Film News

ವಿಚಿತ್ರ ಪ್ರಶ್ನೆ ಕೇಳಿದ ನೆಟ್ಟಿಗನಿಗೆ ಕ್ರೇಜಿ ಕೌಂಟರ್ ಕೊಟ್ಟ ಶ್ರುತಿ ಹಾಸನ್, ನೆಟ್ಟಿಗನ ಪ್ರಶ್ನೆ ಏನು ಗೊತ್ತಾ?

ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಲೈವ್ ಸೆಷನ್ಸ್ ನಡೆಸುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸಿದ್ದಾರೆ. ಈ ವೇಳೆ ನೆಟ್ಟಿಗರಿಂದ ಬಂದಂತಹ ಅನೇಕ ಪ್ರಶ್ನೆಗಳಿಗೆ ಶ್ರುತಿ ಉತ್ತರ ನೀಡಿದ್ದಾರೆ. ಅದರಲ್ಲೊಬ್ಬ ನೆಟ್ಟಿಗ ಶ್ರುತಿ ಹಾಸನ್ ಗೆ ವಿಚಿತ್ರವಾದ ಪ್ರಶ್ನೆಯೊಂದನ್ನು ಕೇಳಿದ್ದಾನೆ. ಅದಕ್ಕೆ ಶ್ರುತಿ ಹಾಸನ್ ಸಹ ಕ್ರೇಜಿಯಾಗಿಯೇ ಉತ್ತರಿಸಿದ್ದಾರೆ. ಅಷ್ಟಕ್ಕೂ ಆ ನೆಟ್ಟಿಗ ಕೇಳಿದ ಪ್ರಶ್ನೆಯಾದರು ಏನು ಎಂಬ ವಿಚಾರಕ್ಕೆ ಬಂದರೇ,

ಸೋಷಿಯಲ್ ಮಿಡಿಯಾದಲ್ಲಿ ಶ್ರುತಿ ಸದಾ ಆಕ್ಟೀವ್ ಆಗಿರುತ್ತಾರೆ. ಸಿನೆಮಾಗಳ ಬಗ್ಗೆ ಅಪ್ಡೇಟ್ ಗಳ ಜೊತೆಗೆ ತನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಪೋಸ್ಟ್ ಮಾಡುತ್ತಿರುತ್ತಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಮತಷ್ಟು ಹತ್ತಿರವಾಗಲು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಲೈವ್ ಚಾಟ್ ಗಳನ್ನೂ ಸಹ ಮಾಡುತ್ತಿರುತ್ತಾರೆ. ಆ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸದಾ ಟಚ್ ನಲ್ಲೇ ಇರುತ್ತಾರೆ. ಇನ್ನೂ ಆಕೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುವಂತಹ ಸಮಯದಲ್ಲೇ ಅನೇಕ ವಿಚಿತ್ರವಾದ ಪ್ರಶ್ನೆಗಳು ಎದುರಾಗುತ್ತಿರುತ್ತವೆ. ಅದರಲ್ಲೂ ಕೆಲವರಂತೂ ಇಕ್ಕಟ್ಟಿಗೆ ಸಿಲುಕಿಸುವಂತಹ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಅಂತಹ ಪ್ರಶ್ನೆಗಳು ಅನೇಕ ನಟಿಯರಿಗೂ ಸಹ ಎದುರಾಗುತ್ತಿರುತ್ತದೆ. ಆದರೆ ಅದನ್ನು ಹಿರೋಯಿನ್ ಗಳು ಬುದ್ದಿವಂತಿಗೆಯಿಂದ ಸ್ಕಿಪ್ ಮಾಡುತ್ತಿರುತ್ತಾರೆ. ಇದೀಗ ಶ್ರುತಿ ಹಾಸನ್ ಗೂ ಸಹ ಅಂತಹುದೇ ಪರಿಸ್ಥಿತಿ ಎದುರಾಗಿದೆ.

ನಟಿ ಶ್ರುತಿ ಹಾಸನ್ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ನೆಟ್ಟಿಗರೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಆಕೆಗೆ ಚಿಕ್ಕಂದಿನ ಪೊಟೋ, ರೆಡ್ ಡ್ರೆಸ್ ನಲ್ಲಿರುವ ಪೊಟೋ, ಭಾಯ್ ಪ್ರೆಂಡ್ ಜೊತೆಗೆ ಇರುವ ಪೊಟೋ ಹಂಚಿಕೊಳ್ಳುವಂತೆ ಕೇಳಿದ್ದಾರೆ. ಇದೇ ರೀತಿ ಅನೇಕ ಪ್ರಶ್ನೆಗಳು ಎದುರಾಗಿದೆ. ಇದೇ ಸಮಯದಲ್ಲಿ ನೆಟ್ಟಿಗನೋರ್ವ ವಿಚಿತ್ರವಾದ ಪ್ರಶ್ನೆಯೊಂದನ್ನು ಕೇಳಿದ್ದಾನೆ. ನಿಮ್ಮ ಪಾದಗಳ ಪೊಟೋ ಹಂಚಿಕೊಳ್ಳಿ ಎಂದು ಕೋರಿದ್ದಾನೆ. ಅದಕ್ಕೆ ಶಾಕ್ ಆದ ಶ್ರುತಿ ಹಾಸನ್ ಒಂದು ಕ್ರೇಜಿ ಪೊಟೋ ಶೇರ್‍ ಮಾಡಿದ್ದಾರೆ. ಆಕೆ ಹಂಚಿಕೊಂಡ ಪೊಟೋ ಒಂದು ವಿಚಿತ್ರ ಪ್ರಾಣಿಯದ್ದಾ ಅಥವಾ ಏಲಿಯನ್ ಪಾದಗಳ ಮಾದರಿಯಲ್ಲಿ ವಿಚಿತ್ರವಾದ ಪೊಟೋ ಶೇರ್‍ ಮಾಡಿದ್ದಾರೆ. ಇದರಿಂದ ನೆಟ್ಟಿಗ ಶಾಕ್ ಆಗಿದ್ದಾನೆ ಎನ್ನಲಾಗಿದೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಶ್ರುತಿ ಹಾಸನ್ ಗೆ ಅನೇಕರು ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲೊಬ್ಬ ಶ್ರುತಿ ಹಾಸನ್ ಮೊಬೈಲ್ ನಂಬರ್‍ ಕೇಳಿದ್ದಾನೆ. ಮತ್ತೋರ್ವ ನೀನು ಕುಡಿಯುವ ವೈನ್ ಬಾಟಲ್ ಪೊಟೋ, ಶಾಂತಾನು ಜೊತೆಗಿರುವ ಸೆಕ್ಸಿ ಪೊಟೋ ಕಳುಹಿಸಿ ಎಂದು ವಿಚಿತ್ರವಾಗಿ ಕೇಳಿದ್ದಾರೆ. ಇನ್ನೂ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಶ್ರುತಿ ಬ್ರಿಲಿಯಂಟ್ ಆಗಿಯೇ ಉತ್ತರ ನೀಡುತ್ತಿರುತ್ತಾರೆ.  ಸದ್ಯ ಶ್ರುತಿ ಹಾಸನ್ ಸಲಾರ್‍ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಆಕೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

Most Popular

To Top