News

ತಿರುಮಲ ತಿರುಪತಿ ಆ ದಿನ ಬಂದ್, ಒಂದು ದಿನ ತಿಮ್ಮಪ್ಪನ ದರ್ಶನ ಬಂದ್ ಆಗುತ್ತೆ….!

ಭಾರತ ದೇಶದ ಅತ್ಯಂತ ಶ್ರೀಮಂತ ಹಾಗೂ ಖ್ಯಾತಿ ಪಡೆದುಕೊಂಡ ದೇವಾಲಯಗಳ ಸಾಲಿನಲ್ಲಿ ಆಂಧ್ರಪ್ರದೇಶದ ತಿರುಪತಿ ಸಹ ಒಂದಾಗಿದೆ. ಪ್ರತಿನಿತ್ಯ ತಿರುಮಲದಲ್ಲಿ ನೆಲೆಸಿರುವ ತಿಮ್ಮಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ. ಆದರೆ ಅಕ್ಟೋಬರ್‍ ಮಾಹೆಯಲ್ಲಿ ಒಂದು ದಿನ ತಿಮ್ಮಪ್ಪನ ದರ್ಶನ ಭಾಗ್ಯ ಇರುವುದಿಲ್ಲ. ಒಂದು ದಿನದ ಮಟ್ಟಿಗೆ ತಿರುಮಲದ ಶ್ರೀವಾರಿ ದೇವಾಲಯವನ್ನು ಮುಚ್ಚಲಾಗುತ್ತದೆ ಎಂದು ಟಿಟಿಡಿ ಮಾಹಿತಿ ಹಂಚಿಕೊಂಡಿದೆ.

ಅಕ್ಟೋಬರ್‍ 29 ರಂದು ಚಂದ್ರಗ್ರಹಣದ ಕಾರಣದಿಂದ ಶ್ರೀವಾರಿ ದೇವಾಲಯವನ್ನು ಮುಚ್ಚಲಾಗುತ್ತದೆಯಂತೆ. ಅಂದು ಮುಂಜಾನೆ ಭಾಗಶಃ ಚಂದ್ರಗ್ರಹಣ ಏರ್ಪಡುವ ಕಾರಣದಿಂದ ಅ.28 ರಂದು ರಾತ್ರಿಯೇ ದೇವಾಲಯವನ್ನು ಮುಚ್ಚಲಾಗುತ್ತದೆ. ಅ.28 ರಂದು ಮುಚ್ಚಿದ ದೇವಾಲಯ ಪುನಃ ಅ.29 ರಂದು ತೆರೆಯಲಾಗುತ್ತದೆ. ಅ.29 ರಂದು 1.05 ಬೆಳಿಗ್ಗೆ ಹಾಗೂ 2.22 ರ ನಡುವೆ ಚಂದ್ರಗ್ರಹಣ ಪೂರ್ಣಗೊಳ್ಳುತ್ತದೆ ಎನ್ನಲಾಗಿದೆ. ಅ.28 ರಂದು ಸಂಜೆ 7.05 ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ವಾಡಿಕೆಯಂತೆ ಗ್ರಹಣ ಹಿಡಿಯುವುದಕ್ಕೂ ಆರು ಗಂಟೆ ಮುಂಚೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.

ಇನ್ನೂ ಅ.29 ರಂದು ಬೆಳಿಗ್ಗ್‌ಎ 3.15 ನಿಮಿಷಕ್ಕೆ ಶುದ್ದಿ ಹಾಗೂ ಸುಪ್ರಭಾತ ಸೇವೆಯನ್ನು ಖಾಸಗಿಯಾಗಿ ನಡೆಸಲಾಗುತ್ತದೆ. ನಂತರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಚಂದ್ರಗ್ರಹಣದ ಕಾರಣದಿಂದ ಸುಮಾರು 8 ಗಂಟೆಗಳ ಕಾಲ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಈ ಕಾರಣದಿಂದ ಅ.28 ರಂದು ಸಹಸ್ರ ದೀಪಾಲಂಕಾರ, ಅಂಗವಿಕಲರ ಹಾಗೂ ವೃದ್ದರ ದರ್ಶನವನ್ನು ರದ್ದುಗೊಳಿಸಲಾಗಿದೆಯೆಂದು ಎಂದು ಟಿಟಿಡಿ ಮಾಹಿತಿ ನೀಡಿದೆ. ಇನ್ನೂ ಈ ಮಾಹೆಯಲ್ಲಿ ಹೆಚ್ಚಾಗಿ ಭಕ್ತರು ಆಗಮಿಸುವ ಕಾರಣದಿಂದ ಎಸ್.ಎಸ್.ಡಿ ಟೋಕನ್ ಗಳನ್ನು ನೀಡುವುದು ನಿಲ್ಲಿಸಿದೆ. ಅ.7, 8, 14 ಹಾಗೂ 15 ದಿನಾಂಕಗಳಂದು ಟೋಕನ್ ಗಳ ವಿತರಣೆಯನ್ನು ರದ್ದು ಗೊಳಿಸಿದೆ. ಭಕ್ತರ ನೂಕು ನುಗ್ಗಲು ತಪ್ಪಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

Most Popular

To Top