News

ಆರು ತಿಂಗಳಿಂದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ ಪಾಪಿ ತಂದೆ, ಪ್ರಕರಣ ದಾಖಲು……!

ಈ ಘಟನೆಯ ಬಗ್ಗೆ ವಿಚಾರ ತಿಳಿದರೇ ನೀವು ಸಹ ಆ ಪಾಪಿಯನ್ನು ಕ್ಷಮಿಸಲು ಮನಸ್ಸು ಮಾಡುವುದಿಲ್ಲ. ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಅಪ್ರಾಪ್ತ ಮಗಳನ್ನೆ ಪಾಪಿ ತಂದೆ ತನ್ನ ಕಾಮದಾಹಕ್ಕೆ ಬಲಿ ಮಾಡಿದ್ದಾನೆ. ಸುಮಾರು ಆರು ತಿಂಗಳಿನಿಂದ ತನ್ನ ಮೇಲೆ ಪಾಪಿ ಲೈಂಗಿಕ ಕಿರುಕುಳ ನೀಡಿ ಹಿಂಸೆ ಮಾಡುತ್ತಿದ್ದ ಎಂದು ಸಂತ್ರಸ್ತೆ ದೂರು ನೀಡಿದ್ದು, ಈ ಬಗ್ಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ಸಹ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ ಈ ನೀಚ ಕೃತ್ಯ ನಡೆದಿರುವುದು ಗುಜರಾತ್ ನ ರಾಜ್ ಕೋಟ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ ಎನ್ನಲಾಗಿದೆ. 40 ವರ್ಷ ಆರೋಪಿಗೆ ಎರಡು ಮದುವೆಯಾಗಿದೆ. ಮೊದಲ ಪತ್ನಿಗೆ 17 ವರ್ಷದ ಮಗಳಿದ್ದಾಳೆ. ಮೊದಲ ಪತ್ನಿ ಮೃತಪಟ್ಟ ಬಳಿಕ ಆಕೆ ಎರಡನೇ ವಿವಾಹವಾಗಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಪತ್ನಿಹಾಗೂ ಮಕ್ಕಳು ಆತನಿಂದ ಬೇರೆಯಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗಿದೆ. ಎರಡನೇ ಪತ್ನಿಯೂ ತನನ್ನು ತೊರೆದ ಕಾರಣದಿಂದ ಆತ ಅಜ್ಜ – ಅಜ್ಜಿಯ ಮನೆಯಲ್ಲಿದ್ದಂತಹ ತನ್ನ ಮೊದಲ ಪತ್ನಿಯ 17 ವರ್ಷದ ಮಗಳನ್ನು ತನ್ನ ಮನೆಯಲ್ಲಿರಿಸಿಕೊಂಡಿದ್ದ ಎನ್ನಲಾಗಿದೆ. ಪತ್ನಿಯಿಂದ ದೂರವಾದ ಈತನ ಕಾಮದ ಕಣ್ಣುಗಳು ಮಗಳ ಮೇಲೆ ಹಾಕಿದ್ದು, ಮಗಳ ಮೇಲೆಯೇ ಅತ್ಯಾಚಾರಕ್ಕೆ ಮುಂದಾಗಿದ್ದಾನೆ ಈ ಪಾಪಿ.

ಇನ್ನೂ ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದು, 6 ತಿಂಗಳ ಹಿಂದೆ ಎರಡನೇ ತಾಯಿಯನ್ನು ತೊರೆದ ಬಳಿಕ ರಾತ್ರಿ ಮಲಗಿದ್ದ ನನ್ನ ಬಳಿ ಬಂದು ಕೆಟ್ಟದಾಗಿ ಮುಟ್ಟಿದ್ದ, ಅದಕ್ಕೆ ನಾನು ವಿರೋಧ ಮಾಡಿದಾಗ ಸುಮ್ಮನಿರಲು ಹೇಳಿ, ಅತ್ಯಾಚಾರವೆಸಗಿದ, ಈ ವಿಚಾರವನ್ನು ಬಾಯ್ಬಿಟ್ಟರೇ ಸರಿಯಿರಲ್ಲ ಎಂದು ಧಮ್ಕಿ ಸಹ ಹಾಕಿದ್ದ. ಬಳಿಕ ನನ್ನ ಮೇಲೆ ಲೈಂಗಿಕ ಕ್ರೌರ್ಯ ವೆಸಗುತ್ತಲೇ ಇದ್ದಾನೆ ಎಂದು ಹೇಳಿದ್ದಾಳೆ. ಈ ಹಿಂದೆ ನೆಯಲ್ಲಿ ಮಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾಗ ಅದನ್ನು ಕಂಡ ಅಜ್ಜಿ ಪಾಪಿ ತಂದ ಅಲ್ಲಿಂದ ಎಸ್ಕೇಪ್ ಆಗಿದ್ದ. ಅಳುತ್ತಾ ಬಂದ ಸಂತ್ರಸ್ತೆ ತನ್ನ ಅಜ್ಜಿಗೆ ದೌರ್ಜನ್ಯದ ಬಗ್ಗೆ ತಿಳಿಸಿದ್ದು, ಅಜ್ಜಿಯ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾರೆ . ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯ ವಿರುದ್ದ ಐಪಿಸಿ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿದ್ದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Most Popular

To Top