ಶೂಟಿಂಗ್ ಸಮಯದಲ್ಲಿ ಸತ್ತು ಬದುಕಿದೆ ಎಂದ ಫೈರ್ ಬ್ರಾಂಡ್ ವಿಜಯಶಾಂತಿ, ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ ನಟಿ….!

Follow Us :

90ರ ದಶಕದಲ್ಲಿ ತೆಲುಗು ಸಿನಿರಂಗದ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿ ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡ ನಟಿಯರ ಸಾಲಿನಲ್ಲಿ ವಿಜಯಶಾಂತಿ ಸಹ ಸೇರುತ್ತಾರೆ. ಸ್ಟಾರ್‍ ನಟರಂತೆ ಸಮನಾದ ಸಂಭಾವನೆ ಸಹ ಪಡೆದುಕೊಂಡರು. ಅಂದಿನ ಸಮಯದಲ್ಲೆ ಆಕೆ ಲೇಡಿ ಓರಿಯೆಂಟೆಂಡ್ ಸಿನೆಮಾಗಳ ಮೂಲಕ ಸಖತ್ ಸದ್ದು ಮಾಡಿದ್ದರು. ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ ಈಕೆ ಸಿನೆಮಾಗಳಿಂದಲೂ ದೂರವಾದರು. ಇದೀಗ ಆಕೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ಹೊರಹಾಕಿದ್ದಾರೆ.

ಸೀನಿಯರ್‍ ನಟಿ ವಿಜಯಶಾಂತಿ ಸಿನೆಮಾಗಳಿದಂ ದೂರವಾದ ಬಳಿಕ ರಾಜಕೀಯದಲ್ಲಿ ಸಕ್ರಿಯರಾದರು. ಸಿನೆಮಾಗಳಲ್ಲಿ ಆಕೆಯ ಫೈರ್‍ ಬ್ರಾಂಡ್ ಎಂತಲೇ ಕರೆಯಲಾಗುತ್ತಿತ್ತು. ಅದೇ ಮಾದರಿಯಲ್ಲೇ ವಿಜಯಶಾಂತಿ ರಾಜಕೀಯದಲ್ಲೂ ಸಹ ಎಂಟ್ರಿ ಕೊಟ್ಟು ಅಲ್ಲೂ ಸಹ ಫೈರ್‍ ಬ್ರಾಂಡ್ ಎಂಬ ಫೇಂ ಸಂಪಾದಿಸಿಕೊಂಡರು. ಇನ್ನೂ ಆಕೆ ಸಿನೆಮಾಗಳಿಂದ ದೂರವಾದ ಬಳಿಕ ಅನೇಕರು ಆಕೆಯನ್ನು ಸಿನೆಮಾಗಳಲ್ಲಿ ರಿ ಎಂಟ್ರಿ ಕೊಡುವಂತೆ ಕೇಳಿಕೊಂಡರೂ ಸಹ ಆಕೆ ಸಿನೆಮಾಗಳಲ್ಲಿ ನಟಿಸಲು ಆಸಕ್ತಿ ತೋರಲಿಲ್ಲ.  ಆದರೆ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದ ಬಳಿಕ ಆಕೆ ಮತ್ತೆ ಸಿನೆಮಾಗಳತ್ತ ತಿರುಗಿ ನೋಡಲಿಲ್ಲ. ರಾಜಕೀಯದಲ್ಲೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ಇತ್ತಿಚಿಗೆ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು ಕೆಲವೊಂದು ಸಂಚಲನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟಿ ವಿಜಯಶಾಂತಿ ಈ ಹಿಂದೆ ನಡೆದ ಅಪಘಾತದ ಬಗ್ಗೆ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡುತ್ತಾ, ಲೇಡಿ ಬಾಸ್ ಸಿನೆಮಾದ ಶೂಟಿಂಗ್ ವೇಳೆ ನಡೆದ ದೊಡ್ಡ ದುರಂತದ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. ಲೇಡಿ ಬಾಸ್ ಸಿನೆಮಾದ ಕ್ಲೈಮಾಕ್ಸ್ ಶೂಟಿಂಗ್ ವೇಳೇ ರೈಲಿನಿಂದ ಜಾರಿ ಗುಣಿಯಲ್ಲಿ ಬೀಳುತ್ತಿದ್ದೆ. ಕ್ಷಣದಲ್ಲೇ ಪ್ರಣಾಪಾಯದಿಂದ ಪಾರಾದೆ. ಈ ಪ್ರಮಾದ ತನ್ನಿಂದಲೇ ನಡೆಯಿತು ಎಂದೂ ಸಹ ಹೇಳಿದ್ದಾರೆ. ಇನ್ನೂ ಅದು ಪ್ರಮಾದ ಎಂದು ತಿಳಿದೇ ಮೇಕರ್ಸ್ ಸಹ ಆ ಸೀನ್ ಬೇಡ ಎಂದಿದ್ದರು. ಆದರೆ ನಾನೆ ಆ ದೃಶ್ಯದಲ್ಲಿ ಬಲವಂತವಾಗಿ ನಟಿಸಿ ಕಂಪ್ಲೀಟ್ ಮಾಡಿದ್ದೇನೆ.

ಜೊತೆಗೆ ಮತ್ತೊಂದು ಸಿನೆಮಾದ ಶೂಟಿಂಗ್ ಸಮಯದಲ್ಲೂ ಸಹ ಫೈರ್‍ ಆಕ್ಸಿಡೆಂಟ್ ಆಗಿತ್ತು. ನನ್ನ ಸೀರೆ ಹಾಗೂ ಕೂದಲಿಗೆ ಬೆಂಕಿ ತಗುಲಿತ್ತು. ಆ ಸಮಯದಲ್ಲಿ ನಾನು ಸಾವಿನ ಅಂಚಿನ ವರೆಗೂ ಹೋಗಿ ಬಂದೆ. ಅದು ತಮಿಳು ಸಿನೆಮಾ, ವಿಜಯ್ ಕಾಂತ್ ಹಿರೋ ಆಗಿದ್ದರು. ಅರಣ್ಯದಲ್ಲಿ ನನ್ನನ್ನು ಗುಡಿಸಿನಲ್ಲಿ ಕೂಡಿ ಹಾಕಿ ಆ ಗುಡಿಸಿಲನ್ನು ಬೆಂಕಿಗೆ ಆಹುತಿ ಮಾಡಬೇಕು. ಆ ಶೂಟಿಂಗ್ ಸಮಯದಲ್ಲಿ ಜೋರಾಗಿ ಗಾಳಿ ಬಂದು ತುಂಬಾ ಬೆಂಕಿ ಉರಿಯಿತು. ಈ ವೇಳೆ ನನ್ನನ್ನು ಕಾಪಾಡಲು ಯಾರೂ ಬರಲಿಲ್ಲ. ವಿಜಯ್ ಕಾಂತ್ ರವರೇ ಬಂದು ನನ್ನ ಆ ಪ್ರಮಾದದಿಂದ ಪಾರು ಮಾಡಿದರು. ಎಂದು ಹೇಳಿದರು. ಇನ್ನೂ ತಾನು ಪಡೆದುಕೊಂಡ ಸಂಭಾವನೆಯ ಬಗ್ಗೆ ಸಹ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.