ಸೆನ್ಸಾರ್ ಬೋರ್ಡ್ ವಿರುದ್ದ ವಿಶಾಲ್ ಆಕ್ರೋಷ, ಸೆನ್ಸಾರ್ ಬೋರ್ಡ್ ಗೆ ಲಂಚ ಕೊಟ್ಟೆ ಎಂದು ವಿಡಿಯೋ ರಿಲೀಸ್ ಮಾಡಿದ ನಟ……!

ತಮಿಳು ಸಿನಿರಂಗದ ಸ್ಟಾರ್‍ ನಟರಲ್ಲಿ ವಿಶಾಲ್ ಸಹ ಒಬ್ಬರಾಗಿದ್ದು, ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಹ ದಕ್ಕಿಸಿಕೊಂಡಿದ್ದಾರೆ. ಇತ್ತೀಚಿಗೆ ಅವರು ಸದಾ ಒಂದಲ್ಲ ಒಂದು ವಿಚಾರದ ಕಾರಣದಿಂದ ಸುದ್ದಿಯ್ಲಲೇ…

ತಮಿಳು ಸಿನಿರಂಗದ ಸ್ಟಾರ್‍ ನಟರಲ್ಲಿ ವಿಶಾಲ್ ಸಹ ಒಬ್ಬರಾಗಿದ್ದು, ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಹ ದಕ್ಕಿಸಿಕೊಂಡಿದ್ದಾರೆ. ಇತ್ತೀಚಿಗೆ ಅವರು ಸದಾ ಒಂದಲ್ಲ ಒಂದು ವಿಚಾರದ ಕಾರಣದಿಂದ ಸುದ್ದಿಯ್ಲಲೇ ಇರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಮಾರ್ಕ್ ಆಂಟೋನಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದು, ತೆಲುಗು ಹಾಗೂ ತಮಿಳಿನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಇದೀಗ ಹಿಂದಿ ಸೆನ್ಸಾರ್ ಬೋರ್ಡ್ ವಿರುದ್ದ ಸಂಚಲನಾತ್ಮಕ ಆರೋಪ ಮಾಡಿದ್ದು, ಈ ಸಂಬಂಧ ವಿಡಿಯೋ ವೈರಲ್ ಆಗುತ್ತಿದೆ.

ಸೆ.15 ರಂದು ಬಿಡುಗಡೆಯಾದ ಮಾರ್ಕ್ ಆಂಟೋನಿ ಸಿನೆಮಾ ಒಳ್ಳೆಯ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಈ ಸಿನೆಮಾವನ್ನು ಹಿಂದಿಯಲ್ಲೂ ಸಹ ಬಿಡುಗಡೆ ಮಾಡಲು ವಿಶಾಲ್ ಪ್ಲಾನ್ ಮಾಡಿದ್ದರು. ಈ ಕಾರಣದಿಂದ ಸಿನೆಮಾವನ್ನು ಮುಂಬೈನಲ್ಲಿರುವ ಸೆನ್ಸಾರ್‍ ಬೋರ್ಡ್ ಗೆ ಕಳುಹಿಸಿದ್ದರಂತೆ. ಆದರೆ ಸೆನ್ಸಾರ್‍ ಬೋರ್ಡ್‌ನವರು ಸಿನೆಮಾ ಸೆನ್ಸಾರ್‍ ಮಾಡಲು ಲಂಚ ಕೇಳಿದ್ದರಂತೆ. ತಪ್ಪದೇ ಆತ ಆರು ಲಕ್ಷ ಲಂಚ ಸಹ ನೀಡಿದ್ದೇನೆ ಎಂದು ಹೇಳಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ವಿಶಾಲ್ ತನ್ನ ಟ್ವಿಟರ್‍ ಖಾತೆಯ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಆತ ಕೆಲವೊಂದು ಸಂಚಲನಾತ್ಮಕ  ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ ತಾನು ಹಣ ಸಂದಾಯ ಮಾಡಿದ ಅಕೌಂಟ್ ಡಿಟೈಲ್ಸ್ ಸಹ ಪೋಸ್ಟ್ ಮಾಡಿದ್ದಾರೆ.

ಇನ್ನೂ ವಿಡಿಯೋದಲ್ಲಿ ವಿಶಾಲ್ ಮಾತನಾಡುತ್ತಾ, ಸಿನೆಮಾಗಳಲ್ಲಿ ಲಂಚದ ಬಗ್ಗೆ ತೋರಿಸುವುದು ಚೆನ್ನಾಗಿಯೇ ಇರುತ್ತದೆ. ಆದರೆ ನಿಜ ಜೀವನದಲ್ಲಿ ಅದನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಮುಖ್ಯವಾಗಿ ಸರ್ಕಾರಿ ಕಚೇರಿಯಲ್ಲಿ, ಮುಂಬೈನಲ್ಲಿ ಸಿಬಿಎಫ್ ಕಚೇರಿಯಲ್ಲಿ ಲಂಚಾವತಾರ ತುಂಬಾನೆ ನಡೆಯುತ್ತಿದೆ. ನನ್ನ ಸಿನೆಮಾ ಮಾರ್ಕ್ ಆಂಟೋನಿ ಹಿಂದಿ ವರ್ಷನ್ ಸೆನ್ಸಾರ್‍ ಗಾಗಿ 6.5 ಲಕ್ಷ ಲಂಚವಾಗಿ ನೀಡಬೇಕಾಯ್ತು. ಅದಕ್ಕೆ ಸಂಬಂಧಿಸಿದ ಲೇವಾದೇವಿಯನ್ನು ಸಹ ಮಾಡಿದ್ದೇನೆ. ಒಂದು ಸ್ಕ್ರೀನಿಂಗ್ ಗಾಗಿ ಮೂರು ಲಕ್ಷ, ಸರ್ಟಿಫಿಕೇಟ್ ಗಾಗ ಮೂರುವರೆ ಲಕ್ಷ ನೀಡಿದ್ದೇನೆ. ನನ್ನ ಜೀವನದಲ್ಲಿ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ನನಗೆ ವಿಧಿಯಿಲ್ಲದೇ ಬೇರೆ ಮಾರ್ಗ ಕಾಣಿಸದೇ ಹಣ ನೀಡಬೇಕಾಯಿತು.

ಇನ್ನೂ ಈ ವಿಚಾರವನ್ನು ಮಹಾರಾಷ್ಟ್ರ ಸಿಎಂ ಏಕನಾಥ ಶೀಂಡೆ, ಪ್ರಧಾನಿ ಮೋದಿಯವರ ದೃಷ್ಟಿಗೆ ತೆಗೆದುಕೊಳ್ಳುತ್ತೇನೆ. ನಾನು ಈ ರೀತಿ ಮಾಡುತ್ತಿರುವುದು ನನ್ನ ಭವಿಷ್ಯತ್ ಗಾಗಿ ಅಲ್ಲ. ಮುಂಬರುವ ನಿರ್ಮಾಪಕರಿಗೋಸ್ಕರ. ನಾನು ಕಷ್ಟಪಟ್ಟು ಸಂಪಾದಿಸಿದ ಹಣ ಲಂಚಕ್ಕೆ ಕೊಡುವ ಅವಕಾಶವೇ ಇಲ್ಲ ಎಂದು ಈ ಸಂಬಂಧ ಕೆಲವೊಂದು ಸಾಕ್ಷಿಗಳನ್ನು ಶೇರ್‍ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದು, ಹಾಟ್ ಟಾಪಿಕ್ ಆಗಿದೆ.