ಅನುಮತಿಯಿಲ್ಲದೇ ಪತ್ನಿ ಪೋನ್ ಕಾಲ್ ರೇಕಾರ್ಡ್ ಮಾಡಿದ್ರೆ ಪನಿಷ್ ಮೆಂಟ್ ಫಿಕ್ಸ್?

Follow Us :

ಮದುವೆಯಾದ ಪುರುಷರಿಗಾಗಿ ಇಲ್ಲೊಂದು  ಶಾಕಿಂಗ್ ಸುದ್ದಿಯಿದೆ. ತಮ್ಮ ಪತ್ನಿ ಹೆಚ್ಚಾಗಿ ಪೋನ್ ನಲ್ಲಿ ಮಾತನಾಡುತ್ತಾಳೆ, ಪೋನ್ ನಲ್ಲೇ ಬ್ಯುಸಿಯಾಗಿರುತ್ತಾರೆ ಎಂದರೇ ಆಕೆಗೆ ಗೊತ್ತಿಲ್ಲದೇ ಆಕೆಯ ಪೋನ್ ಕಾಲ್ ರೆಕಾರ್ಡ್ ಮಾಡಿದರೇ ತಾವು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆಯಂತೆ. ಈ ಸಂಬಂಧ ಚತ್ತೀಸಘಡದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೋರ್ಟ್ ನೀಡಿದ ತೀರ್ಪಿನಂತೆ ಪತ್ನಿಯ ಅನುಮತಿಯಿಲ್ಲದೇ ಆಕೆಯ ಪೋನ್ ಕಾಲ್ ರೆಕಾರ್ಡ್ ಮಾಡುವುದು ಆರ್ಟಿಕಲ್ 21ರ ಉಲ್ಲಂಘಟನೆಯಾಗಿದ್ದು, ಆ ರೀತಿಯಾಗಿ ಮಹಿಳೆಯ ಖಾಸಗಿತನದ ಹಕ್ಕು ಉಲ್ಲಂಘನೆಯಾದಂತೆ ಎಂದು ಅಭಿಪ್ರಾಯಪಟ್ಟಿದೆ.

ಚತ್ತೀಸಘಡದ ಮಹಿಳೆಯೊಬ್ಬರು ಕೌಟುಂಬಿಕ ನ್ಯಾಯಾಲಯದಲ್ಲಿದ್ದ ಪ್ರಕರಣದ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. 38 ವರ್ಷದ ಮಹಿಳೆಯ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ಆದೇಶ ನೀಡಿದೆ. ಕಳೆದ 2019ರಲ್ಲಿ ಮಹಿಳೆಯ ವಿರುದ್ದ ಆಕೆತ ಪತಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರಂತೆ. ಮಹಿಳೆಯ ಪತಿ ವ್ಯಭಿಚಾರ ಮಾಡುತ್ತಿದ್ದಾಳೆ ಎಂದು ತಮಗೆ ವಿಚ್ಚೇದನ ನೀಡಿ ಎಂದು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಆತ ತನ್ನ ಪತ್ನಿಯ ಪೋನ್ ಕಾಲ್ ರೆಕಾರ್ಡ್ ದಾಖಲೆಯಾಗಿ ನೀಡಿದ್ದರು. ನಾನು ಪತ್ನಿಗೆ ತಿಂಗಳ ನಿರ್ವಹಣಾ ವೆಚ್ಚ ನೀಡಬೇಕಾಗಿಲ್ಲ. ಆಕೆಯಿಂದ ನನಗೆ ಮೋಸ ಆಗಿದೆ ಎಂದು ಕೌಂಟುಂಬಿಕ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿತ್ತು. ಈ ವಾದವನ್ನು ಎತ್ತಿಹಿಡಿದ ಕೌಟುಂಬಿಕ ನ್ಯಾಯಾಲಯ 2019 ರಿಂದ ಪ್ರಕರಣವನ್ನು ಬಾಕಿ ಉಳಿಸಿತ್ತು. 2022 ರಲ್ಲಿ ಮಹಿಳೆ ಹೈಕೋರ್ಟ್‌ಗೆ ಜೀವನಾಂಶ ಪಾವತಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮಹಿಳೆ ನೀಡಿದ ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಪತ್ನಿಯ ಅನುಮತಿ ಇಲ್ಲದೇ ಆಕೆಯ ಪೋನ್ ರೆಕಾರ್ಡ್ ಮಾಡುವುದು, ಕದ್ದಾಲಿಸುವುದು ಮಹಿಳೆಯ ಖಾಸಗಿತನ ಹಕ್ಕಿನ ಉಲ್ಲಂಘನೆಯಾಗಿದೆ. ಆಕೆಗೆ ತಿಳಿಯದಂತೆ ಪೋನ್ ಕಾಲ್ ರೆಕಾರ್ಡ್ ಮಾಡಿ ಆಕೆಯ ವಿರುದ್ದವೇ ಅದನ್ನು ಬಳಸಲು ಆಕೆಯ ಪತಿ ಮುಂದಾಗಿದ್ದಾರೆ ಎಂದು ಕೋರ್ಟ್ ತಿಳಿಸಿದೆ. ಆ ಮೂಲಕ ಪತ್ನಿಯ ಕರೆಗಳನ್ನು ಆಕೆಯ ಅನುಮತಿಯಿಲ್ಲದೇ ರೆಕಾರ್ಡ್ ಮಾಡುವುದು ಅಪರಾಧ ಎಂದು ಮಹತ್ವದ ತೀರ್ಪು ನೀಡಿದೆ ಎನ್ನಲಾಗಿದೆ.