Film News

ಕಾಂತಾರ 2 ಬಗ್ಗೆ ಇಂಟ್ರಸ್ಟಿಂಗ್ ಅಪ್ಡೇಟ್ ಕೊಟ್ಟ ವಿಜಯ್ ಕಿರಂಗದೂರು, ಏಪ್ರಿಲ್ 2024 ಕ್ಕೆ ಕಾಂತಾರ 2 ರಿಲೀಸ್….!

ಕನ್ನಡ ಸಿನಿರಂಗದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಕಾಂತಾರ ಸಿನೆಮಾ ಯಶಸ್ವಿಯಾಗಿ ಪ್ರದರ್ಶನವಾಗಿದೆ. ಈಗಾಗಲೇ ಅನೇಕ ಸಿನೆಮಾಗಳ ರೆಕಾರ್ಡ್‌ಗಳನ್ನೂ ಸಹ ಬ್ರೇಕ್ ಹಾಕಿದೆ. ಬಾಕ್ಸ್ ಆಫೀಸ್ ನಲ್ಲೂ ಸಹ ಒಳ್ಳೆಯ ಕಲೆಕ್ಷನ್ ಮಾಡಿದೆ. ಇನ್ನೂ ಕಾಂತಾರ 2 ಸಿನೆಮಾದ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿದ್ದು, ಇದೀಗ ಹೊಂಬಾಳೆ ಫಿಲಂಸ್ ನ ಮಾಲೀಕ ವಿಜಯ್ ಕಿರಂಗದೂರು ಇಂಟ್ರಸ್ಟಿಂಗ್ ಅಪ್ಡೇಟ್ ನೀಡಿದ್ದಾರೆ. ಮುಂದಿನ ವರ್ಷ ಅಂದರೇ ಏಪ್ರಿಲ್ 2024ಕ್ಕೆ ಕಾಂತಾರ-2 ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

ಕನ್ನಡದಲ್ಲಿ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಅನೇಕ ಭಾಷೆಗಳಿಗೆ ರಿಮೇಕ್ ಆದ ಸಿನೆಮಾಗಳಲ್ಲಿ ಕಾಂತಾರ ಸಿನೆಮಾದ ಸೀಕ್ವೆಲ್ ಬಗ್ಗೆ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿತ್ತು. ಈ ಬಗ್ಗೆ ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ಸಹ ಆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದಿದ್ದರು. ಜೊತೆಗೆ ಈ ಬಗ್ಗೆ ರಿಷಭ್ ನಿಖರವಾಗಿ ಏನು ಹೇಳಿರಲಿಲ್ಲ.  ಇದೀಗ ನಿರ್ಮಾಪಕ ವಿಜಯ್ ಕಿರಂಗದೂರು ಕಾಂತಾರ-2 ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಹಾಗೂ ರಿಲೀಸ್ ದಿನಾಂಕವನ್ನೂ ಸಹ ಘೋಷಣೆ ಮಾಡಿದ್ದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈಗಾಗಲೇ ತಂಡ ಕಥೆಯ ಬಗ್ಗೆ ಚರ್ಚೆಗಳನ್ನು ಮಾಡುತ್ತಿದೆ. ಚಿತ್ರೀಕರಣ ಮಾಡಲು ಸ್ಥಳಗಳನ್ನು ಸಹ ಅರಣ್ಯ ಪ್ರದೇಶಗಳತ್ತ ಚಿತ್ರತಂಡ ಬ್ಯುಸಿಯಾಗಿದೆ ಎಂದು ಹೇಳುವ ಮೂಲಕ ಕಾಂತಾರ ಅಭಿಮಾನಿಗಳಿಗೆ ಖುಷಿಯಾಗುವ ಸುದ್ದಿ ನೀಡಿದ್ದಾರೆ.

ಇನ್ನೂ ಕಾಂತಾರ-2 ಸಿನೆಮಾ ಪ್ರಸಕ್ತ ವರ್ಷದ ಜೂನ್ ಮಾಹೆಯಿಂದ ಶೂಟಿಂಗ್ ಶುರುವಾಗುವುದಾಗಿ ವಿಜಯ್ ಕಿರಂಗದೂರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ಮಾಹೆಯಲ್ಲಿ ಸಿನೆಮಾ ಬಿಡುಗಡೆಯಾಗಲಿದೆಯಂತೆ. ಇನ್ನೂ ಚಿತ್ರತಂಡ ಕಾಂತಾರ ಸಿನೆಮಾ ಶೂಟಿಂಗ್ ಮಾಡುವಾಗ ಎದುರಾದ ತೊಂದರೆಗಳು ಈ ಬಾರಿ ಆಗದಂತೆ ಈಗಾಗಲೇ ಪಕ್ಕಾ ಪ್ಲಾನ್ ಮಾಡಿಕೊಳ್ಳುತ್ತಿದೆಯಂತೆ. ಈ ಬಾರಿ ಯಾವುದೇ ತಪ್ಪುಗಳು ಎದುರಾಗದಂತೆ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಂಡು ಶೂಟಿಂಗ್ ಪ್ರಾರಂಭಿಸುವುದಾಗಿ ವಿಜಯ್ ಕಿರಂಗದೂರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಕಾಂತಾರ ಸಿನೆಮಾ ಕಡಿಮೆ ಸಮಯದಲ್ಲೇ ಹೆಚ್ಚು ಖ್ಯಾತಿ ಪಡೆದುಕೊಂಡ ಸಿನೆಮಾಗಳಲ್ಲಿ ಒಂದಾಗಿದೆ. ಸಿನಿರಂಗದ ಅನೇಕ ಸ್ಟಾರ್‍ ಗಳೂ ಸೇರಿದಂತೆ ಅನೇಕ ಗಣ್ಯರು ಸಹ ಈ ಸಿನೆಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಇದೀಗ ವಿಜಯ್ ಕಿರಂಗದೂರು ಕಾಂತಾರ 2 ಅಪ್ಡೇಟ್ ನೀಡಿದ್ದು ಅಭಿಮಾನಿಗಳಲ್ಲಿ ಮತಷ್ಟು ಕುತೂಹಲ ಮೂಡಿಸಿದೆ. ಇನ್ನೂ ಕಾಂತಾರ 2 ಸಿನೆಮಾದಲ್ಲಿ ಯಾವೆಲ್ಲಾ ಕಲಾವಿದರು ಇರಲಿದ್ದಾರೆ ಎಂಬ ಬಗ್ಗೆ ಪ್ರೇಕ್ಷಕರಲ್ಲಿ ಇಂಟ್ರಸ್ಟ್ ಸಹ ಏರಿದೆ.

Most Popular

To Top