Film News

ಫಿಲಿಫೈನ್ಸ್ ನಲ್ಲಿ ಎಂಜಾಯ್ ಮಾಡುತ್ತಿರುವ ನರೇಶ್-ಪವಿತ್ರಾ, ಈ ಮಧುರ ಕ್ಷಣಗಳನ್ನು ಮರೆಯೋಕೆ ಸಾಧ್ಯವಿಲ್ಲ ಎಂದ ಜೋಡಿ….!

ಕೆಲವು ತಿಂಗಳುಗಳಿಂದ ಟಾಲಿವುಡ್ ಸಿನಿರಂಗದ ಸೀನಿಯರ್‍ ನಟ ನರೇಶ್ ಹಾಗೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಪವಿತ್ರಾ ಲೋಕೇಶ್ ಸಹಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿ ಪ್ರತಿನಿತ್ಯ ಕೇಳಿಬರುತ್ತಲೇ ಇದೆ. ಅವರ ಬಗ್ಗೆ ಅನೇಕ ರೂಮರ್‍ ಗಳು, ಕಥನಗಳು ಕೇಳಿಬರುತ್ತಲೇ ಇದೆ. ವಿವಾದಾತ್ಮಕ ಹೇಳಿಕೆಗಳು, ವಿವಾದಾತ್ಮಕ ಕೆಲಸಗಳ ಮೂಲಕ ಸುದ್ದಿಯಾಗುತ್ತಿರುವ ಈ ಜೋಡಿ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಸದ್ಯ ಈ ಜೋಡಿ ಫಿಲಿಫೈನ್ಸ್ ಪ್ರವಾಸದಲ್ಲಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸುಮಾರು ವರ್ಷಗಳಿಂದ ನರೇಶ್ ಹಾಗೂ ಪವಿತ್ರಾ ಸಹಜೀವನ ನಡೆಸುತ್ತಿದ್ದು, ಸದಾ ಸುದ್ದಿಯಲ್ಲೇ ಇರುತ್ತಾರೆ. ಇಷ್ಟು ದಿನಗಳ ಕಾಲ ಅವರಿಬ್ಬರೂ ತಮ್ಮ ರಿಲೇಷನ್ ಶಿಪ್ ಬಗ್ಗೆ ಓಪೆನ್ ಆಗಿರಲಿಲ್ಲ. ಮಳ್ಳಿ ಪೆಳ್ಳಿ ಸಿನೆಮಾದ ಮೂಲಕ ತಮ್ಮ ರಿಲೇಷನ್ ಶಿಪ್ ಅನ್ನು ಬಹಿರಂಗ ಪಡಿಸಿದ್ದರು.  ಈ ಸಿನೆಮಾದಲ್ಲಿ ಪವಿತ್ರಾ ಲೋಕೇಶ್ ನಾಯಕಿಯಾಗಿ, ನರೇಶ್ ನಾಯಕನಾಗಿ ನಟಿಸಿದ್ದರು, ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಯವರನ್ನು ಟಾರ್ಗೆಟ್ ಮಾಡಿ ಸಿನೆಮಾ ನಿರ್ಮಾಣ ಮಾಡಲಾಗಿದೆ ಎಂಬುದು ಸಹ ಸ್ಪಷ್ಟವಾಗಿದೆ. ಆದರೆ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಈ ಸಿನೆಮಾ ಪ್ರದರ್ಶನಕ್ಕೆ ರಮ್ಯಾ ರಘುಪತಿ ತುಂಬಾನೆ ತಡೆ ಹಾಕಲು ಯತ್ನಿಸಿದ್ದರು ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.

ಸದ್ಯ ಸಹ ಜೀವನ ನಡೆಸುತ್ತಿರುವ ನರೇಶ್-ಪವಿತ್ರಾ ಸದ್ಯ ಫಿಲಿಫೈನ್ಸ್ ಪ್ರವಾಸ ಕೈಗೊಂಡಿದ್ದಾರೆ. ಈ ವೆಕೇಷನ್ ನಲ್ಲಿ ಅವರು ತುಂಬಾನೆ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿ ಕೆಲವೊಂದು ಸಾಹಸ ಕ್ರೀಡೆಗಳನ್ನು ಆಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಈ ಬಗ್ಗೆ ನರೇಶ್ ಟ್ವೀಟ್ ಸಹ ಮಾಡಿದ್ದಾರೆ. ಹೆಲಿಕ್ಯಾಪ್ಟರ್‍ ನಲ್ಲಿ ಐಲ್ಯಾಂಡ್ ನ ಅದ್ಬುತಗಳನ್ನು ನೋಡಿ ತುಂಬಾನೆ ಖುಷಿಯಾಗಿದೆ. ಫಿಲಿಫೈನ್ಸ್ ಸಮುದ್ರದಲ್ಲಿ ಪವಿತ್ರ ಜೊತೆಗೆ ಮಾಡಿದಂತಹ ಸಾಹಸ ಯಾತ್ರೆಯಲ್ಲಿ ಸಮುದ್ರದಲ್ಲಿ ಅಡಗಿರುವಂತಹ ರತ್ನ ಸಿಕ್ಕಿತ್ತು. ಅದೇ ರೀತಿ ಎಲ್ ನಿಡೋ ಐಲ್ಯಾಂಡ್ ಸುತ್ತಾಡಿದ್ದೆವು. ಲಗೂನ್ ಬೀಚ್ ಸೌಂದರ್ಯದ ರಹಸ್ಯವನ್ನು ಸಹ ತಿಳಿದುಕೊಂಡಿದ್ದೇವೆ. ನಮ್ಮ ಈ ಪಯಣದ ನೆನಪುಗಳನ್ನು ಶೇಖರಿಸಿಕೊಂಟ್ಟಿದ್ದೇವೆ. ಈ ನೆನಪಿಗಳಿಗೆ ಬೆಲೆ ಕಟ್ಟಲೂ ಸಾಧ್ಯವೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Most Popular

To Top