ಟಾಪ್ ಗ್ಲಾಮರ್ ಶೋ ಮೂಲಕ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ಸಮಂತಾ, ವೈರಲ್ ಆದ ಹಾಟ್ ಪೊಟೋಸ್…..!

ಸ್ಟಾರ್‍ ನಟಿ ಸಮಂತಾ ಆರೋಗ್ಯದ ಕಾರಣದಿಂದ ಒಂದು ವರ್ಷ ಸಿನೆಮಾಗಳಿಂದ ದೂರವುಳಿದಿರುವ ಬಗ್ಗೆ ತಿಳಿದೇ ಇದೆ. ಸಿನೆಮಾಗಳಿಂದ ದೂರವುಳಿದರೂ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಗಳು,…

ಸ್ಟಾರ್‍ ನಟಿ ಸಮಂತಾ ಆರೋಗ್ಯದ ಕಾರಣದಿಂದ ಒಂದು ವರ್ಷ ಸಿನೆಮಾಗಳಿಂದ ದೂರವುಳಿದಿರುವ ಬಗ್ಗೆ ತಿಳಿದೇ ಇದೆ. ಸಿನೆಮಾಗಳಿಂದ ದೂರವುಳಿದರೂ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಗಳು, ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ಫಿದಾ ಮಾಡುತ್ತಲೇ ಇದ್ದಾರೆ. ಇದೀಗ ಆಕೆ ಟಾಪ್ ಗ್ಲಾಮರ್‍ ಶೋ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಸಮಂತಾ ಲೇಟೆಸ್ಟ್ ಲುಕ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಮಯೋಸೈಟಿಸ್ ವ್ಯಾಧಿಯಿಂದ ತುಂಬಾನೆ ನೋವು ಅನುಭವಿಸಿದ್ದರು. ಸುಮಾರು ದಿನಗಳ ಕಾಲ ಆಕೆ ಅಜ್ಞಾತವಾಗಿಯೇ ಇದ್ದರು. ಬಳಿಕ ಆಕೆ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ತಾನು ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿದ್ದಾಗಿ ತಿಳಿಸಿದರು. ಮಯೋಸೈಟೀಸ್ ವ್ಯಾಧಿಯಿಂದ ಕೊಂಚ ಚೇತರಿಸಿಕೊಂಡ ಸಮಂತಾ ಯಶೋಧ ಹಾಗೂ ಶಾಕುಂತಲಂ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಾಕುಂತಲಂ ಸಿನೆಮಾ ಮಾತ್ರ ಆಲ್ ಟೈಂ ಡಿಜಾಸ್ಟರ್‍ ಆಗಿದೆ. ಈ ಸಿನೆಮಾದ ಬಳಿಕ ಆಕೆ ಖುಷಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಸಿನೆಮಾದ ಜೊತೆಗೆ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಟಿಸಿದ್ದು, ಈ ಸಿರೀಸ್ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಲಾಗುತ್ತಿದೆ.

ಸಮಂತಾ ಸಂಪೂರ್ಣ ಆರೋಗ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಹಿಂದೆ ಒಪ್ಪಿಕೊಂಡ ಸಿನೆಮಾಗಳ ಶೂಟಿಂಗ್ ಮುಗಿಸಿ ಒಂದು ವರ್ಷ ವಿರಾಮ ಪಡೆದುಕೊಂಡಿದ್ದಾರೆ. ವಿರಾಮದ ಅವಧಿಯಲ್ಲಿ ಕೆಲವೊಂದು ದೇವಾಲಯಗಳು, ವೆಕೇಷನ್ ಗಳಿಗೆ ಹಾರಿ ರಿಲ್ಯಾಕ್ಸ್ ಆಗಿದ್ದಾರೆ. ಸದ್ಯ ತುಂಬಾ ಎನರ್ಜಿಟಿಕ್ ಆಗಿ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಆಕೆಯ ಲೇಟೆಸ್ಟ್ ಲುಕ್ ನೋಡಿದರೇ ಆಕೆ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸಿನೆಮಾಗಳಿಂದ ದೂರ ಉಳಿದ ಸಮಂತಾ ಕಮರ್ಷಿಯಲ್ ಆಡ್ಸ್ ನಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ತನ್ನ ಸ್ವಂತ ಕ್ಲಾಥಿಂಗ್ ಬ್ಯುಸಿನೆಸ್ ಗಾಗಿ ಸಾಲು ಸಾಲು ಪೊಟೋಶೂಟ್ಸ್ ಮಾಡಿಸಿದ್ದರು. ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ ಎಂದು ಹೇಳಬಹುದಾಗಿದೆ.

ಇದೀಗ ಆಕೆ ಮತ್ತೊಂದು ಕಮರ್ಷಿಯಲ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಬಲ್ಗೇರಿ ಜ್ಯುವೆಲರಿ ಬ್ರಾಂಡ್ ಪ್ರಮೋಷನ್ ಮಾಡುತ್ತಾ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಜ್ಯುವೆಲರಿ, ಹ್ಯಾಂಡ್ ಬ್ಯಾಗ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಸ್ಟ್ರಿಪ್ ಲೆಸ್ ಬ್ಲೂ ಕಲರ್‍ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟಾಪ್ ಗ್ಲಾಮರ್‍ ಜೊತೆಗೆ ಮತ್ತೇರಿಸುವಂತಹ ಲುಕ್ಸ್ ಮೂಲಕ ಅಭಿಮಾನಿಗಳನ್ನು ಫಿದಾ ಮಾಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.