ನಾವೂ ಹಿಂದೂಗಳೇ, ನನ್ನ ಎದೆ ಸೀಳಿದರೇ ಶ್ರೀರಾಮ, ಸಿದ್ದರಾಮ, ಎಲ್ಲರೂ ಕಾಣುತ್ತಾರೆ ಎಂದ ಶಾಸಕ ಪ್ರದೀಪ್ ಈಶ್ವರ್……!

Follow Us :

ಇಡೀ ದೇಶದ ಹಿಂದೂಗಳು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ರಾಜಕೀಯ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಾದಿಯಲ್ಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‍ ಸಹ ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಾವು ಹಿಂದೂಗಳೇ, ನಾವೂ ಸಹ ಶ್ರೀರಾಮ ಭಕ್ತರೇ, ನನ್ನ ಎದೆ ಸೀಳಿದರೇ ಶ್ರೀರಾಮ ಹಾಗೂ ಸಿದ್ದರಾಮ ಕಾಣುತ್ತಾರೆ ಎಂದು ಹೇಳುವ ಮೂಲಕ ತಾವು ರಾಮಮಂದಿರದ ವಿರೋಧೀಗಳಲ್ಲ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಈ ಬಗ್ಗೆ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕ ನಮ್ಮಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಯಾವುದೇ ಗೊಂದಲವಿಲ್ಲ. ನಾವು ಸಹ ಹಿಂದೂಗಳು, ನಾವು ಶ್ರೀರಾಮನ ಆರಾಧಕರು, ನನ್ನ ಎದೆ ಸೀಳಿದರೇ ಶ್ರೀರಾಮ, ಸಿದ್ದರಾಮ ಎಲ್ಲರೂ ಇದ್ದಾರೆ. ಆದರೆ ಬಿಜೆಪಿಯವರು ಮಾತ್ರ ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುತ್ತಿದ್ದಾರೆ. ಯುವಕರು ರಾಜಕಾರಣಿಗಳ ಹಿಂದೆ ಬರಬೇಡಿ. ಚುನಾವಣೆ ಸಮಯದಲ್ಲಿ ನಿಮಗೆ ರಾಜಕಾರಣಿ ಇಷ್ಟ ಆದರೆ ಆತನಿಗೆ ಮತ ಹಾಕಿ. ಯುವಕರು ಯಾವುದೇ ಕಾರಣಕ್ಕೂ ಕೋಮು ಗಲಭೆಗೆ ಒಳಗಾಗಬೇಡಿ. ತಮ್ಮ ಕುಟುಂಬಕ್ಕಾಗಿ ಜೀವನ ಕಟ್ಟಿಕೊಳ್ಳಿ, ಸಂಪಾದನೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಇನ್ನೂ ರಾಮಮಂದಿರ ವಿಚಾರವನ್ನು ತೆರೆಸಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜ.22 ರ ಬಳಿಕ ಅಯೋಧ್ಯೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. ನಾವೂ ಸಹ ಹೋಗುತ್ತೇವೆ. ನಾನೂ ಸಹ ಶ್ರೀರಾಮನ ಆರಾಧಕ, ನನಗೂ ದೈವ ಭಕ್ತಿಯಿದೆ. ದೈವ ಭಕ್ತಿ ಇರುವ ಕಾರಣದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಇನ್ನೂ ಸಚಿವ ಅನಂತ್ ಕುಮಾರ್‍ ಹೆಗಡೆ ಬಹಿರಂಗ ಚರ್ಚೆಗೆ ಬರಲಿ. ಸಂಸ್ಕೃತಿಯ ಬಗ್ಗೆ ಮಾತನಾಡೋಣ. ಪ್ರತಾಪ್ ಸಿಂಹ ರವರ ಬಗ್ಗೆ ಗೌರವ ಕೊಟ್ಟು ಮಾತನಾಡುತ್ತೇನೆ. ನಮ್ಮ ಮನೆಯಲ್ಲಿ ನಮಗೆ ಒಳ್ಳೆಯ ಸಂಸ್ಕೃತಿ ಕಲಿಸಿದ್ದಾರೆ ಎಂದು ಕೌಂಟರ್‍ ಕೊಟ್ಟಿದ್ದಾರೆ. ಇದೇ ಸಮಯದಲ್ಲಿ ಲೋಕಸಭಾ ಚುನಾವಣೆ ಬಗ್ಗೆ ಸಹ ಮಾತನಾಡಿದ್ದಾರೆ. ಡಾ.ಸುಧಾಕರ್‍ ರವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಸ್ವಲ ದಿನ ವಿಶ್ರಾಂತಿ ತೆಗೆದುಕೊಳ್ಳಲಿ. ನಮ್ಮೂರು ಹುಡುಗ ಮತ್ತೆ ಸೋಲು ನನಗೆ ಇಷ್ಟವಿಲ್ಲ. ನಾನೂ ನಿಗಮ ಮಂಡಳಿಯ ಆಕಾಂಕ್ಷಿಯೂ ಅಲ್ಲ, ಪಕ್ಷ ಲೋಕಸಭೆಗೆ ನಿಲ್ಲು ಎಂದರೇ ನಿಲ್ಲೋಕು ಸಹ ನಾನು ಸಿದ್ದ. ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಎಂದು ಹೇಳಿದ್ದಾರೆ.