ಬುದ್ದಿಯಿಲ್ಲವೇ ನನ್ನ ಮೇಲೆ ಬೀಳುತ್ತಿದ್ದೀರಾ ಎಂದು ವಿರುದ್ದ ಫೈರ್ ಆದ ತ್ರಿಷಾ, ಇದು ಏನಾದರೂ ರಾಷ್ಟ್ರೀಯ ಸಮಸ್ಯೆಯೇ ಎಂದು ಕಿಡಿಕಾರಿದ ನಟಿ…..!

ಸೌತ್ ಸಿನಿರಂಗದಲ್ಲಿ ಹೆಚ್ಚು ಪರಿಚಯದ ಅವಸರವಿಲ್ಲದ ನಟಿಯರಲ್ಲಿ ತ್ರಿಷಾ ಸಹ ಒಬ್ಬರಾಗಿದ್ದಾರೆ. ಅನೇಕ ವರ್ಷಗಳ ಕಾಲ ದೊಡ್ಡ ಸ್ಟಾರ್‍ ಗಳ ಜೊತೆಗೆ ಸಹ ನಟಿಸುವ ಮೂಲಕ ಸೌತ್ ಸಿನಿರಂಗವನ್ನು ಆಳಿದ್ದರು. ಸದ್ಯ ಆಕೆ ಸೆಕೆಂಡ್…

ಸೌತ್ ಸಿನಿರಂಗದಲ್ಲಿ ಹೆಚ್ಚು ಪರಿಚಯದ ಅವಸರವಿಲ್ಲದ ನಟಿಯರಲ್ಲಿ ತ್ರಿಷಾ ಸಹ ಒಬ್ಬರಾಗಿದ್ದಾರೆ. ಅನೇಕ ವರ್ಷಗಳ ಕಾಲ ದೊಡ್ಡ ಸ್ಟಾರ್‍ ಗಳ ಜೊತೆಗೆ ಸಹ ನಟಿಸುವ ಮೂಲಕ ಸೌತ್ ಸಿನಿರಂಗವನ್ನು ಆಳಿದ್ದರು. ಸದ್ಯ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕ್ರೇಜಿ ಆಫರ್‍ ಗಳ ಮೂಲಕ ಸಿನಿರಂಗದಲ್ಲಿ ಮುಂದುವರೆಯುತ್ತಿದ್ದಾರೆ. ತ್ರಿಷಾಗೆ ವಯಸ್ಸಾದರೂ ಸಹ ಇನ್ನೂ ಮದುವೆಯಾಗಿಲ್ಲ. ಇದೀಗ ಆಕೆ ಟ್ರೋಲರ್‍ ಗಳ ವಿರುದ್ದ ಫೈರ್‍ ಆಗಿದ್ದಾರೆ. ನಿಮಗೆ ಬುದ್ದಿ ಇದೆಯಾ, ಅಂತಹ ಕೆಲಸ ಹೇಗೆ ಮಾಡುತ್ತಿದ್ದಿರಾ, ಯದ್ವಾತದ್ವಾ ಬರೆದರೂ ಸುಮ್ಮನೇ ಇರಬೇಕಾ, ನನ್ನ ವಯಸ್ಸಿನ ಕಥೆ ನಿಮಗೇನು ಕೆಲಸ ಎಂದು ಟ್ರೋಲರ್‍ ಗಳ ವಿರುದ್ದ ಕಿಡಿಕಾರಿದ್ದಾರೆ.

ಚೆನೈ ಮೂಲದ ನಟಿ ತ್ರಿಷಾ ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ತೆಲುಗು, ತಮಿಳು ಸಿನಿರಂಗವನ್ನು ಆಳಿದಂತಹ ನಟಿಯಾಗಿದ್ದಾರೆ. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡು ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಆಕೆ ತನ್ನ ರೆನ್ಯುಮರೇಷನ್ ಸಹ ಏರಸಿಕೊಂಡಿದ್ದಾರೆ. ಪೊನ್ನಿಯನ್ ಸೆಲ್ವನ್, ಲಿಯೋ ಸಿನೆಮಾದ ಮೂಲಕ ಭಾರಿ ಸಕ್ಸಸ್ ಸಹ ಪಡೆದುಕೊಂಡರು. ಇದೀಗ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿದ್ದು, ಪುಲ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ನಟ ಮನ್ಸೂರ್‍ ತ್ರಿಷಾ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಈ ಸಂಬಂಧ ಅನೇಕ ನಟ-ನಟಿಯರು ಮನ್ಸೂರ್‍ ವಿರುದ್ದ ಕಿಡಿಕಾರಿದ್ದರು. ಇನ್ನೂ ಈ ವಿವಾದ ಹಸಿಯಾಗಿಯೇ ಇದೆ.

ಇನ್ನೂ ನಟಿ ತ್ರಿಷಾಗೆ ನಲವತ್ತರ ವಯಸ್ಸಾದರೂ ಸಹ ಇನ್ನೂ ಮದುವೆಯಾಗಿಲ್ಲ. ಈ ಕಾರಣದಿಂದ ಅನೇಕರು ಆಕೆಯನ್ನು ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಈ ಟ್ರೋಲ್ ಸುಮಾರು ದಿನಗಳಿಂದ ಬರುತ್ತಲೇ ಇದೆ. ಆದರೆ ತ್ರಿಷಾ ಈ ಬಗ್ಗೆ ಎಂದಿಗೂ ಸಹ ಅದಕ್ಕೆ ರಿಯಾಕ್ಟ್ ಆಗಿರಲಿಲ್ಲ. ಆದರೆ ಇದೀಗ ತ್ರಿಷಾ ತಾಳ್ಮೆ ಕಳೆದುಕೊಂಡಿದ್ದು, ಟ್ರೋಲರ್‍ ಗಳಿಗೆ ಸರಿಯಾದ ಕೌಂಟರ್‍ ಕೊಟ್ಟಿದ್ದಾರೆ. ನಿಮಗೆ ನನ್ನ ವಯಸ್ಸಿನೊಂದಿಗೆ ಏನು ಸಮಸ್ಯೆ, ನನ್ನ ವಯಸ್ಸಿನ ಬಗ್ಗೆ ಚರ್ಚೆ ಏಕೆ, ಇದೇನಾದರೂ ರಾಷ್ಟ್ರಿಯ ಸಮಸ್ಯೆಯೇ, ಅಥವಾ ದೇಶದ ಆರ್ಥಿಕ ಸಮಸ್ಯೆಯೆ. ಅವರು ಬರೆಯುತ್ತಿರುವುದು ಹಾಗೂ ವಿಡಿಯೋಗಳು ಅದೇ ಮಾದರಿಯಲ್ಲಿದೆ. ಬೇರೆ ಸಮಸ್ಯೆ ಏನು ಇಲ್ಲ ಎಂಬಂತೆ ನನ್ನ ವಯಸ್ಸಿನ ಬಗ್ಗೆ ಮಾತನಾಡುತ್ತಿರೋದು ನಿಮಗೆ ನಾಚಿಕೆ ಎನ್ನಿಸಿಲ್ಲವೇ ಎಂದು ಸೋಷಿಯಲ್ ಮಿಡಿಯಾ ಕುರಿತು ಆಗ್ರಹಿಸಿದ್ದಾರೆ.

ಬುದ್ದಿಯಿಲ್ಲದವರು ಮಾಡುವಂತಹ ಕೆಲಸ ಇದು. ಅಂತಹ ಕಾಮೆಂಟ್ ಗಳ ಬಗ್ಗೆ ಮೊದಲು ಹಿಡಿಸಿಕೊಳ್ಳಬಾರದೆಂದುಕೊಂಡಿದ್ದೆ. ಆದರೆ ಅದು ನಿಲ್ಲುತ್ತಿಲ್ಲ. ಆದ ಕಾರಣ ರಿಯಾಕ್ಟ್ ಆಗಿಬೇಕಾಯ್ತು ಎಂದು ಟ್ರೋಲರ್‍ ಗಳ ವಿರುದ್ದ ಆಗ್ರಹ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಸಿನಿರಂಗದಲ್ಲಿ 40 ದಾಟಿದ ಅನೇಕ ಹಿರೋಯಿನ್ ಗಳು ಇದ್ದಾರೆ. ನಾನೊಬ್ಬಳೇ ಅಲ್ಲ. ಇಂದಿಗೂ ನನಗೆ ಅವಕಾಶಗಳು ಬರುತ್ತಿರೋದು ಕೆಲವರಿಗೆ ಇಷ್ಟ ಆಗುತ್ತಿಲ್ಲ. ಅಸೂಯೆಯಿಂದ ಈ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ನನ್ನಲ್ಲಿ ಕೊನೆಯ ಉಸಿರು ಇರೋವರೆಗೂ ನಾನು ನಟಿಸುತ್ತೇನೆ. ವಯಸ್ಸಿಗೂ ನಟನೆಗೂ ಸಂಬಂಧವಿಲ್ಲ ಎಂದು ಎಮೋಷನಲ್ ಆಗಿ ರಿಯಾಕ್ಟ್ ಆಗಿದ್ದಾರೆ. ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿವೆ.