ಜೈಲಿನಲ್ಲಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ರವರನ್ನು ಭೇಟಿಯಾಗಲಿದ್ದಾರಂತೆ ಸೂಪರ್ ಸ್ಟಾರ್ ರಜನಿಕಾಂತ್….!

Follow Us :

ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಘೋಷಣೆಗೂ ಮುಂಚೆಯೇ ರಾಜಕೀಯ ದಿನೇ ದಿನೇ ರಂಗೇರುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಟಿಡಿಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ರವರನ್ನು ಸ್ಕಿಲ್ ಡೆವಲಪ್‌ಮೆಂಟ್ ಹಗರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಚಂದ್ರಬಾಬು ನಾಯ್ಡು ರವರಿಗೆ ದಿನೇ ದಿನೇ ಬೆಂಬಲ ಸಹ ವ್ಯಕ್ತವಾಗುತ್ತಿದೆ. ಇದೀಗ ಚಂದ್ರಬಾಬು ನಾಯ್ಡು ರವರನ್ನು ಸೂಪರ್‍ ಸ್ಟಾರ್‍ ರಜನಿಕಾಂತ್ ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ಸುದ್ದಿ ಹಾಟ್ ಟಾಪಿಕ್ ಆಗಿದೆ.

ಇನ್ನೇನು ಕೆಲವೇ ತಿಂಗಳುಗಳಲ್ಲಿ ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣಾ ಕಾವು ಜೋರಾಗಿದೆ. ಜೊತೆಗೆ ಅನೇಕ ರಾಜಕೀಯ ಘಟನೆಗಳು ಸಹ ನಡೆಯುತ್ತಿವೆ. ಸೆ.9 ರಂದು ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ರವರನ್ನು ಸ್ಕಿಲ್ ಡೆವೆಲೆಪ್ ಮೆಂಟ್ ಯೋಜನೆಯ ಅವ್ಯವಹಾರದ ಪ್ರಕರಣದಲ್ಲಿ ಬಂಧಿಸಿದ್ದು, ಟಿಡಿಪಿ ನಾಯಕರು ಹಾಗೂ ಕಾರ್ಯಕರ್ತರು ಭಾರಿ ವಿರೋಧ ವ್ಯಕ್ತಪಡಿಸಿ ಅನೇಕ ಕಡೆ ಪ್ರತಿಭಟನೆ ಗಳನ್ನು ಸಹ ನಡೆಸುತ್ತಿದ್ದಾರೆ. ಕಳೆದರಡು ದಿನಗಳ ಹಿಂದೆಯಷ್ಟೆ ಪವನ್ ಕಲ್ಯಾಣ್ ಸಹ ಚಂದ್ರಬಾಬು ನಾಯ್ಡು ರವರನ್ನು ಭೇಟಿಯಾಗಲು ಬಂದಿದ್ದು, ದೊಡ್ಡ ಮಟ್ಟದಲ್ಲೇ ರಾಜಕೀಯ ಹೈಡ್ರಾಮ ನಡೆದಿತ್ತು. ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಲಾಗಿತು. ಬಳಿಕ ಪವನ್ ಕಲ್ಯಾಣ್, ನಾರಾ ಲೋಕೇಶ್ ಹಾಗೂ ನಂದಮೂರಿ ಬಾಲಕೃಷ್ಣ ರವರು ಚಂದ್ರಬಾಬು ರವರನ್ನು ಭೇಟಿಯಾಗಿ ಬಳಿಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಹಾಗೂ ಜನಸೇನಾ ಮೈತ್ರಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಸಹ ಮಾಡಲಾಯಿತು.

ಇನ್ನೂ ಜೈಲಿನಲ್ಲಿರುವ ಚಂದ್ರಬಾಬು ನಾಯ್ಡು ರವರಿಗೆ ದಿನೇ ದಿನೇ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ಚಂದ್ರಬಾಬು ರವರನ್ನು ಭೇಟಿಯಾಗಲು ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ಸಹ ರಾಜಮಂಡ್ರಿಗೆ ಬರಲಿದ್ದಾರೆ. ಸೂಪರ್‍ ಸ್ಟಾರ್‍ ಭೇಟಿ ಇದೀಗ ರಾಜಕೀಯ ವಲಯದಲ್ಲಿ ಮತಷ್ಟು ಸಂಚಲನ ಸೃಷ್ಟಿಸಿದೆ. ಈಗಾಗಲೇ ಚಂದ್ರಬಾಬು ರವರಿಗೆ ದೊಡ್ಡ ದೊಡ್ಡ ರಾಜಕೀಯ ನಾಯಕರ ಬೆಂಬಲ ದೊರೆಯುತ್ತಿದ್ದು, ಇದೀಗ ರಜನಿಕಾಂತ್ ರವರೂ ಸಹ ಭೇಟಿ ಯಾಗುತ್ತಿರುವ ಹಿನ್ನೆಲೆಯಲ್ಲಿ ಮತಷ್ಟು ಹೈಪ್ ಏರಲಿದೆ ಎಂದು ಹೇಳಲಾಗುತ್ತಿದೆ.