Film News

ಸಹಾಯಕನ ಕೈಯಲ್ಲಿ ಚಪ್ಪಲಿ ತೆಗೆಸಿದ ಬಾಲಿವುಡ್ ಹಾಟ್ ಬ್ಯೂಟಿ ಭೂಮಿ ಪಡ್ನೇಕರ್, ಭುಗಿಲೆದ್ದ ಆಕ್ರೋಷ…!

ಸಿನೆಮಾ ಸೆಲೆ‌ಬ್ರೆಟಿಗಳು ಸದಾ ಒಂದಲ್ಲ ಒಂದು ಕಾರಣಗಳ ಕಾರಣದಿಂದ ವಿವಾದಗಳಲ್ಲಿ ಸಿಲುಕುತ್ತಿರುತ್ತಾರೆ. ಅದರಲ್ಲೂ ಬಾಲಿವುಡ್ ಸೆಲೆಬ್ರೆಟಿಗಳು ಇಂತಹ ವಿವಾದಗಳಲ್ಲಿ ಮೊದಲಿರುತ್ತಾರೆ. ಈ ಹಿಂದೆ ಎಂದೂ ವಿವಾದಗಳಲ್ಲಿ ಸಿಲುಕದಂತಹ ನಟಿ ಭೂಮಿ ಪಡ್ನೇಕರ್‍ ವಿವಾದದಲ್ಲಿ ಸಿಲುಕಿದ್ದಾರೆ. ಇದೀಗ ತನ್ನ ಸಹಾಯಕನಿಂದ ಚಪ್ಪಲಿಯನ್ನು ತೆಗೆಸಿಕೊಂಡ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಕಾರಣದಿಂದ ಆಕೆಯ ವಿರುದ್ದ ಅನೇಕರು ಆಕ್ರೋಷ ಗೊಂಡಿದ್ದಾರೆ.

ಹಿಂದಿ ಸಿನಿರಂಗದಲ್ಲಿ ತನ್ನ ಪಾಡಿಗೆ ತಾನು ಸಿನೆಮಾಗಳನ್ನು ಮಾಡಿಕೊಳ್ಳುತ್ತಾ ಸೈಲೆಂಟ್ ಆಗಿ ತನ್ನ ಕೆಲಸ ತಾನು ಮಾಡಿಕೊಳ್ಳುತ್ತಾ ಭೂಮಿ ಪಡ್ನೇಕರ್‍ ಸಾಗುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಮಾಡುತ್ತಾ ಅಭಿಮಾನಿ ಬಳಗವನ್ನು ಬೆಳೆಸಿಕೊಳ್ಳುತ್ತಾ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ತನ್ನದೇ ಆದ ಫೇಂ ಸಂಪಾದಿಸಿಕೊಂಡ ಭೂಮಿ ತೆಲುಗಿನಲ್ಲಿ ತೆರೆಕಂಡ ಭಾಗಮತಿ ಸಿನೆಮಾದ ಹಿಂದಿ ರಿಮೇಕ್ ನಲ್ಲಿ ಅನುಷ್ಕಾ ಶೆಟ್ಟಿರಂತೆ ನಟಿಸಿ ಎಲ್ಲರನ್ನೂ ರಂಜಿಸಿದ್ದರು.  ಬಾಲಿವುಡ್ ನ ಅನೇಕ ನಟಿಯರು ಅನೇಕ ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. ಆದರೆ ನಟಿ ಭೂಮಿ ಈ ಹಿಂದೆ ಎಂದೂ ಸಹ ವಿವಾದಗಳಲ್ಲಿ ಸಿಲುಕಿಕೊಂಡಿರಲಿಲ್ಲ. ಇಲ್ಲಿಯವರೆಗೂ ಯಾವುದೇ ರೀತಿಯ ವಿವಾದದಲ್ಲಿ ಸಿಲುಕದ ಭೂಮಿ ಇದೀಗ ವಿವಾದವೊಂದರಲ್ಲಿ ಸಿಲುಕಿದ್ದಾರೆ.

ನಟಿ ಭೂಮಿ ಪಡ್ನೇಕರ್‍ ಇತ್ತೀಚಿಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಜ್ಯೋತಿ ಬೆಳಗಿಸಲು ಹೋಗಲು ತನ್ನ ಚಪ್ಪಲಿಯನ್ನು ಬಿಟ್ಟು ವೇದಿಕೆ ಮೇಲೆ ಹೋಗಲು ಪ್ರಯತ್ನಿಸಿದರು. ಆದರೆ ಆಕೆ ತನ್ನ ಚಪ್ಪಲಿಯನ್ನು ತೆಗೆಯಲು ವಿಫಲರಾದರು. ಬಳಿಕ ತನ್ನ ಅಸ್ಟಿಸ್ಟೆಂಟ್ ಕರೆಸಿ ಚಪ್ಪಲಿ ತೆಗೆಯಲು ಸಹಾಯ ಮಾಡಿದರು. ಬಳಿಕ ಆಕೆ ವೇದಿಕೆಯ ಮೇಲೆ ಹೋದರು. ಇನ್ನೂ ಭೂಮಿ ತನ್ನ ಸಹಾಯಕನಿಂದ ಚಪ್ಪಲಿಯನ್ನು ತೆಗೆಸಿಕೊಂಡ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನೂ ಈ ವಿಡಿಯೋ ಕಾರಣದಿಂದಲೇ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾ ಸಹಾಯಕನ ಕೈಯಲ್ಲಿ ಚಪ್ಪಲಿ ತೆಗೆಸುತ್ತೀಯಾ ಎಂದು ಆಕ್ರೋಷಗೊಂಡಿದ್ದಾರೆ.

ಇನ್ನೂ ಬಾಲಿವುಡ್ ನಟಿ ಭೂಮಿ ಪಡ್ನೆಕರ್‍ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ SSMB28 ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಬಾಲಿವುಡ್ ನಲ್ಲಿ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿರುವ ಭೂಮಿ ಇದೀಗ ಸೌತ್ ಸಿನೆಮಾಗಳಲ್ಲಿ ನಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top