Film News

ಸಹ ನಿರ್ದೇಶಕ ನನ್ನನ್ನು ರೇಪ್ ಮಾಡಿದ್ದಾನೆ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ ಸೀನಿಯರ್ ನಟಿ ಜಯಲಲಿತಾ……!

ತೆಲುಗು ಸಿನಿರಂಗದ ಸೀನಿಯರ್‍ ನಟಿ ಜಯಲಲಿತಾ ಸುಮಾರು ದಶಕಗಳ ಕಾಲ ಸಿನಿರಂಗದಲ್ಲಿ ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಆಕೆ ಅನೇಕ ಸಿನೆಮಾಗಳಲ್ಲಿ ವ್ಯಾಂಪ್ ಪಾತ್ರಗಳ ಮೂಲಕ ನಟಿಸಿ ಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ಆಕೆ ಸಹ ನಿರ್ದೇಶಕರೊಬ್ಬರು ರೇಪ್ ಮಾಡಿದ್ದರು ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಟಾಲಿವುಡ್ ಸೀನಿಯರ್‍ ನಟಿ ಜಯಲಲಿತಾ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಅನೇಕ ಸಿನೆಮಾಗಳಲ್ಲಿ ಆಕೆ ವ್ಯಾಂಪ್ ಪಾತ್ರಗಳನ್ನು ಪೋಷಣೆ ಮಾಡಿದರು. ಸುಮಾರು ದಶಕಗಳಿಂದ ಆಕೆ ತೆಲುಗು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ರವರ ಭರತ್ ಅನೆ ನೇನು ಎಂಬ ಸಿನೆಮಾದಲ್ಲಿ ಆಕೆ ಅಸೆಂಬ್ಲಿ ಸ್ಪೀಕರ್‍ ಪಾತ್ರದಲ್ಲಿ ನಟಿಸಿದ್ದರು. ಇನ್ನೂ ಸಿನಿಮಾಗಳ ಮೂಲಕ ಜನರನ್ನು ರಂಜಿಸುವಂತಹ ಕಲಾವಿದರು ನಿಜ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು, ನೋವುಗಳನ್ನು ಎದುರಿಸುತ್ತಿರುತ್ತಾರೆ. ಅದೇ ಮಾದರಿಯಲ್ಲಿ ಜಯಲಲಿತಾ ಸಹ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರಂತೆ. ಕೆರಿಯರ್‍ ಆರಂಭದಲ್ಲಿ ಆಕೆ ಎದುರಿಸಿದ ಸಮಸ್ಯೆಗಳ ಬಗ್ಗೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸಂದರ್ಶನದಲ್ಲಿ ಜಯಲಲಿತಾ ಸಿನಿರಂಗದಲ್ಲಿ ಕಾಸ್ಟಿಂಗ್ ಕೌಚ್, ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಮಲಯಾಳಂ ಸಿನೆಮಾದಲ್ಲಿ ನಟಿಸಲು ಮೊದಲ ಬಾರಿಗೆ ಅವಕಾಶ ಬಂದಿತ್ತಂತೆ. ಆ ಸಿನೆಮಾದಲ್ಲಿ ನಟಿಸಲು ಆಕೆ ಅಲ್ಲಿಗೆ ಹೋಗಿದ್ದರಂತೆ. ಇನ್ನೂ ಮಲಯಾಳಂ ಇಂಡಸ್ಟ್ರಿಗೆ ಹೊಸಬಳಾದ ಕಾರಣ ಭಯಪಟ್ಟಿದ್ದರಂತೆ. ಈ ಸಿನೆಮಾದಲ್ಲಿ ರೇಪ್ ದೃಶ್ಯದಲ್ಲಿ ನಟಿಸಬೇಕಾಗಿದ್ದು, ದೃಶ್ಯವನ್ನು ವಿವರಿಸುವ ನೆಪದಲ್ಲಿ ಸಹ ನಿರ್ದೇಶಕ ರೂಮ್ ಗೆ ಕರೆದುಕೊಂಡು ಹೋಗಿ ರೇಪ್ ಮಾಡಿದ್ದ. ನಾನು ತಪ್ಪಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಚಿತ್ರಹಿಂಸೆ ನೀಡಿದ್ದ. ದೃಶ್ಯ ವಿವರಿಸುವ ನೆಪದಲ್ಲಿ ನನ್ನನ್ನು ನಿಜಕ್ಕೂ ಅತ್ಯಾಚಾರ ಮಾಡಿದ. ಇಲ್ಲಿಯವರೆಗೂ ಈ ವಿಚಾರವನ್ನು ನಾನು ಎಲ್ಲೂ ಹೊರಹಾಕಿಲ್ಲ, ಮನಸ್ಸಿನಲ್ಲೇ ತುಂಬಾ ನೋವನ್ನು ಅನುಭವಿಸಿದೆ ಎಂದು ಹೇಳಿಕೊಂಡಿದ್ದಾರೆ.

ಇನ್ನೂ ಸಿನಿರಂಗದಲ್ಲಿ ಆಕೆ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದರಂತೆ. ಜೊತೆಗೆ ವ್ಯಾಂಪ್ ಪಾತ್ರಗಳನ್ನು ಮಾಡಿದ ಕಾರಣದಿಂದ ತುಂಬಾ ವಿಮರ್ಶೆಗಳನ್ನು ಎದುರಿಸಿದ್ದೆ. ನನ್ನ ಹೆಸರು ಸಹ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಹೆಸರು ಒಂದೇ ಆಗಿದ್ದರಿಂದ ಅಮ್ಮ ಹೆಸರನ್ನು ಇಟ್ಟುಕೊಂಡು ಅಂತಹ ಪಾತ್ರಗಳಲ್ಲಿ ನಟಿಸುತ್ತೀಯಾ ಎಂದು ಕೆಲವೊಮ್ಮೆ ನನ್ನ ಮೇಲೆ ದಾಳಿಗೆ ಸಹ ಯತ್ನಿಸಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಚಿರಂಜೀವಿ ಅಭಿನಯದ ಖೈದಿ ಸಿನೆಮಾದಲ್ಲಿ ಸಹ ನಟಿಸುವ ಅವಕಾಶವನ್ನು ಮಿಸ್ ಮಾಡಿಕೊಂಡರಂತೆ. ಕುಟುಂಬದಲ್ಲಿನ ಸಮಸ್ಯೆಗಳ ಕಾರಣದಿಂದ ವ್ಯಾಂಪ್ ಪಾತ್ರಗಳಲ್ಲಿ ನಟಿಸಬೇಕಾಯ್ತು ಎಂದು ಹೇಳಿಕೊಂಡಿದ್ದಾರೆ.

Most Popular

To Top