Film News

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರು ಬಳಸಿ ವಂಚನೆ, 40 ಲಕ್ಷ ವಂಚನೆ ಮಾಡಿದ ಯುವತಿ ಬಂಧನ…..!

ಇತ್ತೀಚಿಗೆ ಸಿನೆಮಾ ಸೆಲೆಬ್ರೆಟಿಗಳು, ಕಿರುತೆರೆ ಸೆಲೆಬ್ರೆಟಿಗಳ ಹೆಸರುಗಳನ್ನು ಹೇಳಿಕೊಂಡು ಅನೇಕರು ವಿವಿಧ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ. ಅಂತಹ ಅನೇಕ ಪ್ರಕರಣಗಳನ್ನು ನಾವು ಕೇಳಿದ್ದೇವೆ. ಈ ಹಾದಿಯಲ್ಲೇ ಕನ್ನಡ ಕಿರುತೆರೆಯ ಅನೇಕ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಹಾಗೂ ನಟನೆಯ ಮೂಲಕ ಫೇಂ ಪಡೆದುಕೊಂಡ ಮಾಸ್ಟರ್‍ ಆನಂದ್ ಪುತ್ರಿ ವಂಶಿಕಾ ಹೆಸರನ್ನು ಬಳಸಿ ಯುವತಿಯೊಬ್ಬಳು ಸುಮಾರು 40 ಲಕ್ಷ ವಂಚನೆ ಮಾಡಿದ್ದಾರೆಂದು ದೂರು ಬಂದಿದ್ದು, ನಿಶಾ ಎಂಬಾಕೆಯನ್ನು ಸದಾಶಿವನಗರ ಪೊಲೀಸರು ಬಂಧನ ಮಾಡಿದ್ದಾರೆ.

ಬಂಧಿತ ಆರೋಪಿ ನಿಶಾ ಮಕ್ಕಳ ಟ್ಯಾಲೆಂಟ್ ಶೋ, ಮಾಡಲಿಂಗ್, ಈವೆಂಟ್ ಮ್ಯಾನೇಜ್ ಮೆಂಟ್, ಮಕ್ಕಳ ಗ್ರೂಮಿಂಗ್ ತರಗತಿಗಳನ್ನು ನಡೆಸುತ್ತೇನೆ ಎಂದು ಹೇಳಿ ಅನೇಕ ಪೋಷಕರಿಂದ ಹಣವನ್ನು ವಸೂಲಿ ಮಾಡಿದ್ದರಂತೆ. ಇನ್ನೂ ನಿಶಾ ರಿಂದ ಹಣ ಪಡೆದು ಮೋಸ ಹೋದಂತಹ ಅನೇಕರು ದೂರು ನೀಡುವುದರ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಈ ಬಗ್ಗೆ ಪೋಸ್ಟ್ ಮಾಡಿದ್ದಾರಂತೆ. ಇನ್ನೂ ಈ ಬಗ್ಗೆ ವಂಶಿಕಾ ತಾಯಿ ಯಶಸ್ವಿನಿ ಆನಂದ್ ನಿಶಾ ನರಸಪ್ಪ ಎಂಬುವವರು ವಂಶಿಕಾ ಹೆಸರನ್ನು ಬಳಸಿ ನಲವತ್ತು ಲಕ್ಷ ಹಣ ವಸೂಲಿ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನ ನಿಶಾ ಬಗ್ಗೆ ಫೇಸ್ ಬುಕ್ ನಲ್ಲಿ ಅನೇಕರು ಪೋಸ್ಟ್ ಮಾಡಿದ್ದಾರೆ. ಹಣ ಕಳೆದುಕೊಂಡ ಅನೇಕರು ನಿಶಾ ವಿರುದ್ದ ಆಕೆ ಮಾಡಿದ ಮೋಸಗಳ ವಿರುದ್ದ ಬರೆದಿದ್ದಾರೆ. ಸುಮಾರು ದಿನಗಳ ಹಿಂದೆ ಪೂರ್ಣಮಾ ಎಂಬುವವರಿಂದ ಮಕ್ಕಳ ಫ್ಯಾಷನ್ ಶೋ ನಡೆಸುತ್ತಿರುವುದಾಗಿ ನಟಿ ಶ್ವೇತಾ ಶ್ರೀವತ್ಸಾವಗೆ ಐವತ್ತು ಸಾವಿರ ಹಣ ಕೊಟ್ಟರೇ ನಿಮ್ಮ ಮಗಳಿಗೆ ಮೊದಲ ಬಹುಮಾನ ಕೊಡಿಸುತ್ತೇನೆ ಎಂದು ಹೇಳಿದ್ದಾರಂತೆ. ಇದರ ಜೊತೆಗೆ ನಿಶಾ ಹಾಗೂ ಪೂರ್ಣಿಮಾ ವಾಟ್ಸಾಪ್ ನಲ್ಲಿ ನಡೆದಂತಹ ಸಂಭಾಷಣೆಯನ್ನು ಸಹ ಪೂರ್ಣಮಾ ಹಂಚಿಕೊಂಡಿದ್ದರು. ಜೊತೆಗೆ ಬೇಬಿ ಮಾಡಲಿಂಗ್ ಗಾಗಿ ಹತ್ತು ಲಕ್ಷ ಹಣ ಕೊಟ್ಟು ಕಳೆದುಕೊಂಡಿರುವ ಬಗ್ಗೆ ಸಹ ಪೂರ್ಣಿಮಾ ಎಂಬಾಕೆ ಹಂಚಿಕೊಂಡಿದ್ದರು.

ಇನ್ನೂ ಸೆಲೆಬ್ರೆಟಿಗಳ ಹೆಸರುಗಳನ್ನು ಬಂಡವಾಳ ಮಾಡಿಕೊಂಡು ನಿಶಾ ಅನೇಕರು ವಂಚಿಸುವ ಕಾಯಕ ರೂಡಿಸಿಕೊಂಡಿದ್ದರು. ವಂಶಿಕಾ ಮಾತ್ರವಲ್ಲೇ ಸಿನಿರಂಗದ ಅನೇಕರ ಹೆಸರುಗಳನ್ನು ಬಳಸಿಕೊಂಡು ಹಣ ವಂಚನೆ ಮಾಡಿದ್ದಾರೆ. ಹಣ ಪಡೆದ ಬಳಿಕ ಆಕೆ ಪೋನ್ ಕರೆಗಳಿಗೆ ಸ್ಪಂದನೆ ಕೊಡುತ್ತಿರಲಿಲ್ಲವಂತೆ. ವಂಚನೆ ಮಾಡಿದ ಹಣದಿಂದ ಐಶಾರಾಮಿ ಜೀವನ ನಡೆಸುತ್ತಿದ್ದ ನಿಶಾ ಇದೀಗ ವಂಚನೆ ಆರೋಪದ ಮೇರೆಗೆ ಪೊಲೀಸರ ಅತಿಥಿಯಾಗಿದ್ದಾರೆ.

Most Popular

To Top