ಅನಾಥಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮಂಚು ಮನೋಜ್, ಎಲ್ಲರಿಂದ ಮೆಚ್ಚುಗೆ….!

Follow Us :

ತೆಲುಗು ಸಿನಿರಂಗದ ಮಂಚು ಕುಟುಂಬದ ನಟ ಮಂಚು ಮನೋಜ್ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಮಂಚು ಕುಟುಂಬದಲ್ಲಿ ಎಲ್ಲರೂ ಸದಾ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಆದರೆ ಮಂಚು ಮನೋಜ್ ಮಾತ್ರ ಕೊಂಚ ಟ್ರೋಲಿಂಗ್ ನಿಂದ ಹೊರಗಿರುತ್ತಾರೆ. ಇನ್ನೂ ಮನೋಜ್ ಸಹ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. ಅವರ ಸಾಮಾಜಿಕ ಸೇವೆಗೆ ಅನೇಕರು ಮೆಚ್ಚುಗೆ ಸಹ ಸೂಚಿಸುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಮನೋಜ್ ಒಳ್ಳೆಯ ಮನಸ್ಸನ್ನು ಸಾರಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಅನಾಥಾಶ್ರಮದಲ್ಲಿ ಆಚರಿಸಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಮಂಚು ಕುಟುಂಬದಲ್ಲಿ ಮನೋಜ್ ಕೊಂಚ ವಿಭಿನ್ನ ಎಂದೇ ಹೇಳಬಹುದು. ಆತ ಏನೆ ಮಾಡಿದರೂ ವಿಭಿನ್ನವಾಗಿಯೇ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಭೂಮಾ ಮೋನಿಕಾ ರೆಡ್ಡಿಯವರನ್ನು ಮದುವೆಯಾದರು. ತಾನು ಅಂದುಕೊಂಡದ್ದು ಸಾಧಿಸಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಇಬ್ಬರೂ ಪ್ರೀತಿಸಿ ಮದುವೆಯಾದರು. ಅವರ ಮದುವೆ ವಿಚಾರ ಸಹ ದೊಡ್ಡ ಮಟ್ಟದಲ್ಲೇ ಚರ್ಚೆಯಾಗಿತ್ತು. ಒಂದಲ್ಲ ಒಂದು ವಿಚಾರದಿಂದ ಸದಾ ಸುದ್ದಿಯಲ್ಲೇ ಇತ್ತು ಮಂಚು ಕುಟುಂಬ. ಇನ್ನೂ ಕಳೆದ ಮೇ.20 ರಂದು ಮಂಚು ಮನೋಜ್ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅದು ಅನಾಥಾಶ್ರಮಕ್ಕೆ ತೆರಳಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮಂಚು ಮನೋಜ್ ತನ್ನ ಹುಟ್ಟುಹಬ್ಬದಂದು ಗಾಜುಲ ರಾಮಾರಂ ಎಂಬಲ್ಲಿರುವ ಕೇರ್‍ ಅಂಡ್ ಲವ್ ಎಂಬ ಆಶ್ರಮಕ್ಕೆ ಹೋಗಿದ್ದಾರೆ. ಅಲ್ಲಿನ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಕ್ಕಳೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತಾ, ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದಾರೆ. ಜೊತೆಗೆ ಅವರೊಂದಿಗೆ ಆಟವಾಡುತ್ತಾ ಕೇಕ್ ಕತ್ತರಿಸಿ ಸಂತೋಷದಿಂದಲೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಜೊತೆಗೆ ಅಲ್ಲಿನ  ಮಕ್ಕಳಿಗೆ ಪುಸ್ತಗಳು, ಬ್ಯಾಗ್ ಗಳು, ಸ್ವೀಟ್ ಹಾಗೂ ಆಟಿಕೆಗಳನ್ನು ನೀಡಿದ್ದಾರೆ. ಇನ್ನೂ ಮನೋಜ್ ಅನಾಥಾಶ್ರಮದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವು ತುಂಬಾ ಸಂತೋಷವಾದದು. ಇಂತಹ ಅನಾಥ ಮಕ್ಕಳಿಗಾಗಿ ಎಲ್ಲರೂ ಮುಂದೆ ಬರಬೇಕು. ಪ್ರತಿಯೊಬ್ಬರು ಮಕ್ಕಳ ಭವಿಷ್ಯಕ್ಕಾಗಿ ಶ್ರಮವಹಿಸಬೇಕು. ಮುಂದಿನ ದಿನಗಳಲ್ಲಿ ಮತಷ್ಟು ಮಕ್ಕಳ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ ಎಂದು ಮನೋಜ್ ಹೇಳಿದ್ದಾರೆ.

ಇನ್ನೂ ಮನೋಜ್ ಹುಟ್ಟು ಹಬ್ಬದ ಸೆಲೆಬ್ರೇಷನ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಎಲ್ಲರಿಂದಲೂ ಪ್ರಶಂಶೆ ವ್ಯಕ್ತವಾಗುತ್ತಿದೆ. ಇನ್ನೂ ಮನೋಜ್ ಹುಟ್ಟುಹಬ್ಬದ ಅಂಗವಾಗಿ ವಾಟ್ ದಿ ಫಿಷ್ ಸಿನೆಮಾದ ಗ್ಲಿಂಪ್ಸ್ ಸಹ ಬಿಡುಗಡೆ ಮಾಡಲಾಗಿದೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.