ರಾಮ್ ಚರಣ್ ಜೊತೆಗೆ ನಟಿಸಲಿದ್ದಾರಂತೆ ಸ್ಟಾರ್ ಕ್ರಿಕೆಟರ್ ಮಗಳು, ಕ್ರೇಜಿ ಕಾಂಬಿನೇಷನ್ ರೂಮರ್ ಭಾರಿ ವೈರಲ್…..!

ಸಿನಿರಂಗದಲ್ಲಿ ಈಗಾಗಲೇ ಅನೇಕ ಮಲ್ಟಿಸ್ಟಾರರ್‍ ಕಾಂಬಿನೇಷನ್ ಗಳಲ್ಲಿ ಸಿನೆಮಾಗಳು ಬರುತ್ತಿವೆ. ಜೊತೆಗೆ ಆಗಾಗ ಕೆಲವೊಂದು ಕ್ರೇಜಿ ಕಾಂಬಿನೇಷನ್ ಬಗ್ಗೆ ಸುದ್ದಿಗಳು ಸಹ ಹರಿದಾಡುತ್ತಿರುತ್ತದೆ.  ಟಾಲಿವುಡ್ ನಲ್ಲಿ ಸಹ ಕೆಲವೊಂದು ರೂಮರ್‍ ಗಳು ಕೇಳಿಬರುತ್ತಿವೆ. ಬಾಲಕೃಷ್ಣ…

ಸಿನಿರಂಗದಲ್ಲಿ ಈಗಾಗಲೇ ಅನೇಕ ಮಲ್ಟಿಸ್ಟಾರರ್‍ ಕಾಂಬಿನೇಷನ್ ಗಳಲ್ಲಿ ಸಿನೆಮಾಗಳು ಬರುತ್ತಿವೆ. ಜೊತೆಗೆ ಆಗಾಗ ಕೆಲವೊಂದು ಕ್ರೇಜಿ ಕಾಂಬಿನೇಷನ್ ಬಗ್ಗೆ ಸುದ್ದಿಗಳು ಸಹ ಹರಿದಾಡುತ್ತಿರುತ್ತದೆ.  ಟಾಲಿವುಡ್ ನಲ್ಲಿ ಸಹ ಕೆಲವೊಂದು ರೂಮರ್‍ ಗಳು ಕೇಳಿಬರುತ್ತಿವೆ. ಬಾಲಕೃಷ್ಣ ದುಲ್ಕರ್‍ ಸಲ್ಮಾನ್ ಮಲ್ಟಿಸ್ಟಾರರ್‍ ಸಿನೆಮಾ, ರಾಮ್ ಚರಣ್, ಅಲ್ಲು ಅರ್ಜುನ್ ಜೊತೆಗೆ ಜಾನ್ವಿ ನಟಿಸುತ್ತಿದ್ದಾರೆ ಎಂಬ ರೂಮರ್‍ ವೈರಲ್ ಆಗಿದೆ. ಇದೀಗ ರಾಮ್ ಚರಣ್ ಜೊತೆಗೆ ಸ್ಟಾರ್‍ ಕ್ರಿಕೆಟರ್‍ ಮಗಳು ನಟಿಸಲಿದ್ದಾರೆಂಬ ರೂಮರ್‍ ಜೋರಾಗಿ ಕೇಳಿಬರುತ್ತಿದೆ.

RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಇಮೇಜ್ ಪಡೆದುಕೊಂಡ ರಾಮ್ ಚರಣ್ ಶೀಘ್ರದಲ್ಲೇ ಗೇಮ್ ಚೇಂಜರ್‍ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದೀಗ ಈ ಸಿನೆಮಾದ ಬಳಿಕ ಮುಂದಿನ ಸಿನೆಮಾದ ಬಗ್ಗೆ ಸಹ ಭಾರಿ ನಿರೀಕ್ಷೆ ಮೂಡಿದೆ. ಈ ಸಿನೆಮಾವನ್ನು ಸ್ಟಾರ್‍ ನಿರ್ದೇಶಕ ಬುಚ್ಚಿಬಾಬು ನಿರ್ದೇಶಿಸಲಿದ್ದಾರೆ. ಈ ಸಿನೆಮಾದಲ್ಲೇ ಸ್ಟಾರ್‍ ಕ್ರಿಕೆಟರ್‍ ಪುತ್ರಿಯನ್ನು ನಾಯಕಿಯಾಗಿ ಕರೆತರಲಿದ್ದಾರೆ ಎನ್ನಲಾಗಿದೆ. ಸ್ಟಾರ್‍ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‍ ಮುದ್ದಿನ ಪುತ್ರಿ ಸಾರಾ ತೆಂಡೂಲ್ಕರ್‍ ರವರನ್ನೇ ಬುಚ್ಚಿಬಾಬು ರಾಮ್ ಚರಣ್ ರವರಿಗೆ ಜೋಡಿಯಾಗಿ ಕರೆತರಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಈಗಾಗಲೇ ಈ ಸಿನೆಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಶೀಘ್ರದಲ್ಲೇ ಸಿನೆಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ರಾಮ್ ಚರಣ್ ಗೆ ಜೋಡಿಯಾಗಿ ಸಾರಾ ತೆಂಡೂಲ್ಕರ್‍ ರವರನ್ನು ಕರೆತರಲು ಬುಚ್ಚಿಬಾಬು ಸಹ ಭಾರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬ ರೂಮರ್‍ ಮಾತ್ರ ಜೋರಾಗಿ ಹರಿದಾಡುತ್ತಿದೆ.

ಇನ್ನೂ ಈ ಹಿಂದೆ ಇದೇ ಸಿನೆಮಾದಲ್ಲಿ ರಾಮ್ ಚರಣ್ ರವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆಕೆಯೇ ಈ ಸಿನೆಮಾದ ನಾಯಕಿ ಎಂದು ಹೇಳಲಾಗಿತ್ತು. ಈ ನಡುವೆ ಸಾರಾ ತೆಂಡೂಲ್ಕರ್‍ ಹೆಸರು ಮುನ್ನಲೆಗೆ ಬಂದಿದೆ. ಇನ್ನೂ ಈಗ ಹರಿದಾಡುತ್ತಿರುವ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎಷ್ಟರ ಮಟ್ಟಿಗೆ ಸುಳ್ಳು ಎಂಬುದನ್ನು ಪಕ್ಕಕ್ಕಿಟ್ಟರೇ, ಸುದ್ದಿ ಮಾತ್ರ ಜೋರಾಗಿ ಹರಿದಾಡುತ್ತಿದೆ. ಜೊತೆಗೆ ರಾಮ್ ಚರಣ್ ಜೊತೆಗೆ ಯಾರು ನಟಿಸಲಿದ್ದಾರೆ ಎಂಬ ಆಸಕ್ತಿ ಸಹ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಶೀಘ್ರದಲ್ಲೇ ಈ ಎಲ್ಲಾ ರೂಮರ್‍ ಗಳಿಗೆ ತೆರೆ ಬೀಳಲಿದೆ. RRR ಸಿನೆಮಾದ ಬಳಿಕ ರಾಮ್ ಚರಣ್ ಗೇಂ ಚೇಂಜರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಸ್ಟಾರ್‍ ನಿರ್ದೇಶಕ ಶಂಕರ್‍ ನಿರ್ದೇಶನ ಮಾಡಿದ್ದು, ಶೀಘ್ರದಲ್ಲೇ ತೆರೆಕಾಣಲಿದೆ.