Film News

NTR31 ಸಿನೆಮಾದಲ್ಲಿ ಆ ಸ್ಟಾರ್ ನಟಿಯನ್ನು ಕರೆತರಲು ಪ್ರಶಾಂತ್ ನೀಲ್ ಪ್ಲಾನ್, ಆ ಸ್ಟಾರ್ ನಟಿ ಯಾರು ಗೊತ್ತಾ?

ಟಾಲಿವುಡ್ ಸಿನಿರಂಗದ ಜೂನಿಯರ್‍ ಎನ್.ಟಿ.ಆರ್‍ RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆಗಿದ್ದಾರೆ. ಈ ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ರವರ ಸಿನೆಮಾಗಳ ಮೇಲೆ ಭಾರಿ ಕುತೂಹಲ ಸಹ ಮೂಡಿದೆ. ಸದ್ಯ ಎನ್.ಟಿ.ಆರ್‍ ಕೊರಟಾಲ ಶಿವ ನಿರ್ದೇಶನದಲ್ಲಿ ದೇವರ ಎಂಬ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ಸ್ಯಾಂಡಲ್ ವುಡ್ ಸ್ಟಾರ್‍ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಎನ್.ಟಿ.ಆರ್‍ ಕಾಂಬಿನೇಷನ್ ನಲ್ಲಿ NTR31 ಸಿನೆಮಾ ಸಹ ಘೋಷಣೆಯಾಗಿದೆ. ಇದೀಗ ಈ ಸಿನೆಮಾದ ಸ್ಟಾರ್‍ ನಟಿಯೊಬ್ಬರನ್ನು ಕರೆತರಲು ಪ್ಲಾನ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

RRR ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ ದೇವರ ಎಂಬ ಸಿನೆಮಾ ಸೆಟ್ಟೇರಿದೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಈ ಸಿನೆಮಾ ಘೋಷಣೆಯಾದ ಬಳಿಕ ಸ್ಯಾಂಡಲ್ ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಜೂನಿಯರ್‍ ಎನ್.ಟಿ.ಆರ್‍ ಕಾಂಬಿನೇಷನ್ ನಲ್ಲಿ NTR31 ಸಿನೆಮಾ ಸಹ ಘೋಷಣೆ ಮಾಡಲಾಯಿತು. ಸದ್ಯ ಪ್ರಶಾಂತ್ ನೀಲ್ ಸಲಾರ್‍ ಸಿನೆಮಾದ ಶೂಟೀಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ಜೂನಿಯರ್‍ ಎನ್.ಟಿಆರ್‍ ಸಹ ದೇವರ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣದಿಂದ NTR31 ಸಿನೆಮಾದ ಬಗ್ಗೆ ಯಾವುದೇ ಅಪ್ಡೇಟ್ ನೀಡಿರಲಿಲ್ಲ. ಆದರೆ ಇದೀಗ ಈ ಸಿನೆಮಾದ ಬಗ್ಗೆ ಕ್ರೇಜಿ ಅಪ್ಡೇಟ್ ಒಂದು ಕೇಳಿಬರುತ್ತಿದೆ.

NTR31 ಸಿನೆಮಾದಲ್ಲಿ ಜೂನಿಯರ್‍ ಎನ್.ಟಿ.ಆರ್‍ ರವರಿಗೆ ನಾಯಕಿಯಾಗಿ ಸ್ಟಾರ್‍ ನಟಿಯನ್ನು ಕರೆತರಲಿದ್ದಾರಂತೆ. ಆಕೆ ಬೇರೆ ಯಾರೂ ಅಲ್ಲ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ. ಹೌದು ನಟಿ ಪ್ರಿಯಾಂಕಾ ಚೋಪ್ರಾ ರವರನ್ನು NTR31 ಸಿನೆಮಾಗೆ ನಾಯಕಿಯಾಗಿ ಕರೆತರಲು ಪ್ರಶಾಂತ್ ನೀಲ್ ತಂಡ ಸಿದ್ದತೆಗಳನ್ನು ಮಾಡಿಕೊಂಡಿದ್ದಾರಂತೆ. ಇನ್ನೂ ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು ಭಾರಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಈ ಸಿನೆಮಾದಲ್ಲಿ ದೊಡ್ಡ ಮಟ್ಟದ ಕಲಾವಿದರನ್ನು ಕರೆತರಲು ಚಿತ್ರತಂಡ ಪ್ಲಾನ್ ಮಾಡಿದೆ. ಅದರಂತೆ ಇದೀಗ ಜೂನಿಯರ್‍ ಎನ್.ಟಿ.ಆರ್‍ ರವರಿಗೆ ಜೋಡಿಯಾಗಿ ಪ್ರಿಯಾಂಕಾ ಚೋಪ್ರಾ ರವರನ್ನು ಆಯ್ಕೆ ಮಾಡಲು ಸಿದ್ದತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಇದೀಗ ಈ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಇನ್ನೂ ಬಾಲಿವುಡ್ ಸಿನೆಮಾಗಳ ಮೂಲಕ ಹಾಲಿವುಡ್ ಗೆ ಹಾರಿ ಗ್ಲೋಬರ್‍ ಇಮೇಜ್ ಪಡೆದುಕೊಂಡಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನೆಮಾಗಳಿಗೆ ಸೀಮಿತರಾಗಿದ್ದಾರೆ. ಇದೀಗ ಆಕೆ ಟಾಲಿವುಡ್ ಗೆ ಎಂಟ್ರಿ ಕೊಡುತ್ತಾರಾ ಅಥವಾ ಇಲ್ಲವಾ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಈ ಹಿಂದೆ ದೀಪಿಕಾ ಪಡುಕೋಣೆ ಹಾಗೂ ಮೃಣಾಲ್ ಠಾಕೂರ್‍ ರವರ ಹೆಸರುಗಳೂ ಸಹ ಕೇಳಿಬಂದಿದ್ದವು. ಇನ್ನೂ ಯಾವ ನಟಿ ಜೂನಿಯರ್‍ ಎನ್.ಟಿ.ಆರ್‍ ರವರಿಗೆ ನಾಯಕಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top