Film News

ಹೊಸ ವರ್ಷದ ಸಮಯದಲ್ಲಿ ಸಂಚಲನಾತ್ಮಕ ವಿಡಿಯೋ ಹರಿಬಿಟ್ಟ ಅನಸೂಯ, ಕೆಟ್ಟ ಪದಗಳನ್ನು ಬೈಯುತ್ತಾ ವಾರ್ನ್ ಕೊಟ್ಟ ನಟಿ….!

ತೆಲುಗಿನ ಜಬರ್ದಸ್ತ್ ಮೂಲಕ ಕ್ರೇಜ್ ಪಡೆದುಕೊಂಡ ಆಂಕರ್‍ ಕಂ ನಟಿ ಅನಸೂಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡು ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಅನಸೂಯ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಾ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಹೊಸ ವರ್ಷದ ಆರಂಭದಲ್ಲೇ ವಿಡಿಯೋ ಒಂದನ್ನು ಹಂಚಿಕೊಂಡು ವಿಡಿಯೋದಲ್ಲಿ ಸ್ಟ್ರಾಂಗ್ ಆಗಿಯೇ ವಾರ್ನ್ ಕೊಟ್ಟಿದ್ದಾರೆ. ಅಷ್ಟಕ್ಕೂ ಆಕೆ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ಆಂಕರ್‍ ಆಗಿ ಫೇಂ ಪಡೆದುಕೊಂಡ ಅನಸೂಯ ಭಾರದ್ವಾಜ್ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  ಕಿರುತೆರೆಯಲ್ಲಿ ಸೌಂದರ್ಯದ ಧಾಳಿ ಮಾಡಿದ ಅನಸೂಯ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕೆ ಧರಿಸುವ ಡ್ರೆಸ್ ಗಳು ಪೋಸ್ಟ್ ಗಳ ಕಾರಣದಿಂದ ಆಕೆಯನ್ನು ತುಂಭಾನೆ ಟ್ರೋಲ್ ಮಾಡಲಾಗುತ್ತಿರುತ್ತದೆ. ಟ್ರೋಲರ್‍ ಗಳಿಗೆ ಆಕೆ ಸರಿಯಾಗಿಯೇ ಕೌಂಟರ್‍ ಕೊಡುತ್ತಿರುತ್ತಾರೆ. ಜಬರ್ದಸ್ತ್ ಶೋ ಆಂಕರ್‍ ಆಗಿದ್ದಾಗಲೂ ಆಕೆ ಧರಿಸುವಂತಹ ಡ್ರೆಸ್ ಗಳ ಕಾರಣದಿಂದ ವಿಮರ್ಶೆ ಮಾಡಲಾಗುತ್ತಿತ್ತು. ಅದಕ್ಕೆ ಆಕೆ ನನ್ನ ಬಟ್ಟೆ ನನ್ನ ಇಷ್ಟ, ವಿಮರ್ಶೆ ಮಾಡೋಕೆ ನೀವ್ಯಾರು ಎಂದು ಪ್ರಶ್ನೆ ಮಾಡಿದ್ದರು. ಜೊತೆಗೆ ರೌಡಿ ಹಿರೋ ವಿಜಯ್ ದೇವರಕೊಂಡರೊಂದಿಗೆ ವಿವಾದ ಸಹ ಸೃಷ್ಟಿಸಿಕೊಂಡಿದ್ದರು. ವಿಜಯ್ ದೇವರಕೊಂಡ ಫ್ಯಾನ್ಸ್ ಹಾಗೂ ಅನಸೂಯ ನಡುವೆ ದೊಡ್ಡ ಮಟ್ಟದಲ್ಲೇ ವಾರ್‍ ಸಹ ನಡೆಯಿತು ಎಂದೇ ಹೇಳಬಹುದು.

ನಟಿ ಅನಸೂಯ 2023 ರಲ್ಲಿ ಹೆಚ್ಚಾಗಿ ವಿವಾದಗಳನ್ನೇ ಫೇಸ್ ಮಾಡಿದ್ದರು. 2024 ಎಂಟ್ರಿ ಕೊಡುತ್ತಿದ್ದೇವೆ, ಈ ಕ್ರಮದಲ್ಲೇ ವಾರ್ನಿಂಗ್ ನೀಡುತ್ತಾ ಅನಸೂಯ ಒಂದು ರೀಲ್ ಮಾಡಿದ್ದಾರೆ. 2023 ರಲ್ಲಿ ನನ್ನ ಮಾತುಗಳು, ನಡತೆಯ ಕಾರಣದಿಂದ ಯಾರಿಗಾದರೂ ನೋವು ಪಟ್ಟಿದ್ದರೇ, ನಿಮಗೆ ಒಳ್ಳೆದು ಆಗಿದೆ. 2024ರಲ್ಲೂ ಸಹ ನಾನು ಹೀಗೇ ಇರುತ್ತೇನೆ. ನನ್ನ ಸುದ್ದಿಗೆ ಬಂದರೇ ಸರಿಯಾಗಿ ಪೂಜೆ ಮಾಡುತ್ತೇನೆ ಎಂದು ಕೋಪದಲ್ಲೇ ಮಾತನಾಡಿದ್ದಾರೆ. ಇನ್ನೂ ಅನಸೂಯ ಹಂಚಿಕೊಂಡ ಈ ಲೇಟೆಸ್ಟ್ ವಿಡಿಯೋ ಸೋಷಿಯಲ್  ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ 2023 ರಲ್ಲಿ ಅನಸೂಯ ಕೆಲವೊಂದು ಸಿನೆಮಾಗಳಲ್ಲಿ ನಟಿಸಿ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಮೈಖಲ್, ರಂಗಮಾರ್ತಾಂಡ, ಪೆದಕಾಪು, ವಿಮಾನಂ ಸಿನೆಮಾಗಳ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಸದ್ಯ ಆಕೆ ಪುಷ್ಪಾ-2 ಸಿನೆಮಾದಲ್ಲಿ ಸಹ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಆಕೆ ತುಂಬಾನೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದ್ದು, 2024 ರಲ್ಲಿ ಆಕೆ ಮತಷ್ಟು ಸಿನೆಮಾಗಳ ಮೂಲಕ ಸದ್ದು ಮಾಡಲಿದ್ದಾರೆ.

Most Popular

To Top