40 ರ ವಯಸ್ಸಿನಲ್ಲಿ ಮದುವೆಯಾಗಲಿದ್ದಾರಂತೆ ಸ್ಟಾರ್ ನಟಿ ತ್ರಿಷಾ, ಮಾಲಿವುಡ್ ನಿರ್ಮಾಪಕನೊಂದಿಗೆ ತ್ರಿಷಾ ಮದುವೆ?

Follow Us :

ಸೌತ್ ಸಿನಿರಂಗದಲ್ಲಿ ಹೆಚ್ಚು ಪರಿಚಯದ ಅವಸರವಿಲ್ಲದ ನಟಿಯರಲ್ಲಿ ತ್ರಿಷಾ ಸಹ ಒಬ್ಬರಾಗಿದ್ದಾರೆ. ಅನೇಕ ವರ್ಷಗಳ ಕಾಲ ದೊಡ್ಡ ಸ್ಟಾರ್‍ ಗಳ ಜೊತೆಗೆ ಸಹ ನಟಿಸುವ ಮೂಲಕ ಸೌತ್ ಸಿನಿರಂಗವನ್ನು ಆಳಿದ್ದರು. ಸದ್ಯ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕ್ರೇಜಿ ಆಫರ್‍ ಗಳ ಮೂಲಕ ಸಿನಿರಂಗದಲ್ಲಿ ಮುಂದುವರೆಯುತ್ತಿದ್ದಾರೆ. ತ್ರಿಷಾಗೆ ವಯಸ್ಸಾದರೂ ಸಹ ಇನ್ನೂ ಮದುವೆಯಾಗಿಲ್ಲ. ಇದೀಗ ತ್ರಿಷಾ 40ರ ವಯಸ್ಸಿನಲ್ಲಿ ಮತ್ತೆ ಮದುವೆಯಾಗಲಿದ್ದಾರಂತೆ, ಮಾಲಿವುಡ್ ನಿರ್ಮಾಪಕನ ಜೊತೆಗೆ ತ್ರಿಷಾ ಹಸಮಣೆ ಏರಲಿದ್ದಾರೆ ಎಂಬ ರೂಮರ್‍ ಸಖತ್ ವೈರಲ್ ಆಗುತ್ತಿದೆ.

ಸೌತ್ ನಲ್ಲಿ ಸುಮಾರು ವರ್ಷಗಳ ಬಳಿಕ ತ್ರಿಷಾ ಹವಾ ಮತ್ತೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕಂಡು ಕೊಳ್ಳುತ್ತಿರುವ ಸಕ್ಸಸ್ ಎಂದು ಹೇಳಲಾಗುತ್ತಿದೆ. ತಮಿಳಿನಲ್ಲಿ ಕಳೆದ ವರ್ಷ ತೆರೆಕಂಡ ಪೊನ್ನಿಯನ್ ಸೆಲ್ವನ್ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿತ್ತು. ವರ್ಷಂ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆ ಬಹುತೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿದರು. ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ತನ್ನ ಖಾತೆಯಲ್ಲಿ ಜಮೆ ಮಾಡಿಕೊಂಡಿದ್ದಾರೆ. ಸುಮಾರು 10-15 ವರ್ಷಗಳಿಂದ ಸಿನಿರಂಗದಲ್ಲಿ ಬೇಡಿಕೆಯುಳ್ಳಂತಹ ನಟಿ ತ್ರಿಷಾ ಇದೀಗ 40ರ ವಯಸ್ಸಿನಲ್ಲಿದ್ದು, ಈಗ ಮದುವೆಯಾಗಲಿದ್ದಾರೆಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ಸಿನಿರಂಗದಲ್ಲಿ ವಯಸ್ಸಾದರೂ ಸಹ ಇನ್ನೂ ಮದುವೆಯಾಗದ ಸ್ಟಾರ್‍ ನಟಿಯರಲ್ಲಿ ತ್ರಿಷಾ ಸಹ ಒಬ್ಬರಾಗಿದ್ದಾರೆ. ಅನೇಕ ಸಂದರ್ಶನದಲ್ಲಿ ತ್ರಿಷಾ ಮದುವೆಯ ಬಗ್ಗೆ ಅನೇಕ ಪ್ರಶ್ನೆಗಳೂ ಸಹ ಎದುರಾಗುತ್ತಿರುತ್ತವೆ. ಇದೀಗ ಮತ್ತೊಮ್ಮೆ ತ್ರಿಷಾ ಮದುವೆಯ ಬಗ್ಗೆ ರೂಮರ್‍ ಒಂದು ವೈರಲ್ ಆಗುತ್ತಿದೆ. ಅದರಂತೆ ಮಾಲಿವುಡ್ ಸಿನಿರಂಗದ ಖ್ಯಾತ ನಿರ್ಮಾಪಕರೊಬ್ಬರ ಜೊತೆಗೆ ತ್ರಿಷಾ ಮದುವೆಯಾಗಲಿದ್ದಾರಂತೆ. ಇನ್ನೂ ಈ ಸುದ್ದಿ ಸಿನಿವಲಯದಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸಹ ಶೀಘ್ರದಲ್ಲೇ ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಸಹ ಬರಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಕಳೆದ 2015 ರಲ್ಲಿ ತ್ರಿಷಾ ವರುಣ್ ಮಣಿಯನ್ ಎಂಬ ಬ್ಯುಸಿನೆಸ್ ಮ್ಯಾನ್ ಜೊತೆಗೆ ಎಂಗೇಜ್ ಮೆಂಟ್ ಸಹ ನಡೆದಿತ್ತು. ಆದರೆ ಕೆಲವೊಂದು ಕಾರಣಗಳಿಂದ ಇಬ್ಬರ ನಡುವೆ ವಿಬೇದಗಳು ಏರ್ಪಟ್ಟು ಇಬ್ಬರೂ ಬೇರೆಯಾದರು. ಅಲ್ಲಿಂದ ಆಕೆ ಸಿಂಗಲ್ ಆಗಿಯೇ ಜೀವನ ಸಾಗಿಸುತ್ತಿದ್ದಾರೆ. ಆಗಾಗ ಆಕೆಯ ಮದುವೆಯ ಬಗ್ಗೆ ಸಹ ಕೆಲವೊಂದು ಸುದ್ದಿಗಳು ವೈರಲ್ ಆಗುತ್ತಿರುತ್ತವೆ. ಅದೇ ಮಾದರಿಯಲ್ಲಿ ಇದೀಗ ಮದುವೆ ರೂಮರ್‍ ವೈರಲ್ ಆಗುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಬರಬೇಕಿದೆ.