ಕುಡಿತಕ್ಕೆ ದಾಸಳಾಗಿದ್ದೆ, ಆದರೆ ಡ್ರಗ್ಸ್ ಬಳಸುತ್ತಿರಲಿಲ್ಲ ಎಂದ ಸ್ಟಾರ್ ನಟಿ ಶ್ರುತಿ ಹಾಸನ್, ವೈರಲ್ ಆದ ಕಾಮೆಂಟ್ಸ್….!

Follow Us :

ಸ್ಟಾರ್‍ ನಟಿ ಶ್ರುತಿ ಹಾಸನ್ ಕೆರಿಯರ್‍ ಆರಂಭದಲ್ಲಿ ಸೋಲುಗಳನ್ನು ಕಂಡರೂ ಸಹ ಬಳಿಕ ಆಕೆ ಲಕ್ಕಿ ಹಿರೋಯಿನ್ ಆಗಿ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ಪಡೆದುಕೊಂಡು ಸ್ಟಾರ್‍ ಡಂ ಗಿಟ್ಟಿಸಿಕೊಂಡರು. ಮಲ್ಟಿ ಟ್ಯಾಲೆಂಟೆಡ್ ಆಗಿರುವ ಶ್ರುತಿ ಹಾಸನ್ ಕಾಲಿವುಡ್ ಸ್ಟಾರ್‍ ನಟ ಲೋಕನಾಯಕ ಕಮಲ್ ಹಾಸನ್ ರವರ ಪುತ್ರಿಯಾದರೂ ಸಹ ಆಕೆ ಸ್ವಂತ ಪ್ರತಿಭೆಯಿಂದ ಸಕ್ಸಸ್ ಕಾಣಲು ಬಯಸಿದಂತಹ ನಟಿ. ತಂದೆ ಅಭಿನಯದ ಹೆ ರಾಮ್ ಎಂಬ ಸಿನೆಮಾದಲ್ಲಿ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸದ್ಯ ಆಕೆ ತಮಿಳು, ತೆಲುಗು ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ.

ಸೌತ್ ಸಿನಿರಂಗದಲ್ಲಿ ಮೈ ಲೈಫ್ ಮೈ ರೂಲ್ಸ್ ಎಂದು ಬದುಕುವಂತಹ ನಟಿಯರಲ್ಲಿ ಶ್ರುತಿ ಹಾಸನ್ ಮೊದಲ ಸ್ಥಾನದಲ್ಲಿರುತ್ತಾರೆ. ಏನೇ ಇದ್ದರೂ ಆಕೆ ನೇರವಾಗಿಯೇ ಹೇಳುವಂತಹ ವ್ಯಕ್ತಿತ್ವ ಹೊಂದಿದ್ದಾರೆ. ಸದ್ಯ ಆಕೆ ತನ್ನ ಪ್ರಿಯಕರ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಎಂಬಾತನೊಂದಿಗೆ ಸಾರ್ವಜನಿಕವಾಗಿಯೇ ಲಿವಿಂಗ್ ರಿಲೇಷನ್ ನಲ್ಲಿದ್ದಾರೆ. ಓಪೆನ್ ಆಗಿಯೇ ಅವರು ಊರೂರು ಸುತ್ತಾಡುತ್ತಿರುತ್ತಾರೆ. ಈ ವರ್ಷದಲ್ಲಿ ಶ್ರುತಿಹಾಸನ್ ಅಭಿನಯದ ವಾಲ್ತೇರು ವೀರಯ್ಯ ಹಾಗೂ ವೀರಸಿಂಹಾರೆಡ್ಡಿ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಇತ್ತೀಚಿಗಷ್ಟೆ ತೆರೆಕಂಡ ಹಾಯ್ ನಾನ್ನ ಸಿನೆಮಾದಲ್ಲೂ ಸ್ಪೇಷಲ್ ರೋಲ್ ಪ್ಲೇ ಮಾಡಿದ್ದರು. ಇದೀಗ ಆಕೆ ಸಲಾರ್‍ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಶ್ರುತಿ ಹಾಸನ್ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಸಲಾರ್‍ ಸಿನೆಮಾದ ಬಗ್ಗೆ ಮಾತನಾಡಿ ಈ ಸಿನೆಮಾ ನನಗೆ ತುಂಬಾನೆ ಪ್ರತ್ಯೇಕವಾದುದು ಎಂದಿದ್ದಾರೆ. ಅವರ ತಂದೆಯಿಂದ ಅನೇಕ ವಿಚಾರಗಳನ್ನು ಕಲಿತಿದ್ದಾಗಿ, ಕಷ್ಟದ ಸಮಯದಲ್ಲೂ ನಗುತ್ತಾ ಇರುವುದು ತನ್ನ ತಂದೆಯ ಗುಣ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಒಂದು ಕಾಲದಲ್ಲಿ ನಾನು ಸಂಪೂರ್ಣವಾಗಿ ಕುಡಿತಕ್ಕೆ ದಾಸಳಾಗಿದ್ದೆ. ಪ್ರತಿ ನಿತ್ಯ ಸ್ನೇಹಿತರೊಂದಿಗೆ ಪಬ್ ಗಳಿಗೆ ಹೋಗುತ್ತಿದ್ದೆ, ಮದ್ಯ ಸೇವನೆ ಮಾಡುತ್ತಿದೆ. ಆದರೆ ನನಗೆ ಯಾವುದೇ ರೀತಿಯ ಡ್ರಗ್ಸ್ ಅಭ್ಯಾಸ ಇರಲಿಲ್ಲ. ಕೆಲವು ದಿನಗಳ ಬಳಿಕ ಕುಡಿಯುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಕುಡಿತ ಬಿಟ್ಟೆ. ಇದೀಗ ಕುಡಿತ ಬಿಟ್ಟು 8 ವರ್ಷಗಳಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಶ್ರುತಿ ಹಾಸನ್ ಅಡಿವಶೇಷ್ ಜೊತೆಗೆ ಒಂದು ಸಿನೆಮಾ ಹಾಗೂ ಹಾಲಿವುಡ್ ನಲ್ಲಿ ದಿ ಐ ಎಂಬ ಸಿನೆಮಾ ಮಾಡುತ್ತಿದ್ದಾರೆ.