Film News

ರಾಖಿ ಸಾವಂತ್ ಗೆ ಸಂಕಷ್ಟ, ಆಕೆಯನ್ನು ಅರೆಸ್ಟ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ, ಏಕೆ ಗೊತ್ತಾ?

ಬಾಲಿವುಡ್ ನ ಐಟಂ ಬಾಂಬ್ ಎಂತಲೇ ಖ್ಯಾತಿ ಪಡೆದುಕೊಂಡ ರಾಖಿ ಸಾವಂತ್ ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಕೆಲವು ತಿಂಗಳಿನಿಂದ ಸದಾ ಅವರ ಹೆಸರು ಕೇಳಿಬರುತ್ತಲೇ ಇದೆ. ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಎಂಬಾತನೊಂದಿಗೆ ಪ್ರೇಮಪಯಣ, ಬಳಿಕ ನಿಗೂಡ ಮದುವೆ, ಬಳಿಕ ಆರೋಪಗಳು ಮಾಡಿದ್ದು, ಇದಾದ ನಂತರ ಆದಿಲ್ ನನ್ನು ಜೈಲಿಗೆ ಕಳುಹಿಸಿದ್ದು, ಹೀಗೆ ಅವರ ಲವ್ ಸ್ಟೋರಿ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಇದೀಗ ಆಕೆಯನ್ನು ಅರೆಸ್ಟ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ವಿವಾದಗಳಿಗೆ ಕೇರಾಫ್ ಎಂದೇ ಕರೆಯಲಾಗುವ ರಾಖಿ ಸಾವಂತ್ ಸದಾ ಏನೋ ಒಂದು ವಿಚಾರಕ್ಕೆ ಸುದ್ದಿಯಲ್ಲೇ ಇರುತ್ತಾರೆ. ಯಾವುದೇ ವಿಚಾರವಾದರೂ ಸಹ ಹಿಂದೆ ಮುಂದೆ ನೋಡದೇ ಮಿಡಿಯಾ ಮುಂದೆ ಮಾತನಾಡುತ್ತಾರೆ. ಅದರಲ್ಲೂ ಆಕೆ ತನ್ನ ವೈಯುಕ್ತಿಕ ವಿಚಾರಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು. ಕಳೆದ 2022 ರಲ್ಲಿ ಆಕೆ ಆದಿಲ್ ದುರಾನಿ ಜೊತೆಗೆ ಮದುವೆಯಾದರು. ಆದರೆ ಮದುವೆಯಾದ ಆರೇ ತಿಂಗಳಲ್ಲಿ ಆದಿಲ್ ತನ್ನನ್ನು ಹಿಂಸೆ ಮಾಡುತ್ತಿದ್ದಾನೆ ಎಂದು ಪೊಲೀಸ್ ರಿಗೆ ದೂರು ನೀಡಿದ್ದರು. ತನ್ನ ಹಣವನ್ನು ಸಹ ಆತ ಬಳಕೆ ಮಾಡಿಕೊಂಡಿದ್ದಾನೆ ಎಂದು ಆರೋಪ ಮಾಡಿದ್ದು, ಆದಿಲ್ ನನ್ನು ಪೊಲೀಸರು ಅರೆಸ್ಟ್ ಮಾಡಿದರು. ಜೈಲಿನಿಂದ ಹೊರಬಂದ ಬಳಿಕ ಆದಿಲ್ ರಾಖಿ ತನ್ನನ್ನು ಮೋಸ ಮಾಡಿದ್ದಾಳೆ ಎಂದು ಆಕೆಯ ವಿರುದ್ದ ಕೆಲವೊಂದು ಗಂಭೀರ ಆರೋಪಗಳನ್ನು ಮಾಡಿದ್ದರು. ಇದರಿಂದ ಕೋಪಗೊಂಡ ರಾಖಿ ಸಾವಂತ್ ಆದಿಲ್ ನನ್ನ ನ್ಯೂಡ್ ವಿಡಿಯೋಗಳನ್ನು 47 ಲಕ್ಷಗಳಿಗೆ ದುಬೈನಲ್ಲಿ ಮಾರಿದ್ದಾರೆ. ನಾನು ಬಾತ ರೂಂ ನಲ್ಲಿದ್ದಾಗ ಆತ ಶೂಟ್ ಮಾಡಿ ಮಾರಿದ್ದಾನೆ. ಆತ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ನನ್ನ ವಿಡಿಯೋಗಳು ವೈರಲ್ ಆಗುತ್ತಿವೆ. ನಾನು ಏನು ಮಾಡಬೇಕು, ನನ್ನ ವಿಡಿಯೋಗಳು ವಿಶ್ವದಾದ್ಯಂತ ಹರಿದಾಡುತ್ತಿವೆ. ನನ್ನ ಮುಖ ಹೇಗೆ ತೋರಿಸಬೇಕುಮ, ಭಾರತದಲ್ಲಿ ನಾನು ಸೆಲಬ್ರೆಟಿ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆ ಎಂದು ರಾಖಿ ಸಾವಂತ್ ಆಕ್ರೋಷ ಹೊರಹಾಕಿದ್ದರು.

