Film News

ಬೈಕ್ ಅಪಘಾತವನ್ನು ನೆನೆದು ಕಣ್ಣೀರಾಕಿದ ಸುಪ್ರೀಂ ಹಿರೋ ಸಾಯಿ ಧರಮ್ ತೇಜ್….!

ಮೆಗಾ ಕುಟುಂಬದ ಸುಪ್ರೀಂ ಹಿರೋ ಸಾಯಿ ಧರಮ್ ತೇಜ್ ಈಗಾಗಲೇ ಸಿನಿರಂಗಲ್ಲಿ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಸದ್ಯ ಅವರು ವಿರೂಪಾಕ್ಷ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. 90 ರ ದಶಕದಲ್ಲಿನ ಕೆಲವೊಂದು ಗ್ರಾಮಗಳಲ್ಲಿದ್ದಂತಹ ಮೂಡನಂಬಿಕೆ, ಮಾಟಮಂತ್ರ ಮೊದಲಾದ ವಿಚಾರಗಳ ಕಥೆಯನ್ನು ಆಧರಿಸಿ ಸಿನೆಮಾ ಇದಾಗಿದೆ. ಈ ಸಿನೆಮಾ ಇದೇ ಏ.21 ರಂದು ತೆರೆಗೆ ಬರಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಸಾಯಿ ಧರಮ್ ತೇಜ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಬೈಕ್ ಅಪಘಾತವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.

ವಿರೂಪಾಕ್ಷ ಸಿನೆಮಾದ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ಸಾಯಿ ಧರಮ್ ತೇಜ್, ಸಂಯುಕ್ತ ಮಿನನ್, ಕಾರ್ತಿಕ್ ದಂಡು ಸೇರಿದಂತೆ ಚಿತ್ರತಂಡದ ಅನೇಕರು ಹಾಜರಾಗಿದ್ದರು. ಇನ್ನೂ ಈ ಕಾರ್ಯಕ್ರಮಕ್ಕೆ ಸ್ಟಾರ್‍ ನಿರ್ದೇಶಕ ಸುಕುಮಾರ್‍ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕೆಲವು ತಿಂಗಳುಗಳ ಹಿಂದೆಯಷ್ಟೆ ಸಾಯಿ ಧರಮ್ ತೇಜ್ ಕಳೆದ 2021 ರಲ್ಲಿ ಬೀಕರ ಅಪಘಾತಕ್ಕೆ ಗುರಿಯಾಗಿದ್ದರು. ಈ ಅಪಘಾತದ ಬಳಿಕ ಸಾಯಿ ಧರಮ್ ತೇಜ್ ನಟಿಸಿದ ಸಿನೆಮಾ ಇದಾಗಿದೆ. ಈ ಹಿನ್ನೆಲೆಯಲ್ಲಿ ಈ ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆ ಸಹ ಮೂಡಿದೆ. ಇನ್ನೂ ಕಾರ್ಯಕ್ರಮದಲ್ಲಿ ಸಾಯಿ ಧರಮ್ ತೇಜ್ ಮಾತನಾಡುತ್ತಾ ಬೈಕ್ ಆಕ್ಸಿಡೆಂಟ್ ಬಗ್ಗೆ ಮಾತನಾಡಿದ್ದಾರೆ. ಅಪಘಾತದ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ.

