ಸಂಚಲನ ಸೃಷ್ಟಿ ಮಾಡಿದ ದಿ ಕೇರಳ ಸ್ಟೋರಿ, ಮತ್ತೊಂದು ಕಾಶ್ಮೀರಿ ಫೈಲ್ಸ್ ಆಗುತ್ತಾ? ಅದಾ ಶರ್ಮಾ ನಟನೆಗೆ ಫಿದಾ ಆದ ಫ್ಯಾನ್ಸ್…..!

Follow Us :

ಕೆಲವೊಂದು ಸಿನೆಮಾಗಳ ಸರಳವಾಗಿ ತೆರೆಗೆ ಬಂದರೂ ಭಾರಿ ಸಂಚಲನ ಸೃಷ್ಟಿ ಮಾಡುತ್ತವೆ. ಕಳೆದ ವರ್ಷ ಮಾರ್ಚ್ 11 ರಂದು ತೆರೆಗೆ ಬಂದ ಕಾಶ್ಮೀರಿ ಫೈಲ್ಸ್ ಸಿನೆಮಾ ಸಹ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಈ ಸಿನೆಮಾ ಅನೇಕ ವಿವಾದಗಳನ್ನು ಸಹ ಸೃಷ್ಟಿ ಮಾಡಿತ್ತು. ಇದೀಗ ಮತ್ತೊಂದು ಸಿನೆಮಾ ಅದೇ ಮಾದರಿಯಲ್ಲಿ ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ. ದಿ ಕೇರಳ ಸ್ಟೋರಿ ಎಂಬ ಸಿನೆಮಾ ಸಹ ಕಾಶ್ಮೀರಿ ಫೈಲ್ಸ್ ಸಿನೆಮಾದಂತೆ ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದ ಟ್ರೈಲರ್‍ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಅದನ್ನು ನೋಡಿದರೇ ಅಂತಹ ವಿವಾದಗಳು ಸೃಷ್ಟಿ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಕಾಶ್ಮೀರಿ ಪಂಡಿತರ ಮಾರಣಕಾಂಡದ ನೇಪಥ್ಯದಲ್ಲಿ ತೆರೆಗೆ ಬಂದ ಕಾಶ್ಮೀರಿ ಫೈಲ್ಸ್ ಸಿನೆಮಾ ಭಾರಿ ಸಂಚಲನ ಸೃಷ್ಟಿ ಮಾಡುವುದರ ಜೊತೆಗೆ ಅನೇಕ ವಿವಾದಗಳನ್ನು ಸಹ ಸೃಷ್ಟಿ ಮಾಡಿತ್ತು. ಇದೀಗ ದಿ ಕೇರಳ ಸ್ಟೋರಿ ಟ್ರೈಲರ್‍ ರಿಲೀಸ್ ಆಗಿದ್ದು, ಟ್ರೈಲರ್‍ ನೋಡಿದರೇ ಇದೂ ಸಹ ಮತ್ತೊಂದು ಕಾಶ್ಮೀರಿ ಫೈಲ್ಸ್ ಸಿನೆಮಾ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾವನ್ನು ಸುದಿಷ್ತಾ ಸೇನ್ ನಿರ್ದೇಶನ ಮಾಡುತ್ತಿದ್ದು, ಅಮೃತಲ್ ಷಾ ನಿರ್ಮಾಣ ಮಾಡುತ್ತಿದ್ದಾರೆ. ಕೇರಳದಲ್ಲಿ ಅನೇಕರು ಉಗ್ರವಾದ ಪ್ರಕರಣದಲ್ಲಿ ಸಿಲುಕಿಕೊಂಡ ಸಂಘಟನೆಗಳನ್ನು ನೋಡಿದ್ದೇವೆ. ಅಂತಹ ರಿಯಲ್ ಘಟನೆಯ ಆಧಾರದ ಮೇಲೆ ಈ ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾದಲ್ಲಿ ನಟಿ ಅದಾ ಶರ್ಮಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಆಕೆಯ ಈ ಸಿನೆಮಾದಲ್ಲಿ ಮೈಂಡ್ ಬ್ಲೋಯಿಂಗ್ ಆಗಿ ಆಕ್ಟಿಂಗ್ ಮಾಡಿದ್ದಾರೆ. ಇದೀಗ ಈ ಸಿನೆಮಾದ ಟ್ರೈಲರ್‍ ಆಸಕ್ತಿಕರವಾಗಿದೆ.

ನಟಿ ಅದಾ ಶರ್ಮಾ ಷಾಲಿನಿ ಉನ್ನಿ ಕೃಷ್ಣನ್ ಎಂಬ ಮಧ್ಯತರಗತಿ ಹಿಂದೂ ಯುವತಿ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್‍ ನಲ್ಲಿರುವಂತೆ ಇಂಡಿಯನ್ ಆರ್ಮಿ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುತ್ತಾರೆ. ನೀವು ಐಸೀಸ್ ನಲ್ಲಿ ಯಾವಾಗ ಜಾಯಿನ್ ಆಗಿದ್ದು, ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆಕೆ ನಾನು ಯಾವಾಗ ಜಾಯಿನ್ ಎಂದು ಕೇಳುವ ಬದಲು ಏಕೆ ಹಾಗೂ ಹೇಗೆ ಜಾಯಿನ್ ಆದೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ ಎಂದು ಆಕೆ ಉತ್ತರ ನೀಡುತ್ತಾರೆ. ಐಸೀಸ್ ಉಗ್ರವಾದಿಗಳು ಕೆಲವು ಏಜೆಂಟ್ ಗಳ ಮೂಲಕ ಅದಾ ಶರ್ಮಾ ರನ್ನು ಇಸ್ಲಾಮಿಕ್ ಗೆ ಕನ್ವರ್ಟ್ ಮಾಡಿದ್ದಾರೆ. ಟ್ಯಾಪ್ ಮಾಡಿ ಹೇಗೆ ಬದಲಿಸಿದರು ಎಂಬೆಲ್ಲಾ ದೃಶ್ಯಗಳು ಸಿನೆಮಾದ ಹೈಲೈಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇದೀಗ ಸಿನೆಮಾದ ಟ್ರೈಲರ್‍ ಬಿಡುಗಡೆಯಾಗಿದ್ದು ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಮೂಡಿಸಿದೆ.

ಇನ್ನೂ ಅದಾ ಶರ್ಮಾ ಉಗ್ರರ ಟ್ರಾಪ್ ನಲ್ಲಿ ಬಿದ್ದು ಮುಸ್ಲೀಂ ಯುವಕನನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಬಳಿಕ ಆಕೆ ಫಾತಿಮಾ ಆಗಿ ಹೆಸರು ಸಹ ಬದಲಿಸಿಕೊಳ್ಳುತ್ತಾರೆ. ಬಳಿಕ ಆಕೆ ಪರಿಸ್ಥಿತಿ ತುಂಬಾ ದಾರುಣವಾಗಿರುತ್ತದೆ. ಇನ್ನೂ ಈ ಸಿನೆಮಾದಲ್ಲಿ ಅದಾ ಶರ್ಮಾ ಭಾರಿ ಅದ್ಬುತವಾಗಿ ನಟಿಸಿದ್ದಾರೆ ಎನ್ನಲಾಗಿದೆ. ಇನ್ನೂ ಈ ಟ್ರೈಲರ್‍ ನೋಡಿದ ಬಳಿಕ ಈ ಸಿನೆಮಾ ಅನೇಕ ವಿವಾದಗಳು ಹಾಗೂ ಸಂಚಲನ ಸೃಷ್ಟಿ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗಲಿದೆ.