ಮತ್ತೊಮ್ಮೆ ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟ ತಮನ್ನಾ, 30 ವರ್ಷಕ್ಕೆ ಮದುವೆಯಾಗಿ ಮಕ್ಕಳನ್ನು ಪಡೆದುಕೊಳ್ಳಬೇಕು ಎಂದುಕೊಂಡಿದ್ರಂತೆ…….!

Follow Us :

ಇತ್ತೀಚಿಗೆ ಮಿಲ್ಕಿ ಬ್ಯೂಟಿ ತಮನ್ನಾ ಸದಾ ಸುದ್ದಿಯಲ್ಲೆ ಇರುತ್ತಾರೆ. ವರ್ಷದ ಆರಂಭದಲ್ಲಿ ವಿಜಯ್ ವರ್ಮಾ ಜೊತೆಗೆ ತಮನ್ನಾ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಶುರುವಾದಾಗಿನಿಂದ ಇಲ್ಲಿಯವರೆಗೂ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅವರು ಕೇಳಿಬರುತ್ತಲೇ ಇದೆ. ಕೆಲವು ದಿನಗಳ ಹಿಂದೆಯಷ್ಟೆ ತಮನ್ನಾ ತಾನು ವಿಜಯ್ ವರ್ಮಾರನ್ನು ಪ್ರೀತಿಸುತ್ತಿರುವುದಾಗಿ ಸ್ಪಷ್ಟನೆ ಕೊಟ್ಟರು. ಇದೀಗ ಮತ್ತೊಮ್ಮೆ ಆಕೆ ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದು, ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ನಟಿ ತಮನ್ನಾ ಹಾಗೂ ವಿಜಯ್ ವರ್ಮಾ ಗೋವಾದಲ್ಲಿ ನಡೆದಂತಹ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಒಟ್ಟಿಗೆ ಕಾಣಿಸಿಕೊಂಡು ಇಬ್ಬರೂ ಲಿಪ್ ಲಾಕ್ ಮಾಡಿಕೊಂಡಿದ್ದರು. ಆ ವಿಡಿಯೋ ವೈರಲ್ ಆದ ಬಳಿಕ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಹರಿದಾಡಿತ್ತು. ಬಳಿಕ ಅನೇಕ ಬಾರಿ ಒಟ್ಟಿಗೆ ಸಹ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದ್ದರು. ಆದರೆ ಈ ಬಗ್ಗೆ ತಮನ್ನಾ ಮೊದಲಿಗೆ ಎಲ್ಲವೂ ನಿರಾಧಾರ, ಸುಳ್ಳು ಎಂದು ತಳ್ಳಿಹಾಕಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಈ ಬಗ್ಗೆ ರಿಯಾಕ್ಟ್ ಆಗಿದ್ದು, ಹೌದು ನಾವಿಬ್ಬರು ಪ್ರೀತಿಸಿಕೊಳ್ಳುತ್ತಿದ್ದಿವಿ. ಲಸ್ಟ್ ಸ್ಟೋರೀಸ್ ಶೂಟಿಂಗ್ ಸಮಯದಲ್ಲಿ ನಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ನನ್ನ ಸುಂದರ ಪ್ರದೇಶಕ್ಕೆ ವಿಜಯ್ ಬಂದಿದ್ದಾನೆ. ನನಗೆ ಗೋಡೆಯಂತೆ ರಕ್ಷಣೆ ನೀಡುತ್ತಾನೆ ಎಂಬೆಲ್ಲಾ ಮಾತುಗಳನ್ನು ಹೇಳುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತ ಗೊಳಿಸಿದ್ದರು. ಜೊತೆಗೆ ವಿಜಯ್ ಸಹ ತಮ್ಮ ಪ್ರೀತಿಯ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದೀಗ ಅವರು ಅಧಿಕೃತವಾಗಿ ಪ್ರೀತಿ ಮಾಡಿಕೊಳ್ಳುತ್ತಿರುವ ಬಗ್ಗೆ ಖಚಿತವಾಗಿದೆ.

ಇನ್ನೂ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ತಮನ್ನ ಮತ್ತೊಮ್ಮೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ನಾನು ಕೆರಿಯರ್‍ ಆರಂಭಿಸಿದ ಹೊಸತರಲ್ಲಿ ನಾನು 10 ವರ್ಷಗಳು ಮಾತ್ರ ಸಿನಿಮಾಗಳಲ್ಲಿ ಬ್ಯುಸಿಯಾಗಬಲ್ಲೆ. ಅದರಂತೆ ಮೂವತ್ತು ವರ್ಷ ಬರುವ ವೇಳೆಗೆ ನನ್ನ ಕರಿಯರ್‍ ಮುಗಿಯಬಹುದು. ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದುಕೊಳ್ಳಬಹುದು ಎಂದು ಕೊಂಡಿದ್ದು. ಬಳಿಕ ಏನು ಮಾಡಬೇಕೆಂಬುದು ಆಲೋಚಿಸಿಲ್ಲ. ಆದರೆ ಇದೀಗ ಮೂವತ್ತು ದಾಟಿದ್ದು, ನಾನು ಈಗಲೇ ಹುಟ್ಟಿದ್ದಂತೆ ಭಾಸವಾಗಿದೆ. ನನಗೆ ಪುರ್ನಜನ್ಮ ದೊರೆತಂತಾಗಿದೆ. ಮದುವೆ ಎಂದರೇ ಪಾರ್ಟಿ ಮಾಡಿಕೊಳ್ಳುವುದು ಅಲ್ಲ ಅದೊಂದು ಜವಾಬ್ದಾರಿ. ಆ ಜವಾಬ್ದಾರಿಯನ್ನು ಸ್ವೀಕಾರ ಮಾಡಲು ನಾನು ಸಿದ್ದವಾಗಿರುವಾಗಲೇ ವೈವಾಹಿಕ ಜೀವನಕ್ಕೆ ಹೆಜ್ಜೆಹಾಕುತ್ತೇನೆ. ಮದುವೆ ವಯಸ್ಸು ಬಂದಿದೆ, ಯಾರೋ ಏನೋ ಹೇಳಿದರೆಂದು ಮದುವೆಗೆ ಒಪ್ಪಬಾರದು ಎಂದು ತಮನ್ನಾ ಇಂಟ್ರಸ್ಟಿಂಗ್ ವಿಚಾರಗಳನ್ನು ಹೊರಹಾಕಿದ್ದಾರೆ.