ತನ್ನ ಪ್ರಿಯಕರನನ್ನು ಪರಿಚಯಿಸಿದ ತಾಪ್ಸಿ, ಹತ್ತು ವರ್ಷಗಳಿಂದ ಕ್ರೀಡಾಪಟು ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರಂತೆ ತಾಪ್ಸಿ……!

Follow Us :

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ತಾಪ್ಸಿ ಪನ್ನು ಸಹ ಒಬ್ಬರಾಗಿದ್ದಾರೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಬಾಲಿವುಡ್‌ ನಲ್ಲಿ ದೊಡ್ಡ ಫೇಮ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದೀಗ ಆಕೆ ತನ್ನ ಪ್ರಿಯಕರನನ್ನು ಪರಿಚಯಿಸಿದ್ದಾರೆ. ಹತ್ತು ವರ್ಷಗಳಿಂದ ಆತನೊಂದಿಗೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ತಾಪ್ಸಿ ಪ್ರೀತಿಸುತ್ತಿರುವ ಹುಡುಗ ಯಾರು ಎಂಬ ವಿಚಾರಕ್ಕೆ ಬಂದರೇ,

ತೆಲುಗಿನ ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ತಾಪ್ಸಿ ಅನೇಕ ಸ್ಟಾರ್‍ ಗಳ ಜೊತೆಗೆ ತೆರೆ ಹಂಚಿಕೊಂಡರು. ಆದರೆ ಆಕೆಗೆ ಯಾವುದೇ ಸಿನೆಮಾ ಕಮರ್ಷಿಯಲ್ ಸಕ್ಸಸ್ ತಂದುಕೊಡಲಿಲ್ಲ. ಬಳಿಕ ಆಕೆ ಬಾಲಿವುಡ್ ನಲ್ಲಿ ಛಷ್ಮೆ ಬದ್ದೂರ್‍ ಸಿನೆಮಾದಲ್ಲಿ ನಟಿಸಿದ್ದರು. ಸೌತ್ ನಲ್ಲಿ ನಟಿಸುತ್ತಲೇ, ಹಿಂದಿಯಲ್ಲೂ ಸಹ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಾ ಬಂದರು. ಇನ್ನೂ ತಾಪ್ಸಿ 2016 ರಿಂದ ಬಾಲಿವುಡ್ ನಲ್ಲೇ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಆಕೆ ನಟಿಸಿದ ಪಿಂಕ್, ಬದ್ಲಾ ಮೊದಲಾದ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಕೊನೆಯದಾಗಿ ಆಕೆ ಡಂಕಿ ಎಂಬ ಸಿನೆಮಾದಲ್ಲಿ ಶಾರುಖ್ ಖಾನ್ ಜೊತೆಗೆ ನಟಿಸಿದ್ದು ಈ ಸಿನೆಮಾದಲ್ಲಿ ತಾಪ್ಸಿ ಅಭಿನಯಕ್ಕೆ ಒಳ್ಳೆಯ ಪ್ರಶಂಸೆ ಸಹ ದೊರೆತಿದೆ ಎನ್ನಬಹುದಾಗಿದೆ.

ಇನ್ನೂ ನಟಿ ತಾಪ್ಸಿ ಪನ್ನು ರವರ ವಯಸ್ಸು 36 ವರ್ಷ. ಆದರೂ ತಾಪ್ಸಿ ಇನ್ನೂ ಮದುವೆಯಾಗಿಲ್ಲ. ಈ ಬಗ್ಗೆ ಆಕೆಯ ಅಭಿಮಾನಿಗಳು ಸುಮಾರು ಬಾರಿ ಮದುವೆಯ ಬಗ್ಗೆ ಕೇಳಿದ್ದಾರೆ. ಇದೀಗ ತಾಪ್ಸಿ ತಾನು ಪ್ರೀತಿಸುತ್ತಿರುವ ಯುವಕನನ್ನು ಪರಿಚಯಿಸಿದ್ದಾರೆ. ಆಕೆ ಪ್ರೀತಿಸುತ್ತಿರುವ ಯುವಕ ಡೆನ್ಮಾರ್ಕ್ ಮೂಲದವರಾಗಿದ್ದಾರೆ. ಆಕೆ ಪ್ರೀತಿಸುತ್ತಿರುವ ಯುವಕ ಬ್ಯಾಡ್ಮಿಂಟನ್ ಪ್ಲೇಯರ್‍ ಮಾಥಿಸ್ ಬೋ. ಬಾಲಿವುಡ್ ಗೆ ಬಂದ ಹೊಸದರಲ್ಲಿ ಆಕೆ ಮಾಢಿಸ್ ಬೋ ಜೊತೆಗೆ ಪರಿಚಯ ಏರ್ಪಟ್ಟು, ಬಳಿಕ ಪರಿಚಯ ಪ್ರೀತಿಯಾಗಿ ಬದಲಾಗಿದೆಯಂತೆ. ಕಾಲ ಕಳೆದಂತೆ ಇಬ್ಬರ ನಡುವೆ ಸಂಬಂಧ ಸಹ ಬಲಗೊಂಡಿದೆ. ಇಷ್ಟು ದಿನಗಳಿಂದ ಆತನೊಂದಿಗೆ ಇದ್ದೆ. ಮಾಥಿಸ್ ಜೊತೆಗಿನ ಸಂಬಂಧ ಸಂತೊಷ ನೀಡಿದೆ. ಮಾಥೀಸ್ ಜೊತೆಗೆ ಬೇರೆಯಾಗಿ ಬೇರೊಬ್ಬರನ್ನು ಪ್ರೀತಿಸಬೇಕೆಂಬ ಆಲೋಚನೆ ಸಹ ಬರಲಿಲ್ಲ. ಪ್ರೀತಿ ಮದುವೆ ವಿಚಾರದಲ್ಲಿ ನನಗೆ ಕೆಲವೊಂದು ಅಭಿಪ್ರಾಯಗಳಿದೆ. ಆದ್ದರಿಂದ ಈ ಸುದ್ದಿಯನ್ನು ಹೊರಹಾಕಲಿಲ್ಲ ಎಂದು ತಾಪ್ಸಿ ಹೇಳಿದ್ದಾರೆ.