Film News

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮೇಲಿನ ಕ್ರಷ್ ಬಗ್ಗೆ ಒಪೆನ್ ಆದ ಟೀಂ ಇಂಡಿಯಾ ಆಟಗಾರ…!

ಕನ್ನಡದ ಸಿನೆಮಾದ ಮೂಲಕ ಇದೀಗ ಸೌತ್ ಅಂಡ್ ನಾರ್ತ್ ನಲ್ಲೂ ಸಹ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಸದಾ ಒಂದಲ್ಲ ಒಂದು ಸುದ್ದಿಯಿಂದ ಬ್ಯುಸಿಯಾಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ದಿನೇ ದಿನೇ ಆಕೆಯ ಫ್ಯಾನ್ ಫಾಲೋಯಿಂಗ್ ಸಹ ಬೆಳೆಯುತ್ತಿದೆ. ಅನೇಕ ಯುವಕರ ಕ್ರಷ್ ಸಹ ಆಗುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಆಟಗಾರ ಒಬ್ಬರು ರಶ್ಮಿಕಾ ಮಂದಣ್ಣ ಲುಕ್ಸ್ ಗೆ ಫಿದಾ ಆಗಿ‌ದ್ದಾರೆ. ಆಕೆ ನನ್ನ ಕ್ರಷ್ ಎಂದು ಹೇಳಿದ್ದಾರಂತೆ. ಅಷ್ಟಕ್ಕೂ ಆ ಕ್ರಿಕೆಟಿಗ ಯಾರು ಎಂಬ ವಿಚಾರಕ್ಕೆ ಬಂದರೇ,

ನಟಿ ರಶ್ಮಿಕಾ ಮಂದಣ್ಣ ಪ್ರತಿನಿತ್ಯ ಸುದ್ದಿಯಲ್ಲೇ ಇರುತ್ತಾರೆ. ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಕಡಿಮೆ ಸಮಯದಲ್ಲೇ ಟಾಲಿವುಡ್ ಗೆ, ಅಲ್ಲಿಂದ ಕಾಲಿವುಡ್ ಗೆ, ಅಲ್ಲಿಂದ ಬಾಲಿವುಡ್ ಗೆ ಹಾರಿದರು. ಅದರಲ್ಲೂ ರಶ್ಮಿಕಾ ಮಂದಣ್ಣ ಪುಷ್ಪಾ ಸಿನೆಮಾದ ಬಳಿಕ ಮತಷ್ಟು ಕ್ರೇಜ್ ಪಡೆದುಕೊಂಡರು. ಬಾಲಿವುಡ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನೂ ಸಹ ಗಿಟ್ಟಿಸಿಕೊಂಡರು. ಕೊಡಗಿನ ಮೂಲದ ರಶ್ಮಿಕಾ ಕ್ಯೂಟ್ ಅಂಡ್ ಹಾಟ್ ನೆಸ್ ಗೆ ಬೋಲ್ಡ್ ಆಗದೇ ಇರಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಖ್ಯಾತ ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ ಸಹ ರಶ್ಮಿಕಾ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಆಕೆ ನನ್ನ ಕ್ರಷ್ ಎಂದು ಹೇಳಿದ್ದಾರೆ.

ಇನ್ನೂ ಕ್ರಿಕೆಟಿಗ ಶುಭಮನ್ ಗಿಲ್ ಇತ್ತಿಚಿಗೆ ನಡೆದ ಸಂದರ್ಶನದಲ್ಲಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ನಿಮ್ಮ ಕ್ರಷ್ ಯಾರು ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಶುಭಮನ್ ಗಿಲ್ ನೇರವಾಗಿ ರಶ್ಮಿಕಾ ಮಂದಣ್ಣ ನನ್ನ ಕ್ರಷ್ ಎಂದು ಹೇಳಿದ್ದಾರೆ. ಇನ್ನೂ ಶುಭಮನ್ ಗಿಲ್ ನೀಡಿದ ಈ ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ವಿವಿಧ ರೀತಿಯಲ್ಲಿ ಚರ್ಚೆಗಳೂ ಸಹ ಶುರುವಾಗಿದೆ. ಇನ್ನೂ ಈ ಸುದ್ದಿ ಇನ್ನೂ ರಶ್ಮಿಕಾ ವರೆಗೂ ತಲುಪಿದೆಯೋ ಇಲ್ಲವೋ, ಒಂದು ವೇಳೆ ಈ ಸುದ್ದಿ ರಶ್ಮಿಕಾ ವರೆಗೂ ಹೋದರೇ ಆಕೆ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸದ್ಯ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲೂ ಸಹ ರಶ್ಮಿಕಾ ಪುಲ್ ಬ್ಯುಸಿಯಾಗಿದ್ದಾರೆ. ಆಕೆ ಪುಷ್ಪಾ-2 ಸಿನೆಮಾದ ಜೊತೆಗೆ ಹಿಂದಿಯಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ರಶ್ಮಿಕಾಗೆ ಬಿಗ್ ಬ್ರೇಕ್ ನೀಡಿದ ಪುಷ್ಪಾ ಸಿನೆಮಾದ ಸೀಕ್ವೆಲ್ ಪುಷ್ಪಾ-2 ಸಿನೆಮಾದ ಮೇಲೆ ರಶ್ಮಿಕಾ ಮಂದಣ್ಣ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Most Popular

To Top