ಅನುದೀಪ್ ರವರನ್ನು ಇಟ್ಟುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ನಟಿ ಮಾಳವಿಕಾ ನಾಯರ್‍ ನಿರ್ದೇಶಕ ಅನುದೀಪ್ ರವರನ್ನು ಉದ್ದೇಶಿಸಿ ನೀವು ಏನು ಅಂದುಕೊಳ್ಳಬೇಡಿ, ನಿಮ್ಮನ್ನು ನಾನು ಇಟ್ಟುಕೊಳ್ಳುತ್ತೇನೆ ಎಂದಿದ್ದಾರೆ. ಈ ವೇಳೆ ಅನುದೀಪ್ ನಾಚಿಕೆ ಪಡುತ್ತಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಾಟ್ ಟಾಪಿಕ್ ಆಗಿದೆ. ಇನ್ನೂ ಇದು ನಿಜವಲ್ಲ ಬದಲಿಗೆ ಮಾಳವಿಕ ನಾಯರ್‍ ನಟಿಸುತ್ತಿರುವ ಅನ್ನಿ ಮಂಚಿ ಶಕುನಮುಲೇ ಎಂಬ ಸಿನೆಮಾದ ಪ್ರಮೋಷನ್ ಗಾಗಿ ಈ ವಿಡಿಯೋ ಮಾಡಲಾಗಿದೆ. ಇನ್ನೂ ಸಿನೆಮಾದ ಪ್ರಮೋಷನ್ ಗಾಗಿ ಆಕೆ ಈ ರೀತಿಯಾಗಿ ವಿಡಿಯೋ ಮಾಡಿದ್ದ ಹಿನ್ನೆಲೆಯಲ್ಲಿ ಅನೇಕರ ಸಖತ್ ಟ್ರೋಲ್ ಸಹ ಮಾಡುತ್ತಿದ್ದಾರೆ.

ಸಿನೆಮಾ ಪ್ರಮೋಷನ್ ಅನ್ನು ವಿಭಿನ್ನ ರೀತಿಯಲ್ಲಿ ಪ್ಲಾನ್ ಮಾಡಿ ಎಲ್ಲರನ್ನೂ ಸೆಳೆಯುವ ಪ್ರಯತ್ನವನ್ನು ಚಿತ್ರತಂಡ ಮಾಡಿದ್ದು, ಈ ವಿಚಾರದಲ್ಲಿ ಚಿತ್ರತಂಡದ ಈ ಪ್ಲಾನ್ ಸಕ್ಸಸ್ ಆಗಿದೆ. ಆದರೆ ಮಾಳವಿಕಾ ಮಾತ್ರ ಸಖತ್ ಟ್ರೋಲ್ ಆಗುತ್ತಿದ್ದಾರೆ. ಇಟ್ಟುಕೊಳ್ಳುವುದು ಅಂದರೇ ಏನು ಎಂದು ವಿವಿಧ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಈ ಸಿನೆಮಾ ಇದೇ ತಿಂಗಳ 18 ರಂದು ತೆರೆ ಕಾಣಲಿದೆ.