News

ರಜನಿಕಾಂತ್ – ಚಂದ್ರಬಾಬು ನಾಯ್ಡು ಭೇಟಿಯ ಬಗ್ಗೆ ರಜನಿಕಾಂತ್ ಕ್ಲಾರಿಟಿ……!

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ರವರನ್ನು ಸ್ಕಿಲ್ ಡೆವಲಪ್‌ಮೆಂಟ್ ಹಗರಣದಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಪೊಲೀಸರು ಬಂಧಿಸಿದ್ದಾರೆ. ಈ ಕಾರಣದಿಂದ ಆಂಧ್ರ ಪ್ರದೇಶ ಮಾತ್ರವಲ್ಲದೇ ದೇಶದಾದ್ಯಂತ ಚಂದ್ರಬಾಬು ನಾಯ್ಡು ರವರಿಗೆ ಬೆಂಬಲ ಸಿಗುತ್ತಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ರಾಜಮಂಡ್ರಿ ಜೈಲಿನಲ್ಲಿರುವ ಚಂದ್ರಬಾಬು ನಾಯ್ಡು ರವರನ್ನು ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೀಗ ರಜನಿಕಾಂತ್ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸ್ಕಿಲ್ ಡೆವಲಪ್‌ಮೆಂಟ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ.  ರಾಜಮಂಡ್ರಿ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗಾಗಲೇ ಟಿಡಿಪಿ ನಾಯಕರು ಹಾಗೂ ಕಾರ್ಯಕರ್ತರು ಭಾರಿ ವಿರೋಧ ವ್ಯಕ್ತಪಡಿಸಿ ಅನೇಕ ಕಡೆ ಪ್ರತಿಭಟನೆ ಗಳನ್ನು ಸಹ ನಡೆಸುತ್ತಿದ್ದಾರೆ. ಕಳೆದರಡು ದಿನಗಳ ಹಿಂದೆಯಷ್ಟೆ ಪವನ್ ಕಲ್ಯಾಣ್ ಸಹ ಚಂದ್ರಬಾಬು ನಾಯ್ಡು ರವರನ್ನು ಭೇಟಿಯಾಗಲು ಬಂದಿದ್ದು, ದೊಡ್ಡ ಮಟ್ಟದಲ್ಲೇ ರಾಜಕೀಯ ಹೈಡ್ರಾಮ ನಡೆದಿತ್ತು. ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಲಾಗಿತು. ಬಳಿಕ ಪವನ್ ಕಲ್ಯಾಣ್, ನಾರಾ ಲೋಕೇಶ್ ಹಾಗೂ ನಂದಮೂರಿ ಬಾಲಕೃಷ್ಣ ರವರು ಚಂದ್ರಬಾಬು ರವರನ್ನು ಭೇಟಿಯಾಗಿ ಬಳಿಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಹಾಗೂ ಜನಸೇನಾ ಮೈತ್ರಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಸಹ ಮಾಡಲಾಯಿತು.

ಇನ್ನೂ ಕಳೆದೆರಡು ದಿನಗಳ ಹಿಂದೆಯ್ಟೆ ಸೂಪರ್‍ ಸ್ಟಾರ್‍ ರಜನಿಕಾಂತ್ ಚಂದ್ರಬಾಬು ನಾಯ್ಡು ರವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರಜನಿಕಾಂತ್ ಭೇಟಿಯಾಗಿರಲಿಲ್ಲ. ಇದೀಗ ಈ ಬಗ್ಗೆ ರಜನಿಕಾಂತ್ ಸ್ಪಂದಿಸಿದ್ದಾರೆ. ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಜನಿಕಾಂತ್ ವಿಮಾನನಿಲ್ದಾಣದಿಂದ ಕೊಯಂಬತ್ತೂರು ಗೆ ಹೋದರು. ಈ ಸಮಯದಲ್ಲಿ ಮಾತನಾಡಿದ ಅವರು, ಕುಟುಂಬದ ಕಾರ್ಯಕ್ರಮಗಳ ಕಾರಣದಿಂದ ಚಂದ್ರಬಾಬು ನಾಯ್ಡು ರವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ. ಇನ್ನೂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಗೆ ಪೋನ್ ಮಾಡಿ ರಜನಿಕಾಂತ್  ಸಾಂತ್ವನ ಹೇಳಿ, ಧೈರ್ಯವಾಗಿರುವಂತೆ ತಿಳಿಸಿದ್ದಾರೆ. ಚಂದ್ರಬಾಬು ನಾಯ್ಡು ದೊಡ್ಡ ಹೋರಾಟಗಾರ, ಆತ ಎಂದೂ ತಪ್ಪು ಮಾಡೋಲ್ಲ ಎಂದು ಹೇಳಿದ್ದಾರೆ.

Most Popular

To Top