ಮ್ಯೂಸಿಕ್ ಡೈರೆಕ್ಟರ್ ಅನಿರುದ್ದ್ ಹಾಗೂ ಸ್ಟಾರ್ ನಟಿ ಕೀರ್ತಿ ಸುರೇಶ್ ಮದುವೆ? ವೈರಲ್ ಆದ ರೂಮರ್ ಬಗ್ಗೆ ಕೀರ್ತಿ ತಂದೆ ಹೇಳಿದ್ದೇನು?

ಸುಮಾರು ದಿನಗಳಿಂದ ಕೀರ್ತಿ ಸುರೇಶ್ ಮದುವೆಯ ಬಗ್ಗೆ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡ ಕೀರ್ತಿ ಸುರೇಶ್ ಮದುವೆಗೆ ಸಂಬಂಧಿಸಿದಂತೆ ಕೆಲವೊಂದು ಸುದ್ದಿಗಳು ಕೇಳಿಬರುತ್ತಿವೆ. ಆಕೆ ಬ್ಯುಸಿನೆಸ್ ಮ್ಯಾನ್ ಜೊತೆಗೆ, ಸ್ನೇಹಿತನ ಜೊತೆಗೆ ಮದುವೆಯಾಗಲಿದೆ ಎಂಬ ಮಾತುಗಳು ಇಂಟರ್‍ ನೆಟ್ ನಲ್ಲಿ ಹರಿದಾಡುತ್ತಲೇ ಇದೆ. ಈ ಸುದ್ದಿಗಳನ್ನು ಕೀರ್ತಿ ಸುರೇಶ್ ಹಾಗೂ ಆಕೆಯ ಕುಟುಂಬಸ್ಥರೂ ಸಹ ಖಂಡಿಸುತ್ತಲೇ ಇದ್ದಾರೆ. ಇದೀಗ ಮತ್ತೋಂದು ರೂಮರ್‍ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಕೀರ್ತಿ ಸುರೇಶ್ ಮಹಾನಟಿ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡು ಬಳಿಕ ಆಕೆಯ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಂಡಿರಲಿಲ್ಲ. ಆದರೆ ಮಹೇಶ್ ಬಾಬು ರವರ ಸರ್ಕಾರು ವಾರಿ ಪಾಠ ಸಿನೆಮಾದ ಮೂಲಕ ಮತ್ತೆ ಸಕ್ಸಸ್ ಹಾದಿಯನ್ನು ಕಂಡುಕೊಂಡರು. ಬಳಿಕೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ಸಹ ಪಡೆದುಕೊಂಡರು. ಇತ್ತಿಚಿಗಷ್ಟೆ ಆಕೆ ದಸರಾ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಕೆರಿಯರ್‍ ಆರಂಭದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇನ್ನೂ ಕೆಲವು ದಿನಗಳಿಂದ ಕೀರ್ತಿ ಸುರೇಶ್ ರವರ ಮದುವೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ.

ಇದೀಗ ಕೀರ್ತಿ ಸುರೇಶ್ ಖ್ಯಾತ ಮ್ಯೂಸಿಕ್ ಡೈರೆಕ್ಟರ್‍ ಅನಿರುದ್ ರವಿಚಂದ್ರ ಜೊತೆಗೆ ಮದುವೆ ನಡೆಯಲಿದೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಈ ಜೋಡಿಯ ಮದುವೆ ನಡೆಯಲಿದೆ ಎಂಬ ರೂಮರ್‍ ಜೋರಾಗಿಯೇ ಹರಿದಾಡುತ್ತಿದೆ. ಇನ್ನೂ ಈ ಸುದ್ದಿ ಕೀರ್ತಿ ಸುರೇಶ್ ಕುಟುಂಬದವರೆಗೂ ಹರಡಿದ್ದು, ಅದಕ್ಕೆ ಕೀರ್ತಿ ಸುರೇಶ್ ತಂದೆ ರಿಯಾಕ್ಟ್‌ ಆಗಿದ್ದಾರೆ. ಕೀರ್ತಿ ಸುರೇಶ್ ಮದುವೆಯ ಬಗ್ಗೆ ಬರುತ್ತಿರುವಂತಹ ಸುದ್ದಿಗಳು ಎಲ್ಲವೂ ಸುಳ್ಳು. ಅವುಗಳಲ್ಲಿ ಸತ್ಯಾಂಶವಿಲ್ಲ. ಯಾರೋ ಬೇಕಂತಲೇ ಅಂತಹ ರೂಮರ್‍ ಗಳನ್ನು ಹರಡುತ್ತಿದ್ದಾರೆ. ಅನೇಕ ಬಾರಿ ಕೀರ್ತಿ ಸುರೇಶ್ ಮದುವೆಯ ಬಗ್ಗೆ ಅಂತಹ ರೂಮರ್‍ ಗಳು ಹರಿದಾಡುಲ್ಲೇ ಇದೆ. ಅವೆಲ್ಲವೂ ಸುಳ್ಳು ರೂಮರ್‍ ಗಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಅನಿರುದ್ದ್ ಮ್ಯೂಸಿಕ್ ಕಂಪೋಸ್ ಮಾಡಿರುವ ರೆಮೋ, ಗ್ಯಾಂಗ್, ಅಜ್ಞಾತವಾಸಿ ಮೊದಲಾದ ಸಿನೆಮಾಗಳಲ್ಲಿ ಕೀರ್ತಿ ಸಹ ನಟಿಸದ್ದರು. ಆ ಸಮಯದಲ್ಲಿ ಇಬ್ಬರೂ ತುಂಬಾ ಕ್ಲೋಜ್ ಆಗಿದ್ದಂತಹ ಪೊಟೋಗಳು ವೈರಲ್ ಆಗಿತ್ತು. ಕೆಲವು ದಿನಗಳ ಹಿಂದೆಯಷ್ಟೆ ಜವಾನ್ ಸಾಂಗ್ ಗೆ ಕೀರ್ತಿ ಡ್ಯಾನ್ಸ್ ಮಾಡಿದ್ದರು. ಈ ಕಾರಣದಿಂದ ಅವರಿಬ್ಬರು ಮದುವೆಯಾಗಲಿದ್ದಾರೆ ಎಂಬ ರೂಮರ್‍ ವೈರಲ್ ಆಗಿತ್ತು. ಇದೀಗ ಈ ರೂಮರ್‍ ಗೆ ಕೀರ್ತಿ ಸುರೇಶ್ ತಂದೆ ನಾಂದಿ ಹಾಡಿದ್ದಾರೆ.