ಧರ್ಮಸ್ಥಳದ ಸೌಜನ್ಯ ಪ್ರಕರಣ ನಾನೇ ಸ್ಟಡಿ ಮಾಡ್ತೀನಿ ಎಂದ ಸಿದ್ದರಾಮಯ್ಯ, ಮೇಲ್ಮನವಿ ಅವಕಾಶದ ಬಗ್ಗೆ ಗಮನಿಸುತ್ತೇನೆ ಎಂದ ಸಿಎಂ…!

Follow Us :

ಸುಮಾರು ದಶಕಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಎಂಬ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ತೀರ್ಪನ್ನು ಸಹ ನೀಡಿತ್ತು. ಇದೀಗ ಈ ತೀರ್ಪಿನ ಬಗ್ಗೆ  ಸಿದ್ದರಾಮಯ್ಯ ಮಾತನಾಡಿದ್ದಾರೆ. ನಾನು ಲಾಯರ್‍ ಆಗಿ ಹೇಳಬೇಕಾದರೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಅಪೀಲ್ ಹೋಗಬೇಕು. ಸಿಪಿಐ ಕೋರ್ಟ್ ನೀಡಿದ ತೀರ್ಪನ್ನು ಓದಿ ಅದಕ್ಕೆ ಅವಕಾಶ ಇದೆಯೇ ಎಂಬುದನ್ನು ನೋಡುತ್ತೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಯಮಯ್ಯ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ರವರು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐ ಗೆ ಕೊಡಲಾಗಿತ್ತು. ಆದರೆ ಸೌಜನ್ಯಾಳ ಪೋಷಕರು ಮತ್ತೆ ತನಿಖೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅದರಂತೆ ಕಾನೂನು ಪ್ರಕಾರ ಏನಾಗಬೇಕು ಎಂಬುದನ್ನು ನೋಡಿ ಮುಂದಿನ ನಿರ್ಧಾರವನ್ನು ಮಾಡುತ್ತೇವೆ. ನಾನು ಸಹ ಲಾಯರ್‍ ಆಗಿದ್ದು, ಲಾಯರ್‍ ಆಗಿ ಹೇಳಬೇಕಾದರೇ ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಅಪೀಲ್ ಮಾಡಬೇಕು ಎಂದು ತಿಳಿಸಿದ್ದಾರೆ. ಸಿಬಿಐ ಕೋರ್ಟ್ ನೀಡಿರುವ ತೀರ್ಪನ್ನು ನಾನು ನೋಡಿಲ್ಲ. ಸೌಜನ್ಯಾಳ ಪೋಷಕರು ತೀರ್ಪಿನ ಪ್ರತಿಯನ್ನು ನೀಡಿದ್ದಾರೆ. ಅದನ್ನು ನಾನು ಲಾಯರ್‍ ಆಗಿ ಓದುತ್ತೇನೆ. ಹೈಕೋರ್ಟ್‌ಗೆ ಮೇಲ್ಮನವಿಗೆ ಹೋಗಲು ಅವಕಾಶ ಇದೆಯೇ ಎಂಬುದನ್ನು ನೋಡುತ್ತೇನೆ ಎಂದು ಹೇಳಿದರು. ಆ ಮೂಲಕ ಸೌಜನ್ಯ ಪ್ರಕರಣವನ್ನು ಮತ್ತೆ ತನಿಖೆ ನಡೆಸುವ ಸುಳಿವನ್ನು ನೀಡಿದ್ದಾರೆ.

ಇನ್ನೂ ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್‍ ಸೌಜನ್ಯ ಕೊಲೆ ಪ್ರಕರಣವನ್ನು ಮತ್ತೆ ತನಿಖೆಗೆ ವಹಿಸುವ ಯಾವುದೇ ಯೋಚನೆ ಮಾಡಿಕ್ಕ. ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಸಹ ನನಗೆ ಸೂಚನೆ ಬಂದಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್‍ ನಟ ದುನಿಯಾ ವಿಜಯ್ ರವರೂ ಸಹ ಸೌಜನ್ಯ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪ್ರತಿ ವರ್ಷ ನಾನು ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದು ಅಭ್ಯಾಸವಾಗಿತ್ತು. ಆದರೆ ಸೌಜನ್ಯಳ ಪ್ರಕರಣದ ಬೆಳವಣಿಗೆ ನೋಡಿ ಸೌಜನ್ಯ ಹಾಗೂ ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಎಂದು ಅನ್ನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ ಯಾರು ಅದನ್ನು ಮರೆಮಾಚಲು ಸಾಧ್ಯವಿಲ್ಲ-ಬುದ್ದ ಎಂದು ಟ್ವೀಟ್ ಮಾಡಿದ್ದಾರೆ.