ಬಳಿಕ ಆಕೆ ಅಶ್ಲೀಲ ವಿಡಿಯೋ ಪ್ರಸಾರ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಆದಿಲ್ ಖಾನ್ ದುರಾನಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಲೀಕ್ ಮಾಡಿದ ಪ್ರಕರಣದಲ್ಲಿ ಆಕೆ ಸಿಲುಕಿಕೊಂಡರು. ರಾಖಿ ಸಾವಂತ್ ತನ್ನ ಖಾಸಗಿ ವಿಡಿಯೋಗಳನ್ನು ಮಿಡಿಯಾ ಚಾನಲ್ ನಲ್ಲಿ ಪ್ರಸಾರ ಮಾಡಿದ್ದಾಳೆ ಎಂದು ಆದಿಲ್ ಆರೋಪಿಸಿ ಫಿರ್ಯಾದು ಮಾಡಿದ್ದರು. ಒಂದು ಚಾನಲ್ ನಲ್ಲಿ ಮಾತನಾಡುವಾಗ ರಾಖಿ ಸಾವಂತ್ ತನ್ನ ಪ್ರವೈಟ್ ವಿಡಿಯೋ ಹಾಗೂ ಪೊಟೋಗಳನ್ನು ತೋರಿಸಿದ್ದರು. ಕೆಲವೊಂದು ವಾಟ್ಸಾಪ್ ಗ್ರೂಪ್ ಗಳಲ್ಲೂ ಸಹ ಶೇರ್‍ ಮಾಡಿದ್ದಾರೆ. ಎಂದು ಆದಿಲ್ ದೂರು ದಾಖಲಿಸಿದ್ದರು. ಈ ಆರೋಪದ ಕಾರಣದಿಂದ ರಾಖಿ ಸುಪ್ರೀಂ ಕೋರ್ಟ್‌ನಲ್ಲಿ ಫಿಟಿಷನ್ ಹಾಕಿದರು. ಈ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ಸಹ ನಡೆಸಿತ್ತು. ತನ್ನ ವರ್ಚಸ್ಸು ಕಡಿಮೆ ಮಾಡಲು ರಾಖಿ ಸಾವಂತ್  ರವರ ಆನ್ ಲೈನ್ ನಲ್ಲಿ ಪ್ರವೈಟ್ ವಿಡಿಯೋಗಳನ್ನು ಲೀಕ್ ಮಾಡಿದ್ದಾರೆ ರಾಖಿ ಸಾವಂತ್ ಲಾಯರ್‍ ಆರೋಪಿಸಿದ್ದರು.

ಈ ವೇಳೆ ಪ್ರಕರಣದ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಖಿ ಸಾವಂತ್ ಗೆ ಬೈಲ್ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಜೊತೆಗೆ ರಾಖಿ ಸಾವಂತ್ ಅಶ್ಲೀಲ ವಿಡಿಯೋ ಲೀಕ್ ಮಾಡಿದ ಹಿನ್ನೆಲೆಯಲ್ಲಿ ಆಕೆಯನ್ನು ಸೆಕ್ಷನ್ 67A ರಡಿಯಲ್ಲಿ ಅರೆಸ್ಟ್ ಮಾಡುವಂತೆ ಆದೇಶ ಮಾಡಿದೆ. ನಾಲ್ಕು ವಾರಗಳೊಗೆ ಆಕೆ ಶರಣಾಗಬೇಕೆಂದು ತೀರ್ಪು ನೀಡಲಾಗಿದೆ.

Most Popular

To Top