ಎಮೋಷನಲ್ ಕಾಮೆಂಟ್ಸ್ ಮಾಡಿದ ಲೇಡಿ ಸೂಪರ್ ಸ್ಟಾರ್ ನಯನತಾರಾ, ಮಕ್ಕಳೊಂದಿಗೆ ನನ್ನ ದಿನ ಮೊದಲಾಗುತ್ತೆ ಎಂದ ನಟಿ…..!

Follow Us :

ಸೌತ್ ಸಿನಿರಂಗದಲ್ಲಿ ನಯನತಾರಾ ಲೇಡಿ ಸೂಪರ್‍ ಸ್ಟಾರ್‍ ಆಗಿ ಫೇಂ ಸಂಪಾದಿಸಕೊಂಡು ಮದುವೆಯಾದರೂ ಸಹ ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಕಳೆದ ವರ್ಷ ಜೂನ್ ಮಾಹೆಯಲ್ಲಿ ನಯನತಾರ ಹಾಗೂ ವಿಘ್ನೇಶ್ ಮದುವೆಯಾದರು. ಮದುವೆಯಾದ ಕೆಲವೇ ತಿಂಗಳಲ್ಲಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳ ತಾಯಿಯಾದರು. ಈ ಸುದ್ದಿ ಸಿನಿವಲಯದಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಸದ್ಯ ಸಿನೆಮಾ ಹಾಗೂ ಕುಟುಂಬದೊಂದಿಗೆ ಜೀವನ ಸಂತೋಷದಿಂದ ಸಾಗುಸುತ್ತಿದ್ದು, ಇದೀಗ ಎಮೋಷನಲ್ ಕಾಮೆಂಟ್ಸ್ ಮಾಡಿದ್ದಾರೆ.

ಸೌತ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಲೇಡಿ ಸೂಪರ್‍ ಸ್ಟಾರ್‍ ಎಂಬ ಖ್ಯಾತಿಗೆ ಗುರಿಯಾದ ನಟಿ ನಯನತಾರಾ ಬಗ್ಗೆ ಪ್ರತ್ಯೆಕವಾದ ಪರಿಚಯ ಬೇಕಾಗಿಲ್ಲ. ದಶಕಗಳ ಕಾಲ ಸ್ಟಾರ್‍ ನಯನತಾರಾ ಅನೇಕ ಸ್ಟಾರ್‍ ಹಿರೋಗಳ ಜೊತೆಗೆ ನಟಿಸಿದ್ದರು. ಜೊತೆಗೆ ಆಕೆಯ ವೈಯುಕ್ತಿಕ ಜೀವನದಲ್ಲೂ ಸಹ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಆಕೆಯ ಜೀವನದಲ್ಲಿ ಲವ್ ಬ್ರೇಕಪ್ ಗಳನ್ನು ಸಹ ಎದುರಿಸಿದ್ದಾರೆ. ಪ್ರಭುದೇವ ಹಾಗೂ ಶಿಂಬು ಜೊತೆಗೆ ಸಹ ಆಕೆ ಪ್ರೇಮಾಯಣ ನಡೆಸಿದ್ದರು. ಅವರಿಬ್ಬರೊಂದಿಗೆ ಬ್ರೇಕಪ್ ಪಡೆದುಕೊಂಡು ನಿರ್ದೇಶಕ ವಿಘ್ನೇಶ್ ಶಿವನ್ ರನ್ನು ಸುಮಾರು ವರ್ಷಗಳ ಕಾಲ ಪ್ರೀತಿಸಿ ಕಳೆದ ವರ್ಷ ಜೂನ್ 9 ರಂದು ಅದ್ದೂರಿಯಾಗಿ ವಿವಾಹವಾದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಸೆರಗೋಸಿ ಪದ್ದತಿಯ ಮೂಲಕ ಇಬ್ಬರ ಅವಳಿ ಗಂಡು ಮಕ್ಕಳನ್ನು ಪಡೆದುಕೊಂಡರು. ಈ ವಿಚಾರದಿಂದ ಸಹ ಈ ಜೋಡಿ ಕೆಲವೊಂದು ಸಮಸ್ಯೆಗಳಿಗೆ ವಿವಾದಗಳಿಗೆ ಗುರಿಯಾಗಿದ್ದರು. ಸದ್ಯ ಎಲ್ಲವನ್ನೂ ದಾಟಿ ತಮ್ಮ ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.

ಇನ್ನೂ ನಯನತಾರಾ ಇತ್ತಿಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ಮಕ್ಕಳ ಬಗ್ಗೆ ಎಮೋಷನಲ್ ಹೇಳಿಕೆಗಳನ್ನು ನೀಡಿದ್ದಾರೆ. ನಾನು ನನ್ನ ಗರ್ಭದಿಂದ ಮಕ್ಕಳಿಗೆ ಜನ್ಮ ನೀಡದೇ ಇದ್ದರೂ ಸಹ ಸದ್ಯ ಮಾತೃತ್ವದ ಅನುಭವವನ್ನು ಆಸ್ವಾದಿಸುತ್ತಿದ್ದೆನೆ. ಅವರು ನನ್ನ ಜೀವನದಲ್ಲಿ ಬಂದ ಬಳಿಕ ನನ್ನ ಜೀವನವನ್ನೇ ನಾನು ಮರೆತು ಬಿಟ್ಟಿದ್ದೇನೆ. ಪ್ರತಿ ನಿತ್ಯ ನನ್ನ ಮಕ್ಕಳೋಂದಿಗೆ ನನ್ನ ಜೀವನ ಆರಂಭವಾಗುತ್ತದೆ. ನನ್ನ ಮಕ್ಕಳೊಂದಿಗೆ ಆ ದಿನ ಸಹ ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ತಾನು ಮಾತೃತ್ವದ ಅನುಭವವನ್ನು ಯಾವ ರೀತಿಯಲ್ಲಿ ಅನುಭವಿಸುತ್ತಿದ್ದೇನೆ ಎಂಬುದನ್ನು ತಿಳಿಸಿದ್ದಾರೆ. ಇನ್ನೂ ನಯನತಾರಾ ಹಾಗೂ ವಿಘ್ನೇಶ್ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಹ ಇತ್ತೀಚಿಗಷ್ಟೆ ಆಚರಿಸಿಕೊಂಡಿದ್ದರು. ಅಂದು ತಮ್ಮ ಇಬ್ಬರು ಮಕ್ಕಳ ಮುಖವನ್ನು ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಇನ್ನೂ ಮದುವೆಯಾದರೂ ಸಹ ನಯನತಾರಾ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಸಂಭಾವನೆ ಸಹ ಕಡಿಮೆಯಿಲ್ಲದೇ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆಗೆ ಜವಾನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ಆಕೆ ಬಿಕಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.