ಬೆಡ್ ರೂಂ ದೃಶ್ಯಗಳನ್ನು ಮಾಡುತ್ತಿದ್ದಾಗ ನಾನು ಆ ರೀತಿಯಲ್ಲೆ ಫೀಲ್ ಆಗುತ್ತೇನೆ ಎಂದ ಅಂಜಲಿ, ವೈರಲ್ ಆದ ಕಾಮೆಂಟ್ಸ್…..!

Follow Us :

ತೆಲುಗು ಸಿನೆಮಾಗಳಲ್ಲಿ ತುಂಬಾ ಸಂಪ್ರದಾಯಬದ್ದವಾಗಿ ಕಾಣಿಸಿಕೊಳ್ಳುವ ಅಂಜಲಿ ಸಾಕಷ್ಟು ಸಿನೆಮಾಗಳಲ್ಲಿ ಅದೇ ರೀತಿಯ ಪಾ‌ತ್ರಗಳನ್ನು ಮಾಡಿದ್ದಾರೆ. ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ಕೊಂಚ ಹಾಟ್ ಆಗಿಯೂ, ಕೆಲವೊಂದು ಸಿನೆಮಾಗಳಲ್ಲಿ ನೆಗೆಟೀವ್ ಪಾತ್ರಗಳಲ್ಲೂ ಸಹ ನಟಿಸುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ. ಜೊತೆಗೆ ಆಕೆ ತನ್ನ ಸಿನಿ ಕೆರಿಯರ್‍ ನಲ್ಲಿ ತುಂಬಾನೆ ಏರು ಪೇರುಗಳು, ವಿವಾದಗಳು, ಕಷ್ಟ ನೋವುಗಳನ್ನು ಎದುರಿಸಿದ್ದಾರೆ. ಆದರೂ ಸಹ ಆಕೆ ತನ್ನದೇ ಆದ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಇದೀಗ ಆಕೆ ನೀಡಿದ ಕೆಲವೊಂದು ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ತೆಲುಗು ನಟಿ ಅಂಜಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಅಭಿನಯಿಸುತ್ತಿರುವ ಗೇಮ್ ಚೇಂಜರ್‍, ವಿಶ್ವಕ್ ಸೇನ್ ಜೊತೆಗೆ ಒಂದು ಸಿನೆಮಾದಲ್ಲಿ ಹಾಗೂ ಬಹಿಷ್ಕರಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಅಂಜಲಿ ತೆಲುಗು, ತಮಿಳು ಸಿನೆಮಾಗಳಲ್ಲಿ ಸ್ಟಾರ್‍ ನಟರೊಂದಿಗೆ ನಟಿಸಿದ್ದಾರೆ. ತನ್ನದೇ ಆದ ನಟನೆಯೊಂದಿಗೆ ಎಲ್ಲರನ್ನು ರಂಜಿಸುತ್ತಿದ್ದಾರೆ. ಆಗಾಗ ಸ್ಪೇಷಲ್ ಸಾಂಗ್ ಗಳ ಮೂಲಕವೂ ಸಹ ಸದ್ದು ಮಾಡುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಗಾಗ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಇದೀಗ ನಟಿ ಅಂಜಲಿ ಕೆಲವೊಂದು ಬೋಲ್ಡ್ ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ತಾನು ಹಿರೋಗಳೊಂದಿಗೆ ನಟಿಸುವಂತಹ ಕಿಸ್ಸಿಂಗ್, ಬೆಡ್ ರೂಂ ದೃಶ್ಯಗಳ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಿನೆಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳು, ಬೆಡ್ ರೂಂ ದೃಶ್ಯಗಳು ಬರೋದು ಸಹಜ. ಅವಶ್ಯಕತೆ ಬಿದ್ದಾಗ ಆ ರೀತಿಯ ಸನ್ನಿವೇಶಗಳಲ್ಲಿ ನಟಿಸಲೇ ಬೇಕಾಗುತ್ತದೆ. ಆದರೆ ಅಂತಹ ದೃಶ್ಯಗಳಲ್ಲಿ ನಟಿಸುವಾಗ ಯಾರಿಗಾದರೂ ಕಿರಿಕಿರಿ ತಪ್ಪಿದ್ದಲ್ಲ. ಏಕೆಂದರೇ ಆ ದೃಶ್ಯಗಳನ್ನು ಚಿತ್ರೀಕರಿಸುವಾಗ ಸುತ್ತಲೂ ಟೆಕ್ನಿಷಿಯನ್ಸ್ ಜೊತೆಗೆ ಕಲಾವಿದರೂ ಸಹ ಇರುತ್ತಾರೆ. ಅವರೆಲ್ಲಾ ನನ್ನ ಬಗ್ಗೆ ಏನು ಯೋಚಿಸುತ್ತಿರುತ್ತಾರೆ ಎಂಬ ಭಯ ಕಾಡುತ್ತಿರುತ್ತದೆ. ಆ ಸಮಯದಲ್ಲಿ ಬರುವಂತಹ ಅವಮಾನವನ್ನು ಬಚ್ಚಿಟ್ಟುಕೊಂಡು ತುಂಬಾ ಸಮಸ್ಯೆಯಿಂದಲೇ ಅಂತಹ ದೃಶ್ಯಗಳಲ್ಲಿ ನಟಿಸುತ್ತೇನೆ. ಇಬ್ಬರು ಪ್ರೇಮಿಗಳ ನಡುವಣ ಕೆಮಿಸ್ಟ್ರಿಗೂ, ಇಬ್ಬರು ನಟರ ನಡುವಣ ಕೆಮಿಸ್ಟ್ರಿಗೂ ತುಂಬಾನೆ ವ್ಯತ್ಯಾಸ ಇರುತ್ತದೆ. ಆ ಕಾರಣದಿಂದಲೇ ನಾನು ಅಂತಹ ದೃಶ್ಯಗಳಲ್ಲಿ ನಟಿಸುವಾಗ ತುಂಬಾನೆ ಸಮಸ್ಯೆ ಎದುರಿಸುತ್ತೇನೆ ಎಂದು ಅಂಜಲಿ ಹೇಳಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.