Film News

ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಬಗ್ಗೆ ಅಲ್ಲು ಅರವಿಂದ್ ಕಾಮೆಂಟ್ಸ್, ನನ್ನ ಸೊಸೆ ರಿಚ್, ಆಕೆಗೆ ಆ ಅವಶ್ಯಕತೆಯಿಲ್ಲ ಎಂದ ಅಲ್ಲು ಅರವಿಂದ್..!

ತೆಲುಗು ಸಿನಿರಂಗದ ದೊಡ್ಡ ಕುಟುಂಬಗಳಲ್ಲಿ ಅಲ್ಲು ಅರವಿಂದ್ ಕುಟುಂಬ ಸಹ ಒಂದಾಗಿದೆ. ಇನ್ನೂ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ಮದುವೆಯಾಗಿ ಮಕ್ಕಳೊಂದಿಗೆ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ಬನ್ನಿ ವೈಫ್ ಸ್ನೇಹಾ ಸಹ ಸಖತ್ ಸುದ್ದಿಯಾಗುತ್ತಿದ್ದಾರೆ. ಕೆಲವು ದಿನಗಳಿಂದ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಸಹ ಹಂಚಿಕೊಳ್ಳುತ್ತಾ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಇನ್ನೂ ಆಕೆ ಸಿನೆಮಾಗಳಲ್ಲೂ ಸಹ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಇದಕ್ಕೆ ಅಲ್ಲು ಫ್ಯಾಮಿಲಿ ಸಹ ಕ್ಲಾರಿಟಿ ಕೊಟ್ಟಿದೆ. ಇದೀಗ ಸ್ನೇಹಾ ಮಾವ ಅಲ್ಲು ಅರವಿಂದ್ ಆಕೆಯ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.

ತೆಲುಗು ಸಿನಿರಂಗದ ಯಂಗ್ ನಟ ಸುಹಾಸ್ ಅಭಿನಯದ ರೈಟರ್‍ ಪದ್ಮಭೂಷಣ್ ಎಂಬ ಸಿನೆಮಾ ಕಳೆದೆರಡು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿದ್ದು, ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಈ ಸಿನೆಮಾ ಸಕ್ಸಸ್ ಆದ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಿರ್ಮಾಪಕ ಅಲ್ಲು ಅರವಿಂದ್ ಬಂದಿದ್ದರು. ಈ ವೇಳೆ ಅಲ್ಲು ಅರವಿಂದ್ ಅನೇಕ ಕಾಮೆಂಟ್ ಗಳನ್ನು ನೀಡಿದ್ದಾರೆ. ಪ್ರತಿಯೊಂದು ಹೆಣ್ಣು ಮಗು ತನ್ನ ಕುಟುಂಬದೊಂದಿಗೆ ರೈಟರ್‍ ಪದ್ಮಭೂಷಣ್ ಸಿನೆಮಾ ನೋಡಬೇಕು. ಹೆಣ್ಣು ಮಗು ಮನೆಯಲ್ಲೇ ಇರಬೇಕು ಎಂಬುದು ಸರಿಯಲ್ಲ. ಪ್ರತಿ ಹೆಣ್ಣು ಮಗು ಓದಿ, ಮದುವೆಯಾಗಿ ಮಕ್ಕಳನ್ನು ಹೆರಬೇಕು ಎಂದು ಕೊಂಡಿರುತ್ತಾಳೆ. ಆದರೆ ಅವರಿಗೂ ಅಭಿಪ್ರಾಯಗಳು, ಇಷ್ಟಗಳು ಇರುತ್ತದೆ ಎಂಬುದನ್ನು ಹೆಣ್ಣು ಮಕ್ಕಳ ತಂದೆ ತಾಯಿ ಗುರ್ತಿಸುವುದಿಲ್ಲ ಎಂದಿದ್ದಾರೆ.

ಇನ್ನೂ ನನ್ನ ಸೊಸೆ ಸ್ನೇಹಾ ರಿಗೆ ಕೆಲಸ ಮಾಡುವ ಅವಸರವೇ ಇಲ್ಲ. ಆಕೆ ಹುಟ್ಟಿದಾಗಿನಿಂದಲೇ ಆಸ್ತಿವಂತರ ಮನೆಯಲ್ಲಿ ಹುಟ್ಟಿದ್ದಾರೆ. ಅಲ್ಲು ಅರ್ಜುನ್ ರಂತಹ ಸ್ಟಾರ್‍ ನಟನನ್ನು ಮದುವೆಯಾದರು. ಆದರೂ ಸಹ ಆಕೆ ಇನ್ನೂ ಕೆಲಸ ಮಾಡುತ್ತಿದ್ದಾರೆ. ಅಲ್ಲು ಸ್ನೇಹಾ ಒಂದು ಆನ್ ಲೈನ್ ಪೊಟೋ ಸ್ಟುಡಿಯೋ ಒಂದನ್ನು ನಿರ್ವಹಣೆ ಮಾಡುತ್ತಿದ್ದಾರೆ. ಅದರ ಜೊತೆಗೆ ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ಸಹ ಹೊತ್ತುಕೊಂಡಿದ್ದಾರೆ ಎಂದು ಸೊಸೆ ಸ್ನೇಹಾರೆಡ್ಡಿಯವರ ಬಗ್ಗೆ ಪ್ರಶಂಸೆಗಳನ್ನು ಸುರಿಮಳೆಗೈದಿದ್ದಾರೆ. ಇನ್ನೂ ರೈಟರ್‍ ಪದ್ಮಭೂಷಣ್ ನಿರ್ದೇಶ, ನಟ ಸುಹಾಸ್ ಸೇರಿದಂತೆ ಇಡೀ ಚಿತ್ರತಂಡವನ್ನು ಸಹ ಅಲ್ಲು ಅರವಿಂದ್ ಪ್ರಶಂಸೆ ಮಾಡಿದ್ದಾರೆ. ನಾನು ಈ ಸಿನೆಮಾ ನೋಡಿದ ಬಳಿಕ ಮನೆಗೆ ಹೋದ ಕೂಡಲೇ ನನ್ನ ಪತ್ನಿಗೆ ನಿನ್ನ ಜೀವನದಲ್ಲಿ ನೀನು ಏನು ಆಗಬೇಕು ಎಂದುಕೊಂಡಿದ್ದೆ ಎಂದು ಕೇಳಿದ್ದೇನೆ ಎಂದು ಅಲ್ಲು ಅರವಿಂದ್ ತಿಳಿಸಿದ್ದಾರೆ.

ಇನ್ನೂ ಅಲ್ಲು ಅರ್ಜುನ್ ಪತ್ನಿ ಅಲ್ಲು ಸ್ನೇಹಾ ಸಹ ಸೋಷಿಯಲ್ ಮಿಡಿಯಾದಲ್ಲಿ ಫ್ಯಾಷನ್ ಐಕಾನ್ ಎಂತಲೇ ಖ್ಯಾತಿ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಹಾಟ್ ಪೊಟೋಶೂಟ್ಸ್ ಸಹ ಹಂಚಿಕೊಳ್ಳುತ್ತಾ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ತನ್ನ ಪತಿ ಅಲ್ಲು ಅರ್ಜುನ್ ಹಾಗೂ ಮಕ್ಕಳ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.

Most Popular

To Top