ಮ್ಯಾಟ್ರಿಮೋನಿ ದೋಖಾ, ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆಯಿಂದ ಕೋಟಿ ಕಳೆದುಕೊಂಡ ಟೆಕ್ಕಿ…..!

ತಂತ್ರಜ್ಞಾನ ಹೆಚ್ಚಾದಂತೆಲ್ಲಾ ಜನರು ವಿವಿಧ ರೀತಿಯಲ್ಲಿ ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ. ಈ ಹಾದಿಯಲ್ಲೇ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಟೆಕ್ಕಿಯೊಬ್ಬರಿಗೆ ಬರೊಬ್ಬರಿ 1.14 ಕೋಟಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, 41 ವರ್ಷದ ಟೆಕ್ಕಿಯೊಬ್ಬರು ವೈಟ್ ಫೀಲ್ಸ್ ನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಪ್ರಕರಣ ದಾಖಲಾದ ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಯಿಂದ 84 ಲಕ್ಷ ಹಣವನ್ನು ತಡೆಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಮೋಸಹೋದ ಟೆಕ್ಕಿ ಯುಕೆ ಮೂಲದ ಕಂಪನಿಯೊಂದಲ್ಲಿ ಉದ್ಯೋಗಿಯಾಗಿದ್ದ. ಸಾಫ್ಟ್ ವೇರ್‍ ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದ ಎಂದು ತಿಳಿದು ಬಂದಿದೆ. ಮದುವೆಯಾಗಬೇಕೆಂಬ ಆಸೆಯಿಂದ ಮ್ಯಾಟ್ರಿಮೋನಿಯಲ್ಲಿ ನೊಂದಣಿ ಮಾಡಿಕೊಂಡಿದ್ದರು. ಅದೇ ತಾಣದಲ್ಲಿ ಸಾನ್ವಿ ಅರೋರಾ ಎಂಬ ಮಹಿಳೆಯ ಸಹ ನೊಂದಣಿಯಾಗಿದ್ದು, ಆತನನ್ನು ಪರಿಚಯಿಸಿಕೊಂಡಿದ್ದಾಳೆ. ಜುಲೈ 7 ರಂದು ಆ ಟೆಕ್ಕಿಗೆ ವಿಡಿಯೋ ಕರೆ ಸಹ ಮಾಡಿದ್ದಾರೆ. ಈ ವೇಲೆ ನಗ್ನವಾಗಿ ದೂರುದಾರರನಿಗೆ ತಿಳಿಯದಂತೆ ವಿಡಿಯೋ ಚಿತ್ರೀಕರಣ ಸಹ ಮಾಡಿಕೊಂಡಿದ್ದಾರೆ. ಬಳಿಕ ಹಣ ನೀಡುವಂತೆ ಬ್ಲಾಕ್ ಮೇಲ್ ಸಹ ಮಾಡಿದ್ದಾರೆ. ಹಣ ನೀಡದೇ ಇದ್ದರೇ ಆ ವಿಡಿಯೋವನ್ನು ಟೆಕ್ಕಿಯ ಪೋಷಕರಿಗೆ ಕಳಿಹಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಕಾರಣದಿಂದ ಭಯಬೀತಗೊಂಡ ಟೆಕ್ಕಿ 1.14 ಕೋಟಿಯಷ್ಟು ಹಣ ಆಕೆಯ ಖಾತೆಗೆ ಹಾಕಿದ್ದಾರೆ.

ಇನ್ನೂ ಈ ಸಂಬಂಧ ಟೆಕ್ಕಿ ವೈಟ್ ಫೀಲ್ಸ್ ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಟೆಕ್ಕಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಖಾತೆಯನ್ನು ಪತ್ತೆ ಹಚ್ಚಿ ಆಕೆಯ ಖಾತೆಯಲ್ಲಿದ್ದ 84 ಲಕ್ಷ ಹಣವನ್ನು ತಡೆಹಿಡಿದಿದ್ದಾರೆ. ಆರೋಪಿಯು 30 ಲಕ್ಷ ಹಣ ಉಪಯೋಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಮದುವೆ ಮಾಡಿಕೊಳ್ಳಲು ಹೋಗಿ ದೊಡ್ಡಮಟ್ಟದಲ್ಲೇ ಟೆಕ್ಕಿ ಮೋಸಹೋಗಿದ್ದಾನೆ. ಇನ್ನೂ ಸಾರ್ವಜನಿಕರು ಅಪರಿಚಿತರೊಂದಿಗೆ ವ್ಯವಹಾರಗಳನ್ನು ಮಾಡುವಾಗ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ ಎಂದು ಪೊಲೀಸರು ಆತನಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ ಎಂದು ತಿಳಿದುಬಂದಿದೆ.