Film News

ಅಗಲಿದ ಪತಿಯ ಪೊಟೋಗೆ ಮುತ್ತಿಟ್ಟ ತಾರಕರತ್ನ ಪತ್ನಿ ಅಲೇಖ್ಯಾರೆಡ್ಡಿ, ಕಣ್ಣೀರು ತರಿಸುವಂತಹ ದೃಶ್ಯ ವೈರಲ್….!

ಟಾಲಿವುಡ್ ನ ನಂದಮೂರಿ ಕುಟುಂಬದ ತಾರಕರತ್ನ ಅನಾರೋಗ್ಯದಿಂದ ಫೆ.18 ರಂದು ಇಹ ಲೋಕ ತ್ಯೆಜಿಸಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿ ಸುಮಾರು ದಿನಗಳ ಕಾಲ ಚಿಕಿತ್ಸೆಯನ್ನು ಸಹ ಪಡೆದುಕೊಂಡರು. ಆದರೆ ವಿಧಿಯಾಟಕ್ಕೆ ತಾರಕರತ್ನ ಬಲಿಯಾದರು. ಇದೀಗ ದಿವಂಗತ ನಂದಮೂರಿ ತಾರಕರತ್ನ ರವರ ಪೊಟೋಗೆ ಅವರ ಪತ್ನಿ ಅಲೇಖ್ಯಾರೆಡ್ಡಿ ಮುತ್ತಿಟ್ಟು ಭಾವುಕರಾಗಿದ್ದಾರೆ. ಈ ಸಂಬಂಧ ಪೊಟೋಗಳು ವೈರಲ್ ಆಗುತ್ತಿದ್ದು, ಅನೇಕರಿಗೆ ಕಣ್ಣೀರು ತರಿಸಿದೆ.

ನಂದಮೂರಿ ತಾರಕರತ್ನ ಕಳೆದ ವರ್ಷ ಫೆ.18 ರಂದು ಹೃದಯಘಾತದಿಂದ ಮೃತಪಟ್ಟಿದ್ದರು. ನಾರಾ ಲೋಕೇಶ್ ಹಮ್ಮಿಕೊಂಡಿದ್ದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರಿಗೆ ಹೃದಯಾಘಾತವಾಗಿತ್ತು. 22 ದಿನಗಳ ಕಾಲ ಹೋರಾಟ ನಡೆಸಿ ಅವರು ಮೃತಪಟ್ಟರು. ಅವರು ಅಗಲಿ ಒಂದು ವರ್ಷ ಕಳೆದಿದ್ದು, ವರ್ಷದ ತಿಥಿಯನ್ನು ಆಚರಿಸಲಾಯಿತು. ಜೊತೆಗೆ ಅವರ 41ನೇ ಹುಟ್ಟುಹಬ್ಬಸಹ ಆಗಿದೆ. ಈ ಸಮಯದಲ್ಲಿ ಅವರಿಗೆ ಅಭಿಮಾನಿಗಳು ಹಾಗೂ ಶ್ರೇಯೋಭಿಲಾಷಿಗಳು ಶ್ರದ್ದಾಂಜಲಿ ಅರ್ಪಿಸುತ್ತಿದ್ದಾರೆ. ಇನ್ನೂ ಇದೇ ಸಮಯದಲ್ಲಿ ಅವರ ಪತ್ನಿ ಅಲೇಖ್ಯಾರೆಡ್ಡಿ ಶ್ರದ್ದಾಂಜಲಿ ಅರ್ಪಿಸಿದ ಪರಿ ಅನೇಕರಿಗೆ ಕಣ್ಣೀರು ತರಿಸಿದೆ.

ಇನ್ನೂ ತಾರಕರತ್ನ ಪತ್ನಿ ಅಲೇಖ್ಯಾರೆಡ್ಡಿ ತಮ್ಮನ್ನು ಅಗಲಿದ ಪತಿಗೆ ಶ್ರದ್ದಾಂಜಲಿ ಅರ್ಪಿಸಿದ ಪರಿ ಅನೇಕರ ಮನ ಕದಡುವಂತೆ ಮಾಡಿದೆ. ಹೂವಿನ ಗುಚ್ಚ ತಂದು ಪತಿಯ ಪೊಟೋ ಮುಂದೆ ನಿಂತಿದ್ದಾರೆ. ಹೃದಯ ತುಂಬಾ ನೋವು ತುಂಬಿಕೊಂಡು ಅಲೇಖ್ಯಾ ರೆಡ್ಡಿ ಭಾವುಕರಾಗಿದ್ದಾರೆ. ಪೊಟೋದಲ್ಲಿರುವ ತಾರಕರತ್ನ ರವರನ್ನು ಮುತ್ತಿಟ್ಟು ತಮ್ಮ ಪ್ರೀತಿಯನ್ನು ಸಾರಿದ್ದಾರೆ. ಜೊತೆಗೆ ಪೊಟೋವನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಪತಿಯಿಲ್ಲ ಎಂಬ ವಿಚಾರ ತಿಳಿದಿದ್ದರೂ ಸಹ ನೋವಿನಿಂದಲೇ ಕಿರುನಗೆ ಬೀರುತ್ತಾ ಶ್ರದ್ದಾಂಜಲಿಯನ್ನು ಅರ್ಪಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಆಕೆಯ ಸ್ಥಿತಿಯನ್ನು ಕಂಡು ಕಣ್ಣೀರಾಕಿದ್ದಾರೆ.

Most Popular

To Top