ಮಲ್ಲು ಬ್ಯೂಟಿ ಅನುಪಮಾ ಪರಮೇಶ್ವರನ್ ರನ್ನು ಈ ರೀತಿ ಎಂದೂ ನೋಡಿಲ್ಲ ಎಂದ ಫ್ಯಾನ್ಸ್, ಟಿಲ್ಲು ಸ್ಕ್ವೇರ್ ಟ್ರೈಲರ್ ಸಖತ್ ಹಾಟ್ ಗುರೂ ಎಂದ ಫ್ಯಾನ್ಸ್……!

Follow Us :

ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಕೆರಿಯರ್‍ ಆರಂಭದಿಂದಲೂ ಪದ್ದತಿಯಾಗಿಯೇ ಕಾಣಿಸಿಕೊಂಡಿದ್ದರು.  ಆದರೆ ಕಳೆದ ವರ್ಷ ಮಾತ್ರ ಆಕೆ ಓವರ್‍ ಆಗಿಯೇ ಕಾಣಿಸಿಕೊಂಡಿದ್ದರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಓವರ್‍ ಆಗಿ ಗ್ಲಾಮರ್‍ ಶೋ ಮಾಡಿದರು. ಸದ್ಯ ಆಕೆ ಟಿಲ್ಲು ಸ್ಕ್ವೇರ್‍ ನಲ್ಲಿ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ಅನುಪಮಾ ಹಿರೋ ಸಿದ್ದು ಜೊನ್ನಲಗಡ್ಡ ಜೊತೆಗೆ ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಟಿಲ್ಲು ಸ್ಕ್ವೇರ್‍ ಟ್ರೈಲರ್‍ ಒಳ್ಳೆಯ ಉದಾಹರಣೆ ಎಂದು ಹೇಳಬಹುದಾಗಿದೆ.

ಮಲಯಾಳಂ ಮೂಲದ ನಟಿಯಾದರೂ ಸಹ ಅನುಪಮಾ ತೆಲುಗು ಪ್ರೇಕ್ಷರಿಗೆ ತುಂಬಾ ಹತ್ತಿರವಾದರು. ಸೌತ್ ನ ವಿವಿಧ ಭಾಷೆಗಳಲ್ಲಿ ಆಕೆ ವಿವಿಧ ಸಿನೆಮಾಗಳಲ್ಲಿ ನಟಿಸಿದ್ದರು. ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಸದ್ಯ ನಟಿ ಅನುಪಮಾ ಡಿಜೆ ಟಿಲ್ಲು-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸಿದ್ದು ಜೊನ್ನಲಗಡ್ಡ ನಟನಾಗಿ ಕಾಣಿಸಿಕೊಂಡ ಡಿಜೆ ಟಿಲ್ಲು ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಕಡಿಮೆ ಬಂಡವಾಳದಲ್ಲಿ ಈ ಸಿನೆಮಾ ಸೆಟ್ಟೇರಿದ್ದು, ಭಾರಿ ಸಕ್ಸಸ್ ಕಂಡುಕೊಂಡಿತ್ತು. ಇದೀಗ ಟಿಲ್ಲು ಸ್ಕ್ವೇರ್‍ ಸಿನೆಮಾದ ಮೇಲೆ ಸಹ ಭಾರಿ ನಿರೀಕ್ಷೆ ಹುಟ್ಟಿದೆ. ಡಿಜೆ ಟಿಲ್ಲು ಸಿನೆಮಾವನ್ನು ವಿಮಲ್ ಕೃಷ್ಣ ಎಂಬುವವರು ನಿರ್ದೇಶನ ಮಾಡಿದ್ದರು. ಆದರೆ ಟಿಲ್ಲು ಸ್ಕ್ವೇರ್‍ ಸಿನೆಮಾವನ್ನು ಮಲ್ಲಿಕ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನೂ ಟಿಲ್ಲು ಸ್ಕ್ವೇರ್‍ ನಲ್ಲಿ ಸಿದ್ದು ಜೊನ್ನಲಗಡ್ಡ ಜೊತೆಗೆ ಅನುಪಮಾ ಪರಮೇಶ್ವರನ್ ನಟಿಸುತ್ತಿದ್ದಾರೆ. ಈ ಸಿನೆಮಾದ ಪೋಸ್ಟರ್‍ ಸಹ ಭಾರಿ ಸದ್ದು ಮಾಡಿತ್ತು. ಈ ಸಿನೆಮಾ ಟ್ರೈಲರ್‍ ಅನ್ನು ಪ್ರೇಮಿಗಳ ದಿನಾಚರಣೆಯ ಅಂಗವಾಗಿ ರಿಲೀಸ್ ಮಾಡಲಾಗಿದೆ. ಈ ಟ್ರೈಲರ್‍ ನಲ್ಲಿ ಅನುಪಮಾ ಯಾರೂ ಊಹಿಸದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದು ಹಾಗೂ ಅನುಪಮಾ ನಡುವೆ ಬೋಲ್ಡ್ ಲಿಪ್ ಲಾಕ್ ಸಹ ಇದೆ. ಬಳಿಕ ಸಿದ್ದು ಕಾಮಿಡಿಯನ್ನು ತೋರಿಸಿದ್ದಾರೆ. ಅನುಪಮಾ ಈ ಹಿಂದೆ ಎಂದೂ ಈ ರೀತಿಯಾಗಿ ಕಾಣಿಸಿಕೊಂಡಿಲ್ಲ ಎಂದು ಹೇಳಬಹುದಾಗಿದೆ. ಅನುಪಮಾ ಕಿಸ್ಸಿಂಗ್ ದೃಶ್ಯಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಸಿನೆಮಾಗೆ ರಾಮ್ ಮಿರಿಯಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿತಾರ ಎಂಟರ್‍ ಟ್ರೈನ್ ಮೆಂಟ್ ಬ್ಯಾನರ್‍ ನಡಿ ಸಿನೆಮಾ ನಿರ್ಮಾಣವಾಗುತ್ತಿದೆ.

ಇನ್ನೂ ಟಿಲ್ಲು ಸ್ಕ್ವೇರ್‍ ಟ್ರೈಲರ್‍ ಅಷ್ಟೊಂದು ಇಂಟ್ರಸ್ಟಿಂಗ್ ಆಗಿಲ್ಲ ಎಂದೇ ಹೇಳಲಾಗುತ್ತಿದೆ. ಆದರೆ ಅನುಪಮಾ ಲಿಪ್ ಲಾಕ್ ಸೀನ್ ಗಾಗಿ ಟ್ರೈಲರ್‍ ಭಾರಿ ವೀಕ್ಷಣೆ ಕಂಡಿದೆ. ಈ ಹಿಂದೆ ಅನುಪಮಾ ರೌಡಿ ಭಾಯ್ಸ್ ಎಂಬ ಸಿನೆಮಾದಲ್ಲಿ ಲಿಪ್ ಲಾಕ್, ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದರೂ ಸಹ ಈ ರೇಂಜ್ ನಲ್ಲಿ ನಟಿಸಿಲ್ಲ ಎಂದೇ ಹೇಳಲಾಗುತ್ತಿದೆ. ಈ ಟ್ರೈಲರ್‍ ಕಾರಣದಿಂದ ಸಿನೆಮಾದ ಮೇಲೆ ನಿರೀಕ್ಷೆ ಏರಿದೆ ಎನ್ನಬಹುದಾಗಿದೆ.