Film News

ಕ್ಯಾನ್ಸರ್ ರೋಗಿಗಳಿಗಾಗಿ ತಲೆ ಕೂದಲು ಕೊಟ್ಟ ಯುವರಾಜ್ ಸಿಂಗ್ ಪತ್ನಿ, ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾದ ಹಜೇಲ್….!

ಮಹಿಳೆಯರಿಗೆ ಸೌಂದರ್ಯವೆಂದರೇ ಕೂದಲು ಎಂದು ಹೇಳಬಹುದು. ಈ ನಿಟ್ಟಿನಲ್ಲೇ ಎಲ್ಲಾ ಮಹಿಳೆಯರು ತಮ್ಮ ಕೂದಲಿನ ಸಂರಕ್ಷಣೆಗಾಗಿ ತುಂಬಾನೆ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಆದರೆ ಇತ್ತಿಚಿಗೆ ಕೆಲವು ಮಹಿಳೆಯರು ಕ್ಯಾನ್ಸರ್‍ ರೋಗಿಗಳಿಗಾಗಿ ತಮ್ಮ ಕೂದಲನ್ನೇ ದಾನ ಮಾಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಪತ್ನಿ ಸಹ ತಮ್ಮ ಕೂದಲನ್ನು ಕ್ಯಾನ್ಸರ್‍ ರೋಗಿಗಳಿಗೆ ತಮ್ಮ ಕೂದಲನ್ನು ದಾನ ಮಾಡುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ.

ಮಾಜಿ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಪತ್ನಿ ಖ್ಯಾತ ನಟಿ ಹಜೇಲ್ ಕಿಚ್ ಕ್ಯಾನ್ಸರ್‍ ರೋಗಿಗಳಿಗಾಗಿ ತಮ್ಮ ಕೂದಲನ್ನು ದಾನವಾಗಿ ಕೊಟ್ಟಿದ್ದಾರೆ. ಈ ವಿಚಾರವನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆ ತಮ್ಮ ಕೂದಲನ್ನು ಏಕೆ ಕಟ್ ಮಾಡಿಕೊಂಡಿದ್ದು, ಏತಕ್ಕಾಗಿ ಎಂದು ಹೇಳಿದ್ದಾರೆ. ಇನ್ನೂ ಆಕೆ ಹಂಚಿಕೊಂಡ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಕಳೆದ 2016 ರಲ್ಲಿ ಯುವರಾಜ್ ಸಿಂಗ್ ಹಾಗೂ ನಟಿ ಹೆಜೇಲ್ ಕಿಚ್ ಪ್ರೀತಿಸಿ ವಿವಾಹವಾದರು. 2022, ಜನವರಿ 25 ರಲ್ಲಿ ಓರಿಯಾನ್ ಎಂಬ ಮಗುವನ್ನು ಪಡೆದುಕೊಂಡರು. ಸಾಮಾನ್ಯವಾಗಿ ಮಗು ಹುಟ್ಟಿದ ಬಳಿಕ ಮಹಿಳೆಯರಿಗೆ ಕೂದಲು ಉದುರುವುದು ಸಾಮಾನ್ಯ. ಚಿಕಿತ್ಸೆ ಮಾಡಿ ಕೂದಲನ್ನು ಕಾಪಾಡಿಕೊಳ್ಳುವುದರ ಬದಲಿಗೆ ಆಕೆ ತನ್ನ ಕೂದಲನ್ನು ಶಾರ್ಟ್ ಮಾಡಿ ಅದನ್ನು ಕ್ಯಾನ್ಸರ್‍ ರೋಗಿಗಳಿಗಾಗಿ ದಾನ ಮಾಡಿದ್ದಾರೆ.

