News

ಜ್ಞಾನವಾಪಿಯ ನೆಲಮಾಳಿಗೆಯಲ್ಲಿರುವ ವಿಗ್ರಹಗಳ ದರ್ಶನ ಪಡೆದ ಯುಪಿ ಸಿಎಂ, ದೇಶದ ಒಳಿತಿಗಾಗಿ ಪ್ರಾರ್ಥನೆ ಮಾಡಿ ಯೋಗಿ……!

ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಗ್ಯಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ಹಿಂದೂ ದೇವರಿಗೆ 31 ವರ್ಷಗಳ ಬಳಿಕ ಪೂಜೆ ಮಾಡುವ ಅವಕಾಶ ದೊರೆತಿದೆ. ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರವರು ಜ್ಞಾನವಾಪಿ ಆವರಣಕ್ಕೆ ಭೇಟಿ ನೀಡಿ ವ್ಯಾಸ್ ಕಾ ತೆಖಾನಾ ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ವ್ಯಾಸ ನೆಲಮಾಳಿಗೆಯಲ್ಲಿ ಇರುವ ಹಿಂದೂ ದೇವರ ದರ್ಶನ ಪಡೆದಿದ್ದಾರೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಯೋಗಿ ರವರು ವಿವಾದಿತ ಜ್ಞಾನವಾಪಿ ಆವರಣದಲ್ಲಿರುವ ದೇವರ ದರ್ಶನ ಪಡೆದರು.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರವರು ವಾರಣಾಸಿಗೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಕಾಲ ಕಾಶಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾರಣಾಸಿಗೆ ಭೇಟಿ ನೀಡಿದ ಯೋಗಿ ಯವರು ಅಲ್ಲಿನ ಸಿದ್ದತೆಗಳ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕಾಶಿ ವಿಶ್ವನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಜ್ಞಾನವಾಪಿ ವ್ಯಾಸ ನೆಲಮಾಳಿಗೆಯಲ್ಲಿ ಹಿಂದೂ ದೇವರ ದರ್ಶನ ಪಡೆದಿದ್ದಾರೆ. ದೇಶ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಜ್ಞಾನವಾಪಿ ಮಂದಿರದೊಳಗೆ ಪೂಜೆ ಮಾಡಲು ಹಿಂದೂಗಳಿಗೆ ಅವಕಾಶ ನೀಡಿದೆ. ಅದರಂತೆ ಧಾರ್ಮಿಕ ವಿಧಿ ವಿಧಾನಗಳಂತೆ ಅರ್ಚಕರಿಂದ ಪೂಜೆ ಪುನಸ್ಕಾರಗಳು ನೆರವೇರುತ್ತಿವೆ. ಪ್ರತಿನಿತ್ಯ 5 ಬಾರಿ ಅಂದರೇ ಮುಂಜಾನೆ 3.30. ಕ್ಕೆ ಮಂಗಳ ಆರತಿ, ಮದ್ಯಾಹ್ನ 12 ಗಂಟೆಗೆ ಭೋಗ ಆರತಿ, ಸಂಜೆ 4 ಗಂಟೆಗೆ ಅಪರಾಹ್ನ ಆರತಿ, ಸಂಜೆ 7 ಗಂಟೆಗೆ ಸಾಯಂಕಾಲ ಆರತಿ ಹಾಗೂ ರಾತ್ರಿ 10.30ಕ್ಕೆ ಶಯನ ಆರತಿ ನಡೆಯಲಿದೆ.

Most Popular

To Top