ಟೀ ಮಾಡು ಅಂತಾ ಹೇಳಿದ್ದಕ್ಕೆ ಗಂಡನ ಕಣ್ಣಿಗೆ ಕತ್ತರಿಯಿಂದ ತಿವಿದ ಹೆಂಡತಿ…!

Follow Us :

ಗಂಡ ಹೆಂಡತಿಯರ ಜಗಳು ತಿಂದು ಮಲಗುವ ತನಕ ಅಂತಾರೆ, ಆದರೆ ಕೆಲವೊಮ್ಮೆ ಅಂತಹ ಗಲಾಟೆಗಳು ಅನೇಕ ರಾದ್ದಾಂತಗಳಿಗೆ ಕಾರಣವಾಗುತ್ತದೆ. ಹಲ್ಲೆಗಳ ಜೊತೆಗೆ ವಿಚ್ಚೇದನದ ವರೆಗೂ ಹೋಗುತ್ತವೆ. ಅದೇ ರೀತಿ ಪತ್ನಿಗೆ ಟೀ ಮಾಡಿಕೊಡು ಎಂದು ಕೇಳಿದ್ದಕ್ಕೆ ಕೋಪಗೊಂಡ ಪತ್ನಿ ಕತ್ತರಿಯಿಂದ ಕಣ್ಣಿಗೆ ತಿವಿದಿದ್ದಾಳೆ. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಪತಿಯನ್ನು ನೋಡಿದ ಪತ್ನಿ ಅಲ್ಲಿಂದ ಓಡಿ ಹೋಗಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಬಾಗ್ವತ್ ಜಿಲ್ಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಅಂಕಿತ್ ಎಂಬ ವ್ಯಕ್ತಿಯೇ ಹಲ್ಲೆಗೆ ಒಳಗಾದವ. ಮೂರು ವರ್ಷಗಳ ಹಿಂದೆಯಷ್ಟೆ ಅಂಕಿತ್ ಆರೋಪಿ ಮಹಿಳೆಯನ್ನು ಮದುವೆಯಾಗಿದ್ದ. ಆದರೆ ಮದುವೆಯಾದ ಕೆಲವು ದಿನಗಳ ನಂತರ ಅವರ ನಡುವೆ ಜಗಳ ನಡೆಯುತ್ತಿತ್ತಂತೆ. ಇಬ್ಬರ ನಡುವೆ ಕೆಲವೊಂದು ಸಮಸ್ಯೆಗಳಿದ್ದ ಕಾರಣ ದಿನನಿತ್ಯ ಇಬ್ಬರ ನಡುವೆ ಜಗಳ ಆಗುತ್ತಿದೆ. ಈ ಘಟನೆ ನಡೆಯುವುದಕ್ಕೂ ಮುಂಚೆ ಆರೋಪಿ ಮಹಿಳೆ ಪತಿ ಅಂಕಿತ್ ಹಾಗೂ ಅವನ ಅತ್ತೆಯ ವಿರುದ್ದ ದೈಹಿಕ ದೌರ್ಜನ್ಯಕ್ಕೆ ಸಂಬಂಧಿಸಿದ ದೂರು ಸಹ ದಾಖಲು ಮಾಡಿದ್ದಳು ಎನ್ನಲಾಗಿದೆ.

ಮೂಲಗಳ ಪ್ರಕಾರ ಅಂಕಿತ್ ತನ್ನ ಪತ್ನಿಗೆ ಒಂದು ಕಪ್ ಟೀ ಕೇಳಿದ್ದಾನೆ. ಆಗ ಪತ್ನಿ ಕೋಪಗೊಂಡು ಅಂಕಿತ್ ಕಣ್ಣಿಗೆ ಕತ್ತರಿಯಿಂದ ಹೊಡೆದಿದ್ದಾಳೆ. ಗಾಯಗೊಂಡ ಅಂಕಿತ್ ಚಿರಾಡಿದ್ದಾನೆ ಅತ್ತಿಗೆ ಮತ್ತು ಆಕೆಯ ಮಕ್ಕಳು ಅಲ್ಲಿ ಬಂದು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ. ಇನ್ನೂ ಪೊಲೀಸರು ಸ್ಥಳಕ್ಕೆ ಬರುವ ಮುಂಚೆಯೇ ಆರೋಪಿ ಪತ್ನಿ ಅಲ್ಲಿಂದ ಪರಾರಿಯಾಗಿದ್ದಾಳೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.