ಈ ಸಂಬಂಧ ಆಕೆ ಪೋಸ್ಟ್ ಹಂಚಿಕೊಂಡಿದ್ದಾರೆ. ಮಗು ಹುಟ್ಟಿದ ಬಳಿಕ ಅನೇಕ ಮಹಿಳೆಯರು ಕೂದಲನ್ನು ಶಾರ್ಟ್ ಮಾಡಿಕೊಳ್ಳುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಮಗು ಹುಟ್ಟಿದ ಬಳಿಕ ಅದು ನನಗೆ ಅರ್ಥವಾಯ್ತು. ಅದಕ್ಕಾಗಿ ಕೂದಲನ್ನು ಶಾರ್ಟ್ ಆಗಿ ಕಟ್ ಮಾಡಿಕೊಂಡು ಅದನ್ನು ಕ್ಯಾನ್ಸರ್‍ ರೋಗಿಗಳಿಗೆ ದಾನ ನೀಡಿದೆ. ಈ ನಿರ್ಣಯ ತೆಗೆದುಕೊಳ್ಳುವುದರ ಹಿಂದೆ ನನ್ನ ಪತಿ ಯುವರಾಜ್ ಸಿಂಗ್ ಪ್ರೇರಣೆ ಇದೆ. ಯುವರಾಜ್ ಸಿಂಗ್ ಕ್ಯಾನ್ಸರ್‍ ಚಿಕಿತ್ಸೆಯ ಭಾಗವಾಗಿ ಕಿಮೋಥೆರಫಿ ಟ್ರೀಟ್ ಮೆಂಟ್ ಸಮಯದಲ್ಲಿ ಕೂದಲು ಉದುರುವ ನೋವು ಹೇಗಿರುತ್ತದೆ ಎಂಬುದನ್ನು ನೋಡಿದ್ದೇನೆ. ಇದೀಗ ಆ ನೋವನ್ನು ಅರ್ಥ ಮಾಡಿಕೊಂಡು ನನ್ನ ಕೂದಲನ್ನು ದಾನ ಮಾಡಿದ್ದೇನೆ. ಯುನೆಟೆಡ್ ಕಿಂಗ್ ಡಮ್ ನ ಲಿಟಿಲ್ ಪ್ರಿನ್ಸೆಸ್ ಟ್ರಸ್ಟ್ ಗೆ ನನ್ನ ಕೂದಲನ್ನು ದಾನ ಮಾಡಿದ್ದೇನೆ. ನನ್ನ ಕೂದಲನ್ನು ಸ್ವೀಕರಿಸಿದ್ದಕ್ಕಾಗಿ @officiallittleprincesstrust ಧನ್ಯವಾದಗಳು ಎಂದು ಹೇಳಿದ್ದಾರೆ.

ಜೊತೆಗೆ ಇದು ಪ್ರಮೋಷನ್ ಗಾಗಿ ಮಾತ್ರ ಮಾಡಿಲ್ಲ. ಆ ಸಂಸ್ಥೆಯೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಾನು ಗೂಗಲ್ ನಲ್ಲಿ ವಿಗ್ ಗಾಗಿ ಕೂದಲು ಡೊನೇಷನ್ ಗಾಗಿ ಸರ್ಟ್ ಮಾಡಿದಾಗ ಈ ಚಾರಿಟಿ ಸಂಸ್ಥೆಯ ಬಗ್ಗೆ ವಿವರಗಳು ದೊರೆಯಿತು ಎಂದು ಆಕೆ ಪೋಸ್ಟ್ ಮೂಲಕ ಹೇಳಿದ್ದಾರೆ. ಇನ್ನೂ ಹಜೇಲ್ ಕಿಚ್ ಹಿಂದಿ, ತೆಲುಗು ಹಾಗೂ ತಮಿಳಿನ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಹಿಂದಿ ಬಿಗ್ ಬಾಸ್ ನಲ್ಲೂ ಸಹ ಆಕೆ ಭಾಗವಹಿಸಿ ಫೇಂ ಪಡೆದುಕೊಂಡಿದ್ದರು.

Most Popular

To Top