Film News

ನೀನು ಕನ್ಯೆಯೇ ಎಂಬ ನೆಟ್ಟಿಗನ ಪ್ರಶ್ನೆಗೆ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ಕೊಟ್ಟ ಶ್ರುತಿ ಹಾಸನ್…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಲೈವ್ ಸೆಷನ್ಸ್ ನಡೆಸುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಕೆ ಆಸ್ಕ್ ಮಿ ಎನಿಥಿಂಗ್ ಎಂಬ ಸೆಷನ್ ಮಾಡಿದ್ದರು. ಈ ವೇಳೆ ನೆಟ್ಟಿಗರಿಂದ ಬಂದಂತಹ ಅನೇಕ ಪ್ರಶ್ನೆಗಳಿಗೆ ಶ್ರುತಿ ಉತ್ತರ ನೀಡಿದ್ದಾರೆ. ಅದರಲ್ಲಿ ಓರ್ವ ನೀನು ಕನ್ಯೆಯೇ ಎಂಬ ಪ್ರಶ್ನೆ ಕೇಳಿದ್ದು, ಅದಕ್ಕೆ ಆಕೆ ಮೈಂಡ್ ಬ್ಲಾಕ್ ಆಗುವಂತಹ ರೀತಿಯಲ್ಲಿ ಉತ್ತರ ನೀಡಿದ್ದಾರೆ ಶ್ರುತಿ ಹಾಸನ್.

ವರ್ಷದ ಆರಂಭದಲ್ಲೇ ಒಳ್ಳೆಯ ಒಪೆನಿಂಗ್ ಕಂಡುಕೊಂಡ ಶ್ರುತಿ ಹಾಸನ್, ವಾಲ್ತೇರು ವೀರಯ್ಯ ಹಾಗೂ ವೀರಸಿಂಹಾರೆಡ್ಡಿ ಸಿನೆಮಾಗಳ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಇದೀಗ ಆಕೆ ಸಲಾರ್‍ ಸಿನೆಮಾದಲ್ಲೂ ಸಹ ನಟಿಸಿದ್ದಾರೆ. ಈಗಾಗಲೇ ಆಕೆಯ ಭಾಗದ ಶೂಟೀಂಗ್ ಸಹ ಪೂರ್ಣಗೊಳಿಸಿದ್ದಾರೆ. ಸಲಾರ್‍ ಸಿನೆಮಾದಲ್ಲಿ ಶ್ರುತಿ ಆದ್ಯ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಶ್ರುತಿ ಸದಾ ಆಕ್ಟೀವ್ ಆಗಿರುತ್ತಾರೆ. ಸಿನೆಮಾಗಳ ಬಗ್ಗೆ ಅಪ್ಡೇಟ್ ಗಳ ಜೊತೆಗೆ ತನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಪೋಸ್ಟ್ ಮಾಡುತ್ತಿರುತ್ತಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಮತಷ್ಟು ಹತ್ತಿರವಾಗಲು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಲೈವ್ ಚಾಟ್ ಗಳನ್ನೂ ಸಹ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಆಸ್ಕ್ ಮಿ ಎನಿಥಿಂಗ್ ಎಂಬ ಸೆಷನ್ ಮಾಡಿದ್ದು, ಅದರಲ್ಲಿ ನೆಟ್ಟಿಗ ಕೇಳಿದ ಪ್ರಶ್ನೆಯೊಂದಕ್ಕೆ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ಕೊಟ್ಟಿದ್ದಾರೆ.

ನಟಿ ಶ್ರುತಿ ಹಾಸನ್ ಗೆ ನೆಟ್ಟಿಗನೊಬ್ಬ ಆರ್‍ ಯೂ ವರ್ಜಿನ್ ಎಂದು ಪ್ರಶ್ನೆ ಕೇಳಿದ್ದಾನೆ. ಸಾಮಾನ್ಯವಾಗಿ ಯಾರಿಗಾದರೂ ಅಂತಹ ಪ್ರಶ್ನೆ ಕೇಳಿದರೇ ಕೋಪ ಬರುವುದು ಸಾಮಾನ್ಯ ಆದರೆ ಶ್ರುತಿ ಹಾಸನ್ ಮಾತ್ರ ಕೂಲ್ ಆಗಿಯೇ ಉತ್ತರ ನೀಡಿದ್ದಾರೆ. ಆ ಪ್ರಶ್ನೆಗೆ ಆಕೆ ಮೊದಲು ನೀನು ಸ್ಪೆಲ್ಲಿಂಗ್ ಬರೆಯುವುದನ್ನು ಕಲಿ, ವರ್ಜಿನ್ ಗೆ ಸ್ಪೆಲ್ಲಿಂಗ್ ಇದೇನಾ ಎಂದು ಕೌಂಟರ್‍ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಉತ್ತರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಮತ್ತೊಬ್ಬರು ನಿಮ್ಮೊಂದಿಗೆ ಡೇಟ್ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆಕೆ ನೋ ಎಂದು ಉತ್ತರ ನೀಡಿದ್ದಾರೆ. ಮತ್ತೋಬ್ಬರು ಶಾಂತಾನು ಗೆ ತಮಿಳು ಮಾತನಾಡಲು ಹೇಳಿ ಎಂತಲೂ, ನಿಮ್ ಪೆಟ್ ಗೆ ನೀವು ಅಂದರೇ ಇಷ್ಟಾನಾ ಅಥವಾ ಶಾಂತಾನು ಅಂದರೇ ಇಷ್ಟಾನಾ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದು, ಎಲ್ಲದಕ್ಕೂ ಶ್ರುತಿ ತನ್ನದೇ ಆದ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಸದ್ಯ ಶ್ರುತಿ ಹಾಸನ್ ಸಲಾರ್‍ ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ವರ್ಷದಲ್ಲೇ ಈ ಸಿನೆಮಾ ಬಿಡುಗಡೆಯಾಗಲಿದ್ದು, ಪ್ರಭಾಸ್ ಅಭಿಮಾನಿಗಳೂ ಸಹ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಶ್ರುತಿ ಹಾಸನ್ ಸಿನೆಮಾ ಒಂದಕ್ಕೆ ಮೂರರಿಂದ ನಾಲ್ಕು ಕೋಟಿಯ ವರೆಗೂ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಆಕೆ ಕೆರಿಯರ್‍ ವಿಚಾರದಲ್ಲಿ ಮಾತ್ರ ಆತುರ ಪಡದೆ ಅಳೆದು ತೂಗಿ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

Most Popular

To Top