ಈ ವೇಳೆ ಮಾತನಾಡಿದ ಸಾಯಿ ಧರಮ್ ತೇಜ್ ಎಮೋಷನಲ್ ಆಗಿದ್ದಾರೆ. ಸದಾ ಲವಲವಿಕೆಯಿಂದ ಸಂತೋಷದಿಂದ ಕಾಣುತ್ತಿದ್ದ ಸಾಯಿಧರಮ್ ತೇಜ್ ಮೊದಲ ಬಾರಿಗೆ ಬೈಕ್ ಅಪಘಾತವನ್ನು ನೆನಪಿಸಿಕೊಂಡು ಎಮೋಷನಲ್ ಆಗಿದ್ದಾರೆ. ಕಳೆದ 2021 ಸೆಪ್ಟೆಂಬರ್‍ 10 ರಂದು ನಾನು ಆಕಸ್ಮಿಕವಾಗಿ ಬೈಕ್ ನಿಂದ ಜಾರಿ ಬಿದ್ದೆ. ನಾನು ಬೈಕ್ ಚಲಿಸಿದ್ದೆ ತಪ್ಪು. ಬಳಿಕ ಅದು ಏನಾಯಿತು ನಿಮಗೆ ಎಲ್ಲವೂ ತಿಳಿದಿದೆ. ನಿಮ್ಮೆಲ್ಲರನ್ನೂ ನಾನು ತುಂಬಾ ಟೆನ್ಷನ್ ಗೆ ಗುರಿ ಮಾಡಿದ್ದೆ. ನನ್ನನ್ನು ಕ್ಷಮಿಸಿ ಎಂದು, ನಾನು ಸುಮಾರು ದಿನಗಳ ಕಾಲ ಕೋಮದಲ್ಲೇ ಇದ್ದೆ. ಕಣ್ಣು ತೆರೆದ ಕೂಡಲೇ ನಾನು ನಮ್ಮ ತಾಯಿ ಹಾಗೂ ತಮ್ಮನನ್ನು ನೋಡಿದೆ. ಅವರಿಗೆ ಕ್ಷಮಿಸಿ ಎಂದು ಕೇಳಲು ನನಗೆ ಮಾತು ಸಹ ಬರಲಿಲ್ಲ. ನಮ್ಮ ತಾಯಿಗೆ ಕ್ಷಮಿಸಿ ಎಂದು ಹೇಳಲು ಸಾಧ್ಯವಾಗದೇ ಮನಸ್ಸಿನಲ್ಲೇ ತುಂಬಾ ನೋವನ್ನು ಅನುಭವಿಸಿದ್ದೆ, ಎಂದು ಹೊಟ್ಟೆ ಹೊಡೆದುಕೊಂಡು ವೇದಿಕೆಯ ಮೇಲೆ ಕಣ್ಣಿರಿಟ್ಟಿದ್ದಾರೆ.

ಇನ್ನೂ ಆ ದುರಂತದಿಂದ ಹೊರಬಂದು ಜೀವನ ಏನು ಎಂಬುದನ್ನು ತಿಳಿದುಕೊಂಡೆ. ಇದೀಗ ನಾನು ನನ್ನ ಜೀವನವನ್ನು ನೋಡುವ ರೀತಿ ಬದಲಿಸಿದ್ದೇನೆ. ಇನ್ನೂ ಕಷ್ಟ ಪಡುತ್ತೇನೆ. ನಿಮ್ಮ ಪ್ರೀತಿಯನ್ನು ಪಡೆಯುತ್ತೇನೆ ಎಂದು ಎಮೋಷನಲ್ ಆಗಿ ಮಾತನಾಡಿದ್ದಾರೆ. ಅಷ್ಟೇಅಲ್ಲದೇ ಪ್ರತಿಯೊಬ್ಬರೂ ಹೆಲ್ಮೇಟ್ ಧರಿಸಿ ಬೈಕ್ ಚಲಾಯಿಸಬೇಕೆಂದು ಎಲ್ಲರಲ್ಲೂ ಮನವಿ ಮಾಡಿದ್ದಾರೆ. ಇನ್ನೂ ಸಾಯಿ ಧರಮ್ ತೇಜ್ ರವರ ಈ ವಿಡಿಯೋ ವೈರಲ್ ಆಗುತ್ತಿದೆ. ಇನ್ನೂ ವಿರೂಪಾಕ್ಷ ಸಿನೆಮಾಗಾಗಿ ತೇಜ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Most Popular

To Top