ಕೆರಿಯರ್ ನಲ್ಲಿ ಮೊದಲ ಬಾರಿಗೆ ಬೌಂಡರಿ ಬ್ರೇಕ್ ಮಾಡಿದಂತಹ ಅನುಪಮಾ, ಟಿಲ್ಲು ಸ್ಕ್ವೇರ್ ರೊಮ್ಯಾಂಟಿಕ್ ಪೋಸ್ ವೈರಲ್…..!

Follow Us :

ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಕೆರಿಯರ್‍ ಆರಂಭದಿಂದಲೂ ಪದ್ದತಿಯಾಗಿಯೇ ಕಾಣಿಸಿಕೊಂಡಿದ್ದರು.  ಆದರೆ ಕಳೆದ ವರ್ಷ ಮಾತ್ರ ಆಕೆ ಓವರ್‍ ಆಗಿಯೇ ಕಾಣಿಸಿಕೊಂಡಿದ್ದರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಓವರ್‍ ಆಗಿ ಗ್ಲಾಮರ್‍ ಶೋ ಮಾಡಿದರು. ಇದೀಗ ಆಕೆ ಸಿದ್ದು ಜೊನ್ನಲಗಡ್ಡ ಜೊತೆಗೆ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ಅನುಪಮಾ ರೊಮ್ಯಾನ್ಸ್ ಮಾಡಲಿದ್ದಾರೆ. ಇದೀಗ ಈ ಸಿನೆಮಾ ಲೇಟೆಸ್ಟ್ ಪೋಸ್ಟರ್‍ ಒಂದು ಬಿಡುಗಡೆಯಾಗಿದ್ದು, ಆಕೆಯ ಕೆರಿಯರ್‍ ನಲ್ಲಿ ಎಂದೂ ಈ ರೀತಿ ಬೋಲ್ಡ್ ಆಗಿ ಕಾಣಿಸಿಕೊಂಡಿಲ್ಲ ಎಂದೇ ಹೇಳಲಾಗುತ್ತಿದೆ.

ಮಲಯಾಳಂ ಮೂಲದ ನಟಿಯಾದರೂ ಸಹ ಅನುಪಮಾ ತೆಲುಗು ಪ್ರೇಕ್ಷರಿಗೆ ತುಂಬಾ ಹತ್ತಿರವಾದರು. ಸೌತ್ ನ ವಿವಿಧ ಭಾಷೆಗಳಲ್ಲಿ ಆಕೆ ವಿವಿಧ ಸಿನೆಮಾಗಳಲ್ಲಿ ನಟಿಸಿದ್ದರು. ಶತಮಾನಂ ಭವತಿ, ಹಲೋ ಗುರು ಪ್ರೇಮ ಕೋಸಮೇ, ಉನ್ನದಿ ಒಕ್ಕಟೆ ಜೀವಿತಂ ಸಿನೆಮಾದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಸದ್ಯ ನಟಿ ಅನುಪಮಾ ಡಿಜೆ ಟಿಲ್ಲು-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸಿದ್ದು ಜೊನ್ನಲಗಡ್ಡ ನಟನಾಗಿ ಕಾಣಿಸಿಕೊಂಡ ಡಿಜೆ ಟಿಲ್ಲು ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಕಡಿಮೆ ಬಂಡವಾಳದಲ್ಲಿ ಈ ಸಿನೆಮಾ ಸೆಟ್ಟೇರಿದ್ದು, ಭಾರಿ ಸಕ್ಸಸ್ ಕಂಡುಕೊಂಡಿತ್ತು.

ಇದೀಗ ಡಿಜೆ ಟಿಲ್ಲು ಸಿನೆಮಾದ ಸೀಕ್ವೆಲ್ ಟಿಲ್ಲು ಸ್ಕ್ವೇರ್‍ ಶೀಘ್ರದಲ್ಲೇ ತೆರೆಕಾಣಲಿದೆ. ಡಿಜೆ ಟಿಲ್ಲು ಸಿನೆಮಾದಲ್ಲಿ ಸಿದ್ದು ಜೊನ್ನಲಗಡ್ಡ ಹಾಗೂ ನೇಹಾ ಶೆಟ್ಟಿ ನಡುವೆ ಕೆಲವೊಂದು ರೊಮ್ಯಾನ್ಸ್ ದೃಶ್ಯಗಳೂ ಸಹ ಇತ್ತು. ಇದೀಗ ಟಿಲ್ಲು ಸ್ಕ್ವೇರ್‍ ನಲ್ಲೂ ಅನುಪಮಾ ಹಾಗೂ ಸಿದ್ದು ನಡುವೆ ನೆಕ್ಸ್ಟ್ ಲೆವಲ್ ಎಂಬಂತೆ ಕೆಲವೊಂದು ರೊಮ್ಯಾಂಟಿಕ್ ದೃಶ್ಯಗಳಿವೆ ಎನ್ನಲಾಗುತ್ತಿದೆ. ಈ ಸಿನೆಮಾದಲ್ಲಿ ಮೊದಲ ಬಾರಿಗೆ ಅನುಪಮಾ ಬೌಂಡರಿಗಳನ್ನು ದಾಟಿದ್ದಾರಂತೆ. ಇದೀಗ ಟಿಲ್ಲು ಸ್ಕ್ವೇರ್‍ ಸಿನೆಮಾ ತಂಡ ಹೊಸ ವರ್ಷದ ಶುಭಾಷಯಗಳನ್ನು ಕೋರುತ್ತಾ ಲೇಟೆಸ್ಟ್ ಪೋಸ್ಟರ್‍ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್‍ ನಲ್ಲಿ ಅನುಪಮಾ ನೆಕ್ಸ್ಟ್ ಲೆವೆಲ್ ಎಂಬಂತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‍ ನಲ್ಲಿ ಸಿದ್ದು ಹಾಗೂ ಅನುಪಮಾ ರೊಮ್ಯಾಂಟಿಕ್ ಪೋಸ್ ನೋಡಿದರೇ ಫ್ಯೂಜ್ ಔಟ್ ಆಗಲಿದೆ ಎಂದೇ ಹೇಳಲಾಗುತ್ತಿದೆ. ಪೋಸ್ಟರ್‍ ನಲ್ಲೇ ಈ ರೇಂಜ್ ನಲ್ಲಿದ್ದರೇ, ಇನ್ನೂ ಸಿನೆಮಾದಲ್ಲಿ ಯಾವ ರೇಂಜ್ ನಲ್ಲಿ ರೊಮ್ಯಾನ್ಸ್ ಇರುತ್ತದೆ ಎಂದು ಅಭಿಮಾನಿಗಳು ಕುತೂಹಲ ಹೆಚ್ಚಿಸಿಕೊಂಡಿದ್ದಾರೆ.