ಮಿಟೂ ಕಾರಣದಿಂದ ಪೊನ್ನಿಯನ್ ಸೆಲ್ವನ್ ಸಿನೆಮಾ ರಿಜೆಕ್ಟ್ ಮಾಡಿದ್ರಂತೆ ಅನುಷ್ಕಾ ಶೆಟ್ಟಿ, ಹೊಸ ಸುದ್ದಿ ವೈರಲ್……!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿರುವ ಪೊನ್ನಿಯನ್ ಸೆಲ್ವನ್ -1 ಸಿನೆಮಾ ಭಾರಿ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಮುಂದುವರೆದ ಭಾಗ ಸಹ ಇದೀಗ ರಿಲೀಸ್ ಆಗಿದ್ದು ಪಾಸಿಟೀವ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇನ್ನೂ ಪೊನ್ನಿಯನ್ ಸೆಲ್ವನ್-2  ಸಿನೆಮಾದ ಪ್ರಮೊಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗಿತ್ತು. ಇದೀಗ ಈ ಸಿನೆಮಾದ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಂದಿದೆ. ಈ ಸಿನೆಮಾದಲ್ಲಿ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ ನಟಿಸಬೇಕಿ‌ತ್ತಂತೆ. ಆದರೆ ಅನುಷ್ಕಾ ಶೆಟ್ಟಿ ಮಿಟೂ ಕಾರಣದಿಂದ ಆಕೆ ಸಿನೆಮಾದಲ್ಲಿ ನಟಿಸಲು ಒಪ್ಪಲಿಲ್ಲ ಎಂದು ಹೇಳಲಾಗುತ್ತಿದೆ. ಇಂತಹ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.

ಪೊನ್ನಿಯನ್ ಸೆಲ್ವನ್ ಸಿನೆಮಾದಲ್ಲಿ ಅನುಷ್ಕಾ ಶೆಟ್ಟಿ ರವರನ್ನು ಆಯ್ಕೆ ಮಾಡಿಕೊಳ್ಳಲು ಮಣಿರತ್ನಂ ರವರು ಸಂಪರ್ಕ ಮಾಡಿದ್ದರಂತೆ. ಆದರೆ ಅನುಷ್ಕಾ ಈ ಸಿನೆಮಾವನ್ನು ತಿರಸ್ಕರಿಸಿದರಂತೆ. ಪೊನ್ನಿಯನ್ ಸೆಲ್ವನ್ ನಲ್ಲಿ ಐಶ್ವರ್ಯ ರೈ ನಂದಿನಿ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ರವರನ್ನು ನಟಿಸಲು ಕೇಳಿದ್ದರಂತೆ. ಆದರೆ ಆಕೆ ಅವಕಾಶವನ್ನು ಬೇಡ ಎಂದರಂತೆ. ಆದರೆ ಆಕೆ ಈ ಸಿನೆಮಾ ರಿಜೆಕ್ಟ್ ಮಾಡಲು ಮಿಟೂ ಕಾರಣವಂತೆ. ಈ ಸುದ್ದಿ ಇದೀಗ ಕಾಲಿವುಡ್ ಸಿನಿವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ. ನಟಿ ಅನುಷ್ಕಾ ಶೆಟ್ಟಿ ಬಾಹುಬಲಿ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದರು. ಈ ಕಾರಣದಿಂದ ಆಕೆಯನ್ನು ನಂದಿನಿ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಆಕೆ ಈ ಸಿನೆಮಾವನ್ನು ರಿಜೆಕ್ಟ್ ಮಾಡಿದ್ದಾರೆ.

ಪೊನ್ನಿಯನ್ ಚಿತ್ರತಂಡ ಗೀತಾ ರಚನೆಕಾರ ಮೈರ ಮುತ್ತು ಸದ್ಯ ಮಿಟೂ ಆರೋಪ ಎದುರಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಅವರ ವಿರುದ್ದ ಅನೇಕ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬರುತ್ತಿವೆ. ವಿವಾದಾತ್ಮಕ ಹಿನ್ನೆಲೆಯ ಈ ವೈರಮುತ್ತು ಜೊತೆ ಕೆಲಸ ಮಾಡಲು ಅನುಷ್ಕಾ ಇಷ್ಟಪಟ್ಟಿಲ್ಲ. ಆದ ಕಾರಣದಿಂದ ಆಕೆ ಸಿನೆಮಾವನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ ಇದರ ಜೊತೆಗೆ ಆಕೆ ಸಂಭಾವನೆ ವಿಚಾರದಲ್ಲೂ ಸಹ ಕಾಂಪ್ರಮೈಸ್ ಆಗಿಲ್ಲ ಎಂದು ಹೇಳಲಾಗುತ್ತಿದೆ.  ಸದ್ಯ ಈ ಸುದ್ದಿಗಳು ಕಾಲಿವುಡ್ ಅಂಗಳದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಬಗ್ಗೆ ಅನುಷ್ಕಾ ಶೆಟ್ಟಿ ರವರಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ.

ಇನ್ನೂ ನಿರ್ದೇಶಕ ಮಣಿರತ್ನಂ ಈ ಸಿನೆಮಾವನ್ನು ಭಾರಿ ಮಟ್ಟದಲ್ಲಿ ತೆರೆಗೆ ತಂದಿದ್ದಾರೆ. ಅನೇಕ ವರ್ಷಗಳ ಕನಸಾಗಿದೆ. ಈ ಸಿನೆಮಾದಲ್ಲಿ ದೊಡ್ಡ ತಾರಬಳಗವೇ ಇದೆ. ಐಶ್ವರ್ಯ ರೈ, ತ್ರಿಷಾ, ವಿಕ್ರಂ, ಕಾರ್ತಿ, ಜಯಂತ ರವಿ, ಶೋಭಿತಾ ಧೂಳಿಪಾಳ ಸೇರಿದಂತೆ ಅನೇಕ ಸ್ಟಾರ್‍ ಗಳು ನಟಿಸಿದ್ದಾರೆ. ಈ ಸಿನೆಮಾಗೆ ಮ್ಯೂಸಿಕ್ ಡೈರೆಕ್ಟರ್‍ ಎ.ಆರ್‍. ರೆಹಮಾನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಏ.28 ರಂದು ಪೊನ್ನಿಯನ್ ಸೆಲ್ವನ್-2 ಸಿನೆಮಾ ಸಹ ಬಿಡುಗಡೆಯಾಗಿದ್ದು ಒಳ್ಳೆಯ ಸ್ಪಂದನೆ ಪಡೆದುಕೊಳ್ಳುತ್ತಿದೆ.