Film News

ತೆಲುಗು ಸಿನಿರಂಗಕ್ಕೆ ಮತ್ತೊರ್ವ ಕ್ರೇಜಿ ನಟಿ ಎಂಟ್ರಿ, ಬ್ಯಾಕ್ ಟು ಬ್ಯಾಕ್ ಆಫರ್ ಗಳನ್ನು ಪಡೆದುಕೊಳ್ಳುತ್ತಿರುವ ಅನಿಖಾ….!

ಇತ್ತಿಚಿಗೆ ತೆಲುಗು ಸಿನಿರಂಗದಲ್ಲಿ ಬೇರೆ ಭಾಷೆಗಳ ನಟಿಯರು ಫೇಂ ಸಂಪಾದಿಸಿಕೊಳ್ಳುತ್ತಾ ಕ್ರೇಜಿ ನಟಿಯರಾಗಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕನ್ನಡದ ಶ್ರೀಲೀಲಾ, ರಶ್ಮಿಕಾ, ಕೃತಿ ಶೆಟ್ಟಿ ಮೊದಲಾದವರು ಕಡಿಮೆ ಸಮಯದಲ್ಲೇ ಸ್ಟಾರ್‍ ಇಮೇಜ್ ಗಿಟ್ಟಿಸಿಕೊಂಡರು. ಇದೀಗ ಮತ್ತೊರ್ವ ನಟಿ ತೆಲುಗು ಸಿನೆಮಾಗಳಲ್ಲಿ ಸದ್ದು ಮಾಡಲು ಬರುತ್ತಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಕಾಲಿವುಡ್ ಸ್ಟಾರ್‍ ನಟ ಅಜತ್ ವಿಶ್ವಾಸಂ ಸಿನೆಮಾದಲ್ಲಿ ಅಜಿತ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡ ಅನಿಖಾ. ಇದೀಗ ಆಕೆ ಟಾಲಿವುಡ್ ನತ್ತ ದಾಪುಗಾಲು ಇಡುತ್ತಿದ್ದಾರೆ. ಸಾಲು ಸಾಲು ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಕಾಲಿವುಡ್ ಸ್ಟಾರ್‍ ನಟ ಅಜಿತ್ ಅಭಿನಯದ ವಿಶ್ವಾಸಂ ಸಿನೆಮಾದಲ್ಲಿ ಅಜಿತ್ ಹಾಗೂ ನಯನತಾರಾ ಜೋಡಿಯ ಮಗಳ ಪಾತ್ರದಲ್ಲಿ ನಟಿಸಿದ್ದರು ಅನಿಖಾ ಸುರೇಂದ್ರನ್. ಈ ಸಿನೆಮಾದಲ್ಲಿ ಆಕೆ ಕ್ಯೂಟ್ ನಟನೆಯ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದರು. ಇನ್ನೂ ಬಾಲನಟಿಯಾಗಿ ಎಂಟ್ರಿ ಕೊಟ್ಟ ಈಕೆ ಇದೀಗ ನಟಿಯಾಗಿದ್ದಾರೆ. ಕಾಲಿವುಡ್ ನಲ್ಲಿ ಕಾಣಿಸಿಕೊಂಡ ಈಕೆ ಇದೀಗ ಟಾಲಿವುಡ್ ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಬುಟ್ಟ ಬೊಮ್ಮ ಎಂಬ ಸಿನೆಮಾದ ಮೂಲಕ ತೆಲುಗು ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಅನಿಖಾ ತೆಲುಗು ಪ್ರೇಕ್ಷಕರಿಗೆ ಮತಷ್ಟು ಹತ್ತಿರವಾಗಿದ್ದಾರೆ. ಬುಟ್ಟಬೊಮ್ಮ ಸಿನೆಮಾದಲ್ಲಿ ಆಕೆಯ ನಟನೆಯ ಮೂಲಕ ತೆಲುಗು ಪ್ರೇಕ್ಷಕರಿಗೆ ಮತಷ್ಟು ಹತ್ತಿರವಾಗಿದ್ದಾರೆ. ಇದೀಗ ಆಕೆಗೆ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊದಲನೇ ಸಿನೆಮಾದ ಮೂಲಕವೇ ಬೇಡಿಕೆ ಹೆಚ್ಚಿಸಿಕೊಂಡು ಆಫರ್‍ ಗಳನ್ನು ಪಡೆದುಕೊಂಡ ನಟಿಯರ ಸಾಲಿಗೆ ಅನಿಖಾ ಸುರೇಂದ್ರನ್ ಸಹ ಒಬ್ಬರಾಗುತ್ತಿದ್ದಾರೆ. ಬುಟ್ಟಬೊಮ್ಮ ಸಿನೆಮಾದ ಮೂಲಕವೇ ಅನಿಖಾ ಒಳ್ಳೆಯ ಕ್ರೇಜ್ ಸಂಪಾದಿಸಿಕೊಂಡರು. ಸೌಂದರ್ಯ ನಟನೆ ಎರಡನ್ನೂ ಹೊಂದಿರುವ ಈ ಬ್ಯೂಟಿಗಾಗಿ ಸ್ಟಾರ್‍ ಪ್ರೊಡ್ಯೂಸರ್‍ ಗಳೂ ಸಹ ಕ್ಯೂ ಕಟ್ಟುತ್ತಿದ್ದಾರಂತೆ. ಜೊತೆಗೆ ಅನೇಕ ಯಂಗ್ ನಟರೂ ಸಹ ಆಕೆಯನ್ನು ತಮ್ಮ ಸಿನೆಮಾಗಳಲ್ಲಿ ಮೊದಲ ಆಯ್ಕೆಯಾಗಿ ಕೇಳುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಈ ಹಾದಿಯಲ್ಲೇ ಆಕೆ ಟಾಕ್ ಆಫ್ ದಿ ಇಂಡಸ್ಟ್ರಿಯಾಗಿದ್ದಾರೆ.

ಇನ್ನೂ ಟಾಲಿವುಡ್ ನ ದೊಡ್ಡ ನಿರ್ಮಾಣ ಸಂಸ್ಥೆಗಳು ಅನಿಖಾ ಜೊತೆ ಡೀಲ್ಸ್ ಮಾಡುತ್ತಿವೆಯಂತೆ. ಅನಿಖಾ ಈಗಾಗಲೇ ಎರಡು ಬಿಗ್ ಪ್ರಾಜೆಕ್ಟ್ ಗಳಿಗೂ ಸಹ ಸೈನ್ ಹಾಕಿದ್ದಾರಂತೆ. ಮತಷ್ಟು ಸಿನೆಮಾಗಳು ಚರ್ಚೆಗಳ ಹಂತದಲ್ಲಿವೆ ಎಂಬ ಸುದ್ದಿಗಳೂ ಸಹ ಜೋರಾಗಿಯೇ ಹರಿದಾಡುತ್ತಿವೆ. ಈಗಾಗಲೇ ಶ್ರೀಲೀಲಾ, ಕೃತಿ ಶೆಟ್ಟಿ ಒಳ್ಳೆಯ ಕ್ರೇಜ್ ಸಂಪಾದಿಸಿಕೊಂಡು ಸ್ಟಾರ್‍ ಗಳಾಗುತ್ತಿದ್ದು, ಇದೀಗ ಅನಿಖಾ ಸುರೇಂದ್ರನ್ ಸಹ ಸ್ಟಾರ್‍ ಆಗಿ ತೆಲುಗು ಸಿನಿರಂಗವನ್ನು ಆಳಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

Most Popular

To Top